ಸೋಂಧ ಶ್ರವಣಪೂಜೆ-2024/ಮುಖ್ಯಾಂಶಗಳು

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

 

ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ಬಹಳ ವೈಭವವಾಗಿ ನಡೆದು ಶ್ರಾವಣ ಮಂಗಳವಾರ ಪೂಜೆಯಂದು ವಿವಿಧ ರೀತಿಯ 108 ನಾನ ಫಲಗಳ ಸಮರ್ಪಣಾ ಪೂಜೆ ಷೋಡಷೋಪಚಾರ ಪೂಜೆ ಸುತ್ತಲಿನ ಭಕ್ತಾಧಿಗಳ ಸಮ್ಮುಖದಲ್ಲಿ ನೋಡಲು ಮನೋಹರವಾಗಿತ್ತು. ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರವು ವಿವಿಧ ಬಗ್ಗೆಯ ಪುಷ್ಪ, ಸಿಹಿ, ಚರು, ಧಾನ್ಯಗಳು, ಫಲ ಹೀಗೆ ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ಅಲ್ಲಿನ ಸುಂದರ ದೃಶ್ಯಾವಳಿಗಳನ್ನು ಇಲ್ಲಿ ಸಂಕಲಿಸಲಾಗಿದೆ.

ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರ :- ಷೋಡಷೋಪಚಾರ ಪೂಜೆ ಹಾಗೇ ಅಷ್ಟಕ್ಷೇತ್ರಗಳಲ್ಲಿ ಅಮ್ಮನವರು ವಾಸವಿರುವಂತಹ ಸೋಂಧಾ, ಶ್ರವಣ ಬೆಳಗೊಳ, ಹರಿಹಂತ ಗಿರಿ, ಅಡಗೂರು, ನಲ್ಲೂರು, ಮೂಡುಬಿದ್ರೆ ಈ ಕ್ಷೇತ್ರಗಳಲ್ಲಿ ವಾಸವಾಗಿರುವ ಖುಷ್ಮಾಂಡಿನಿ ಅಮ್ಮನವರಿಗೆ ಎಂಟು ಅರ್ಗ್ಯಗಳನ್ನ ಅರ್ಪಣೆ ಮಾಡಲಾಗಿದೆ. ನಂತರ ಅಮ್ಮನವರ 9 ಮೂಲ ಬೀಜಾಕ್ಷರಗಳಿದೆ, ಆ ಬೀಜಾಕ್ಷರಗಳಿಗೆ ಒಂದೊಂದು ಅರ್ಗ್ಯವನ್ನು ಅರ್ಪಣೆಮಾಡಲಾಗುತ್ತದೆ. ನಂತರ ಅಮ್ಮನವರ ಹತ್ತು ಅತಿಶಯ ಗುಣಗಳಿಗೆ ಅರ್ಗ್ಯವನ್ನು ಇಲ್ಲಿ ಅರ್ಪಣೆಮಾಡಲಾಗುತ್ತದೆ. ಮಹಾ ಭಾಗ್ಯವನ್ನು ಕೊಡುವಂತವರು ಹಾಗೂ ವರವನ್ನು ಕೊಡುವಂತವರು, ಎಲ್ಲ ದುಖಃಗಳನ್ನು ನಾಶ ಮಾಡುವಂತವರು, ರೋಗವನ್ನು ನಾಶ ಮಾಡುವಂತವರು, ಶತ್ರುಗಳ ಉಪಸರ್ಗವನ್ನು ನಾಶ ಮಾಡುವಂತವರು, ಪುತ್ರ ರತ್ನವನ್ನು ಕೊಡುವಂತವರು, ವಿದ್ಯೆಯನ್ನು ಅನುಗ್ರಹ ಮಾಡುವಂತವರು, ರಾಹು ಗ್ರಹ ಶಾಂತಿಯನ್ನು ಮಾಡುವಂತವರು, ಅಭಿಷ್ಠಫಲವನ್ನು ನಮಗೆ ನೀಡುವಂತಹ ಖುಷ್ಮಾಂಡಿನಿ ಅಮ್ಮನವರಿಗೆ ಹತ್ತು ಅರ್ಗ್ಯಗಳನ್ನಿಇಲ್ಲಿ ದಶ ವಿಷೇಶ ಗುಣಗಳಿಗೆ ಅರ್ಗ್ಯ ನೀಡಲಾಗುತ್ತದೆ. ನಂತರ 12 ಭುಜಗಳುಳ್ಳ ತಕ್ಕಂತಹ ಖುಷ್ಮಾಂಡಿನಿ ಅಮ್ಮನವರಿಗೆ 12 ಅರ್ಗ್ಯಗಳನ್ನು ಕೊಡಲಾಗುತ್ತೆ, ಅ ನಂತರ ಪೂಜಾ ವಿಸರ್ಜನ ಆರತಿ ಇತ್ಯಾದಿಗಳು ನೆರವೇರುತ್ತದೆ ಎಂದು ತಿಳಿಸಿದರು.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್