-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಧರ್ಮಯಾತ್ರೆ
ಜೈ ಜಿನೇಂದ್ರ ವೀಕ್ಷಕರೆ, ಐತಿಹಾಸಿಕ ಹಿನ್ನೇಲೆವುಳ್ಳ ಶ್ರೀ ಕ್ಷೇತ್ರ ಗೊಮ್ಮಟಗಿರಿಯ ಭಗವಾನ್ ಬಾಹುಬಲಿಸ್ವಾಮಿಯ 75 ನೇ ಮಹಾಮಸ್ತಕಾಭಿಷೇಕ ಅಮೃತ ಮಹೋತ್ಸವದ ಹಾಗೂ ಜಾತ್ರಾ ಮಹೋತ್ಸವದ ಆತ್ಮೀಯ ಅಹ್ವಾನ.
ದಿನಾಂಕ 12-12-2024 ರಿಂದ 15-12-2024 ರವರೆಗೆ ನಡೆಯಲಿರುವ ಈ ಮಹೋತ್ಸವದಲ್ಲಿ 13 ರಿಂದ 15 ರವರೆಗೆ ಮಹಾಮಸ್ತಕಾಭಿಷೇಕ ವೈಭವವಾಗಿ ನಡೆಯಲಿದೆ. ದಿನಾಂಕ 12-12-2024 ರಂದು ಪ್ರಥಮ ಭಾರಿಗೆ ಗೊಮ್ಮಟಗಿರಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಗಳವರ ಮಂಗಲ ಪುರ ಪ್ರವೇಶ ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು ಬೆಳಗ್ಗೆ 10:30 ಕ್ಕೆ ಸರಿಯಾಗಿ ಪರಮ ಪೂಜ್ಯ ಅರ್ಹದ್ದಾಸರ ಸಭಾಮಂಟಪದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಶ್ರೀಕ್ಷೇತ್ರ ಕನಕಗಿರಿ, ಪರಮ ಪೂಜ್ಯ ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಶ್ರೀಕ್ಷೇತ್ರ ಹೊಂಬುಜ, ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀಕ್ಷೇತ್ರ ಶ್ರವಣ ಬೆಳಗೊಳ ಹಾಗೂ ಸಮಸ್ತ ಭಟ್ಟಾರಕರ ದಿವ್ಯ ಸಾನಿಧ್ಯದಲ್ಲಿ ಶ್ರೀಕ್ಷೇತ್ರ ಸುತ್ತೂರು ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಶಿವಾರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮೀಜಿಗಳವರಿಂದ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮೇಘಾಲಯದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಸಿ ಹೆಚ್ ವಿಜಯಶಂಕರ್ ರವರು ನಡೆಸಿಕೊಡಲಿದ್ದು ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಪದ್ಮವಿಭೂಷಣ ರಾಜ್ಯಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರು, ಧರ್ಮಾಧಿಕಾರಿಗಳು ಶ್ರೀಕ್ಷೇತ್ರ ಧರ್ಮಸ್ಥಳ. ಹಾಗೂ ಯೋಜನಾ ಮತ್ತು ಸಾಂಖ್ಯಿಕ ಸಚಿವರಾದ ಸನ್ಮಾನ್ಯ ಶ್ರೀ ಡಿ ಸುಧಾಕರ್ ರವರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಣಸೂರು ಕ್ಷೇತ್ರ ವಿಧಾನಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಜಿ ಡಿ ಹರೀಶ್ ಗೌಡರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಲೋಕಸಭಾಸದಸ್ಯರು, ಸನ್ಮಾನ್ಯ ಶ್ರೀ ಜಿ ಟಿ ದೇವೇಗೌಡ ರವರು ವಿಧಾನಸಭಾ ಸದಸ್ಯರು ಚಾಮುಂಡೇಶ್ವರಿ ಕ್ಷೇತ್ರ, ಶ್ರೀ ಡಿ ಸುರೇಂದ್ರ ಕುಮಾರ್ ರವರು ರಾಷ್ಟ್ರೀಯ ಕಾರ್ಯಧ್ಯಕ್ಷರು ಭಾರತೀಯ ಜೈನ್ ಮಿಲನ್, ಶ್ರೀಮತಿ ಕೆ ಎಸ್ ಶೃತಿರವರು ಅಧ್ಯಕ್ಷರು ಹಳೇಬೀಡು ಗ್ರಾಮಪಂಚಾಯಿತಿ ಇವರುಗಳು ಭಾಗವಹಿಸಲಿದ್ದಾರೆ.
ದಿನಾಂಕ : 14-12-2024 ರಂದು ಅಮೃತ ಕುಟೀರ ಉದ್ಗಾಟನೆಯನ್ನು ಸನ್ಮಾನ್ಯ ಶ್ರೀ ಹೆಚ್ ಸಿ ಮಹದೇವಪ್ಪನವರು ನಡೆಸಿ ಕೊಡಲಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಇವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಡಿ ಸುಧಾಕರ್ ರವರು ನಡೆಸಿಕೊಡಲಿದ್ದಾರೆ.
ದಿನಾಂಕ 15-12-2024 ರಂದು ಸಮಸ್ತ ಭಟ್ಟಾರಕರ ದಿವ್ಯ ಸಾನಿಧ್ಯದಲ್ಲಿ ಬೃಹತ್ ಸಮವಸರಣ ನಿರ್ಮಾಣದ ಭೂಮಿ ಪೂಜೆ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೊಮ್ಮಟ ಗಿರಿ ಸೇವಾ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಸ್ ಡಿ ಮನ್ಮಥ್ ರಾಜ್ ರವರು ವಹಿಸಲಿದ್ದಾರೆ. ಹಾಗೂ ಅನೇಕ ಗಣ್ಯಮಾನ್ಯರು ಭಾಗವಹಿಸಲಿರುವ ಈ ಮಹೋತ್ಸವದಲ್ಲಿ ತಾವುಗಳೇಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














