ಜಿನೇಂದ್ರ ಎಂಎಂ

ಚಿತ್ತ ಜಿನೇಂದ್ರನೆಂದೆ ಖ್ಯಾತಿಯಾದ ಜಿನೇಂದ್ರರವರು ಕರ್ನಾಟಕ ಲಲಿತ ಕಲಾ ಆಕಾಡೆಮಿ ಜೊತೆಗೂಡಿ ತಾವು ಹುಟ್ಟಿ ಬೆಳೆದ ಮಲೆನಾಡಿನ ಶಿವಮೊಗ್ಗದಲ್ಲಿ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನವನ ಫೆಬ್ರವರಿ 4, 2017ರಂದು ಏರ್ಪಡಿಸಿದರು. ಅವರು ಚಿತ್ರಕಲಾ ಪ್ರದರ್ಶನ ಒಂದೆಅಲ್ಲಾ ತಮ್ಮಂತೆ ಕಲಾವಿದರಾಗ ಬೇಕೆಂದು ಆಸೆ ಮೂಟೆ ಹೊತ್ತುಕೊಡು ಬೆಳೆಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ಚಿತ್ರಕಲಾ ಸ್ಪರ್ಧೆಯನ್ನು ಸಹ ಏರ್ಪಡಿಸಿದರು.

ಈ ಸ್ಪರ್ಧೆಗೆ ಒಳ್ಳೆಯ ಪರ್ತಿಕ್ರಿಯೆ ದೊರಕಿದು, ತಂದೆ ತಾಯಿಗಳು ನಾ ಮುಂದು ತಾ ಮುಂದು ಎನ್ನುತ್ತಾ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸುತ್ತಿದ್ದರು.  ಅನೇಕ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ತಮ್ಮ ಸುಂದರ ಚಿತ್ರಕಲೆ ಮೂಲಕ ಬಣ್ಣದ ಲೋಕವನ್ನೇ ಸೃಷ್ಟಿಸಿದ್ದಾರೆ.

ಇಂತಹ ವೈವಿಧ್ಯಮಯ ವಿಶಿಷ್ಟ ಪ್ರತಿಭೆಯುಳ್ಳ ಜಿನೇಂದ್ರರವರ ವಿಶಿಷ್ಟ ರೀತಿಯವರು ಕಲಾ ಪ್ರದರ್ಶನವನ್ನ ನಾವಿಂದು ನೋಡೋಣ ಬನ್ನಿ.

ಕಾರ್ಯ ಕ್ರಮದಲ್ಲಿ ಭಾಗವಹಿಸದವರು ನೊಂದಿಕೊಳ್ಳ ಬೇಕಾಗಿಲ್ಲ ಈ ಸುದ್ದಿಯನ್ನು ನೋಡಿ ಅವರಿಗೆ ಪ್ರೋತ್ಸಾಹದಾಯಕ ನುಡಿಗಳನ್ನು ಕಮೆಂಟ್ ಮೂಲಕ ತಿಳಿಸಬಹುದು.

(ಜಿನೇಂದ್ರರವರಜೀವನ ಚರಿತ್ರೆ ಮತ್ತು ಅವರು ನಡೆದುಬಂದ ದಾರಿಯ ಬಗ್ಗೆ ವಿಡಿಯೋದಲ್ಲಿ ತೊರಿಸಲಾಯಿತ್ತು. ನಂತರ ಅವರ ಸ್ನೇಹಿತರಾದ ನಿರಂಜನ್ ರವರು ವೇದಿಕೆ ಮೇಲೆ ಮಾತನಾಡಿದರು)

ನಾಡೋಜ ಡಾ|| ಹಂಪ ನಾಗರಾಜ್ ರವರು, ಖ್ಯಾತ ಶಿಲ್ಪಿಗಳಾದ ಶ್ರೀ ಕಾಶಿನಾಥ್ ಅಜೇಯ ದಿನಪತ್ರಿಕೆಯ ಸಂಪಾದಕರಾದ ಶ್ರೀ ಎಮ್. ಶ್ರೀನಿವಾಸ್, ಸರ್ಕಾರಿ ಪದವಿ ಪೂರ್ವಕ ಕಾಲೇಜಿನ ಪ್ರಾಧ್ಯಾಪಕರಾದ ಡಾ|| ಶೈಲಜ ಹೊಸುಳ್ಳೆ, ಡಿ.ವಿ.ಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಎಸ್.ಸಿ ಗೌರಿಶಂಕರ್ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಲಲಿತ ವೆಂಕಟೇಶ್ ಇವರುಗಳು ಸಂವಾದ ಮತ್ತು ಚರ್ಚೆಯಲ್ಲಿ ಭಾಗವಹಿಸಿದವರು. ಶ್ರೀ ಮಂಜಯ್ಯರವರು ಗಣ್ಯರನ್ನು ಸ್ವಾಗತಿಸಿದರು.

ವಿಘ್ನವಿನಾಶಕ ವಿಘ್ನೇಶನ ಚಿತ್ರ ಬಿಡಿಸುವುದರ ಮೂಲಕ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮವನ್ನು ಚಾಲನೆಮಾಡಲಾಯಿತ್ತು. ಹಾಗೂ ವೇದಿಕೆ ಗಣ್ಯರೆಲ್ಲರೂ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.  ಚಿತ್ರಕಲೆಯಲ್ಲಿ ಭಾಗವಹಿಸಿ ಗೆದ್ದಂತ್ತಹ ಮಕ್ಕಳಿಗೆ ಬಹುಮಾನ ವಿತ್ತರಿಸಲಾಯಿತು. ಚಿತ್ತ ಜಿನೇಂದ್ರರವರು ಚಿತ್ರ ವಿಶ್ಲೇಷಣೆ ಮಾಡಲಾಯಿತು. ಗಣ್ಯರಿಗೆ ಸನ್ಮಾನಿಸಲಾಯಿತು.

ನಂತರ ಜ್ವಾಲಮಾಲ ನ್ಯೂಸ್ ಜೊತೆ ಮಾತನಾಡಿ (ಶಿವಮೊಗ್ಗದಲ್ಲಿನ ಚಿತ್ರಕಲೆಯ ಸಾಧನೆಯ ಬಗ್ಗೆ ವಿವರಿಸಿದರು)

ಅವರ ತಂದೆ ಮತ್ತು ತಾಯಿ ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಮಾತನಾಡಿ (ತಮ್ಮ ಮಗನ ಬಡತನದಿಂದ  ಬೆಳೆದುಬಂದ ದಾರಿಯ ಬಗ್ಗೆ ತಿಳಿಸಿದರು)