-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಬಂಧುಗಳೇ ಬಹಳ ವರ್ಷಗಳಿಂದ ಪಾಳುಬಿದ್ದು ಕೇವಲ ವಾರ್ಷಿಕ ಪೂಜೆಯನ್ನಷ್ಟೆ ಕಂಡಿದ್ದ ಬಸದಿ ಹೊಸಕೋಟೆ ಇತ್ತೀಚೆಗಷ್ಟೇ ಜೀರ್ಣೋದ್ದಾರಗೊಂಡು ಶ್ರೀ ವಿಜಯೇಶ್ವರ ಬಾಹುಬಲಿ ತೀರ್ಥ ಕಾವೇರಿ ದಾಮವಾಗಿ ಸುಂದರ ರೂಪ ಪಡೆಯುವ ಹಾದಿಯಲ್ಲಿದೆ. ಇಂತಹ ರಮಣೀಯ ವಾತಾವರಣದಲ್ಲಿ ಒಂದು ದಿನ ಸೇರಿ ಭಗವಾನ್ ಬಾಹುಬಲಿ ಪಾದಪೂಜೆ ನೋಡುವ ಮಧುರ ಕ್ಷಣಗಳು ಬಾಹುಬಲಿ ಸ್ವಾಮಿಯ ಪದದಳದಲ್ಲಿ ತ್ರಿವೇಣಿ ಸಂಗಮದಲ್ಲಿ ಬಾಗಿಣ ಸಮರ್ಪಿಸುವ ಕಾರ್ಯಕ್ರಮವನ್ನು ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್ ಏರ್ಪಡಿಸುವುದರ ಮೂಲಕ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮಿಗಳವರು, ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು ಭಗವಾನ್ ಬಾಹುಬಲಿಗೆ ಪಾದ ಪೂಜೆ ನೆರವೇರಿಸಿದರು. ಶ್ರೀಗಳವರ ನೇತೃತ್ವದಲ್ಲಿ ಮಹಿಳೆಯರು ಹಾಗೂ ಗಣ್ಯರಿಂದ ಬಾಗಿಣ ಸಮರ್ಪಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಶ್ರಿಗಳವರು ಶ್ರೀ ಡಿ ಸುರೇಂದ್ರ ಕುಮಾರ್ ರವರು ಪ್ರಸನ್ನ ಕುಮಾರ್ ರವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಟ್ರಸ್ಟ್ ನ ಪದಾಧಿಕಾರಿಗಳು ಸೇರಿ ಸಕಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೇರವೆರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಮೈಸೂರು, ಬೆಂಗಳೂರು, ತುಮಕೂರು, ಬೆಳ್ಳೂರು, ಮಂಡ್ಯ ಜೈನ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ಸಂಕ್ಷಿಪ್ತ ಕ್ಷಣಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಪರಮ ಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮಿಗಳವರು ಮಾತನಾಡಿ : ನಮ್ಮ ಬಸದಿಹೊಸಕೋಟೆ ಬಾಹುಬಲಿ ಸ್ವಾಮಿಮೂರ್ತಿಯನ್ನು 12 ನೇ ಇಸವಿಯಲ್ಲಿ ಗಂಗರ ದಂಡನಾಯಕ ಸ್ಥಾಪಿಸುತ್ತಾರೆ. ಇಲ್ಲಿ ಹಲವಾರು ಜೈನ ಬಸದಿಗಳನ್ನ ಉಲ್ಲೇಕದ ಪ್ರಕಾರ ಐದು ಬಸದಿಗಳು ಮಾನಸ್ಥಂಭಗಳನ್ನ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಕಾಲ ಕ್ರಮೇಣ ಜನರು ಅವರ ಅನಿವಾರ್ಯ ಕಾರಣದಿಂದ ವಲಸೆ ಹೋಗಿರುತ್ತಾರೆ. ನೂರಾರು ವರ್ಷಗಳಿಂದ ಹಿಂದೆ ಪ್ರಚಲಿತಕ್ಕೆ ಬರುತ್ತದೆ. ಸುತ್ತಮುತ್ತಲಿನ ಸಮಾಜದವರಿಗೆ ಇಲ್ಲಿ ಬಾಹುಬಲಿ ಸ್ವಾಮಿ ಇರುವುದು ಗೊತ್ತಾಗುತ್ತದೆ. ಮಂಡ್ಯ, ಮೈಸೂರು ಪಾಂಡವಪುರ ಎಲ್ಲ ಸುತ್ತಮುತ್ತಲಿನ ಜೈನ ಸಮಾಜದವರು ಮಸ್ತಕಾಭಿಷೇಕ ಮತ್ತು ಪೂಜೆಯನ್ನು ಮಾಡಿ ಅಗಾಗ ಬಂದು ಪೂಜೆಯನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ಇಲ್ಲಿನ ಗ್ರಾಮದವರು ಅವರಿಗೆ ತಿಳಿದ ಹಾಗೆ ಬಾಹುಬಲಿ ಸ್ವಾಮಿಯ ಪೂಜೆಯನ್ನು ಮಾಡಿ ರಕ್ಷಣೆಯನ್ನು ಮಾಡಿಕೊಂಡು ಬಂದಿದ್ದಾರೆ. ಅವರ ಸಹಕಾರ ಸೈಯೋಗದಿಂದ ಬಾಹುಬಲಿ ಸ್ವಾಮಿಯ ಪೂಜೆಯು ನಡೆಯುತ್ತಿತ್ತು.
ಶ್ರೀ ಡಿ ಸುರೇಂದ್ರ ಕುಮಾರ್ ರವರು :- ಯುಗಳ ಮುನಿಗಳು ಚಾತುರ್ಮಾಸದಲ್ಲಿ ಬರುವಂತಹ ಹಣದಲ್ಲಿ 1 ಕೋಟಿ ರೂಗಳನ್ನು ಬಸದಿ ಹೊಸಕೋಟೆಗೆ ನೀಡುತ್ತೇನೆ ಎಂದು ಹೇಳಿದ್ದರು. ಧರ್ಮೋತ್ತಾನ ಟ್ರಸ್ಟ್ ಬಗ್ಗೆ ಹೇಳುವುದಾದರೆ ಈ ಟ್ರಸ್ಟ್ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














