ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಧರ್ಮ ಬಂಧುಗಳೇ ಅಹಿಂಸ ಪದರಮೋಧರ್ಮ ಖ್ಯಾತಿಯ ಪರಮ ದಿಗಂಬರ ಜೈನ ಧರ್ಮದ ಪ್ರಾಚೀನ ಪುಣ್ಯ ಕ್ಷೇತ್ರ ಭಗವಾನ್ ಶ್ರೀ ವಿಜಯ ಪಾರ್ಶ್ವನಾಥ ಸ್ವಾಮಿಯ ನಿರ್ವಾಣ ಕಲ್ಯಾಣ ಮಹೋತ್ಸವದ ಪ್ರಯುಕ್ತ ಮುಕುಟ ಸಪ್ತಮಿ ಮಹೋತ್ಸವ ಕಲ್ಯಾಣ ಪೂಜೆಯನ್ನು 2024 ಆಗಸ್ಟ್ 10 ಹಾಗೂ 11 ರಂದು ವಿಶೇಷ ಆರಾಧನೆ ಪೂಜೆ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಪರಮ ಪೂಜ್ಯ ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿಗಳವರ ನೇತೃತ್ವದಲ್ಲಿ ಅನೇಕ ವಿದ್ವಾಂಸರು ಗಣ್ಯರು ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರುಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು. ಅಷ್ಟೇ ಅಲ್ಲದೇ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ನೂತನ ಪೀಠಾಧಿಪತಿಗಳಾದ ಪರಮ ಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪ್ರಥಮ ಬಾರಿಗೆ ಶ್ರೀಕ್ಷೇತ್ರ ಕನಕಗಿರಿಯ ಮಂಗಳ ಪುರ ಪ್ರವೇಶ ನಡೆದು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂಲ ಪ್ರತಿಮೆಗೆ 108 ಮಂಗಳ ಮಹಾಕಳಶಗಳಿಂದ ಅಭಿಷೇಕ ಮಹಾಪೂಜೆ ದೇವಿ ಪದ್ಮಾವತಿ ಅಮ್ಮನವರಿಗೆ ಜ್ವಾಲಮಾಲಿನಿ ಅಮ್ಮ ನವರಿಗೆ ಹಾಗೂ ಖುಷ್ಮಾಂಡಿನಿ ಅಮ್ಮನವರಿಗೆ ಹಾಗೂ ಬ್ರಹ್ಮ ದೇವರಿಗೆ ವಿಶೇಷ ಷೋಡಶೋಪಚಾರ ಪೂಜೆ ನಡೆಯಿತು.
ಭಗವಾನ್ ಶ್ರೀವಿಜಯ ಪಾರ್ಶ್ವನಾಥ ಸ್ವಾಮಿಯ ಮೂಲ ಬಸದಿಯ ನೂತನ ಶಿಲಾಮಯ ಮುಖ ಮಂಟಪ ಉದ್ಘಾಟನೆ ಹಾಗೂ ನೂತನ ಅತಿಥಿ ಭವನ ಉದ್ಘಾಟನೆ ನಿರ್ಮಾತ್ರದಾನಿಗಳ ಕೊಡುಗೆಯೊಂದಿಗೆ ನಡೆಯಿತು.
ನಂತರ ಧಾರ್ಮಿಕ ಸಭಾಕಾರ್ಯಕ್ರಮ ನಡೆದು ಪರಮ ಪೂಜ್ಯ ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿಗಳವರ ಪಾವನ ಸಾನಿಧ್ಯ ಪರಮ ಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀಸಧರ್ಮ ಸುರಾನ ಮಾರುತಿ ಫಾರ್ಮ ಕಂಪನಿ ಬೆಂಗಳೂರು ಹಾಗೂ ಅನೇಕ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2023-24 ನೇ ಸಾಲಿನ ಶೈಕ್ಷಣಿಕ ಸಾಧನೆಗಾಗಿ SSLC ಮತ್ತು PUC ವಿದ್ಯಾರ್ಥಿಗಳಿಗೆ ಶ್ರೀಕ್ಷೇತ್ರದ ಶ್ರೀ ಜೈನ್ ಎಜುಕೇಶನ್ ಸೊಸೈಟಿವತಿಯಿಂದ ಕೀರ್ತಿ ಸನ್ಮಾನ ಏರ್ಪಡಿಸಲಾಗಿತ್ತು. ಇಂತಹ ಅನೇಕ ಸಮಾಜಿಕ ಕಾರ್ಯಕ್ರಮಗಳೊಂದಿಗೆ ಶ್ರೀಕ್ಷೇತ್ರದಲ್ಲಿ ವಿಜೃಂಭಣೆಯಿಂದ ಮುಕುಟ ಸಪ್ತಮಿ ಮಹೋತ್ಸವ ನಡೆಯಿತು.
ಪರಮ ಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರು ಸಭೆಯನ್ನು ಉದ್ದೇಶಿಸಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಪರಮ ಪೂಜ್ಯ ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿಗಳವರು ಆಶೀರ್ವಚನ ನೀಡಿದರು.
ಶ್ರೀ ಪಾರ್ಶ್ವನಾಥ ಟೂರಿಸ್ಟ್ ವತಿಯಿಂದ ದಿನಾಂಕ 16-09-2024 ರಿಂದ 19-09-2024ರ ವರೆಗೆ ವಿಮಾನದಲ್ಲಿ ಶ್ರೀ ಸಮ್ಮೇದ ಶಿಕರ್ಜಿ ಅಯೋಧ್ಯಾ ಪ್ರವಾಸ, 24-09-2024 ರಿಂದ 27-09-2024 ರ ವರೆಗೆ ಸಿದ್ದಕ್ಷೇತ್ರ ಗಿರಿನಾರ್ ಯಾತ್ರಾ ಪ್ರವಾಸ ಹಾಗೂ ರೈಲಿನಲ್ಲಿ ಸಂವೇದ ಶಿಕರ್ಜಿಯ ಯಾತ್ರಾ ಪ್ರವಾಸವನ್ನು ದಿನಾಂಕ 1-10-2024 ರಿಂದ 12-10-2024 ರ ವರೆಗೆ ಮೈಸೂರಿನಿಂದ ಹಾಗೂ ಬೆಂಗಳೂರಿನಿಂದ 19-10-2024 ರಿಂದ 26-10-2024 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಅಷ್ಟೆ ಅಲ್ಲದೇ ವಿಮಾನದಲ್ಲಿ 04-11-2024 ರಿಂದ 08-11-2024 ರ ವರೆಗೆ ರಾಜಸ್ಥಾನ ಯಾತ್ರೆ ಅವಕಾಶ ಕೂಡ ಇದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ. ಬಿ ಜಿ ಸುವೀರ್ ಜೈನ್.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














