ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಮಹದೇವ್ ದೇಶ್ಕರ್ :- ಈ ಕ್ಷೇತ್ರದ ಮಹಿಮೆ ಅಪಾರ, ನಮ್ಮ ಸುತ್ತೂರಿನಲ್ಲಿ ಒಂದು ಕಾರ್ಯಕ್ರಮದ ನಿಮಿತ್ತ ಇಲ್ಲಿನ ಅರ್ಚಕರಾದಂತಹ ನಮ್ಮ ದೇವಚಂದ್ರಯ್ಯ ನವರು ಕ್ಷೇತ್ರದ ಬಗ್ಗೆ ತಿಳಿಸಿಕೊಟ್ಟರು. ಜನ ಆರ್ಥಿಕವಾಗಿ ತುಂಬ ಸಮಸ್ಯೆಯಲ್ಲಿ ಇರುತ್ತಾರೆ ಅವರಿಗೆ ಜಾತಕದಲ್ಲಿ ಇರುವಂತಹ ದೋಷಗಳನ್ನ ನಿವಾರಣೆ ಮಾಡಿಕೊಳ್ಳುವುದಕ್ಕೆ ಹಣವಿರುವುದಿಲ್ಲಾ, ಇಂದು ಪರಿಹಾರವನ್ನು ಮಾಡಿಕೊಳ್ಳ ಬೇಕು ಎಂದರೆ ಜನರಿಗೆ ಸಾವಿರಾರು ರೂಪಾಯಿಗಳು ಖರ್ಚು ಹಾಗುತ್ತದೆ. ಪರಮ ಪೂಜ್ಯರ ಆಶೀರ್ವಾದದಲ್ಲಿ ಈ ಕ್ಷೇತ್ರದಲ್ಲಿ ನಡೆಯುವಂತಹ ಪೂಜೆಗಳು ಕೇವಲ 400 ರೂಪಾಯಿಗಳಿಗೆ ರಾಹು ಕೇತು ಸರ್ಪಶಾಂತಿ ಪೂಜೆಯನ್ನು ಮಾಡಿಕೊಡುತ್ತಿದ್ದಾರೆ. ನನ್ನ ಇಡೀ ಸಂತಾನ ಶ್ರೀ ಮಠಕ್ಕೆ ಗುರುಗಳ ಪಾದ ಕಮಲಕ್ಕೆ ಸದಾ ಋಣಿಗಳಾಗಿ ಇರುತ್ತೇವೆ.
ಈ ಸಂದರ್ಭದಲ್ಲಿ ನೋವಿನ ವಿಚಾರವನ್ನು ಹೇಳುತ್ತೇನೆ. ನಮ್ಮ ಮನು ಕುಲದಲ್ಲಿ ಅತ್ಯಂತ ಶ್ರೇಷ್ಠವಾದ ಧರ್ಮ ದಯಯೇ ಧರ್ಮದ ಮೂಲವಯ್ಯ ಎಂದು ಹೇಳುತ್ತೀವಿ ಅದನ್ನು ತನ್ನ ರಕ್ತದಲ್ಲಿ ಕರಗತ ಮಾಡಿಕೊಂಡಿರುವ ಧರ್ಮ ಎಂದರೆ ಅದು ಜೈನ ಧರ್ಮ ನೋವಿನ ಸಂಗತಿ ಏನು ಎಂದರೆ ಕರ್ನಾಟಕದಲ್ಲಿ ಅದರಲ್ಲು ಮೈಸೂರು ಹಳೆ ಭಾಗದಲ್ಲಿ ಹಲವಾರು ಪಳೆಯುಳಿಕೆಗಳು ಸಿಗುತ್ತವೆ. ಎಲ್ಲ ಊರಿನಲ್ಲು ಇರುವಂತಹ ಮಹಿಮೆ ಕ್ಷೀಣಿಸುತ್ತ ಬರುತ್ತಾಯಿದೆ. ಒಂದು ಹೆಮ್ಮೆಯ ವಿಷಯವೆಂದರೆ ಯಾವುದೇ ಪೋಲೀಸ್ ಠಾಣೆಯಲ್ಲೂ ಒಂದು ಕೇಸ್ ಕೂಡ ಜೈನ ಸಮುದಾಯದಿಲ್ಲಾ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














