ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಉದ್ಯಾನ ನಗರಿ ಮೈಸೂರಿನಲ್ಲಿ ಶ್ರೀ ಪದಂಪುರಿ ದಿಗಂಬರ ಜೈನತೀರ್ಥ ನಿರ್ಮಾಣ ಯೋಜನೆ ಪರಮಪೂಜ್ಯ 108 ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿಮಹಾರಾಜರ ಹಾಗೂ ಅವರ ಶಿಷ್ಯ ಪರಮಪೂಜ್ಯ ಆಚಾರ್ಯ ಶ್ರೀ 108 ಪ್ರಮುಖ ಸಾಗರ ಮುನಿಮಹಾರಾಜರವರ ಆಶೀರ್ವಾದ ಮತ್ತು ಶ್ರೀ ಕ್ಷೇತ್ರ ಕನಕಗಿರಿಯ ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಜೈನಸಮುದಾಯಕ್ಕಾಗಿ ನ್ಯೂ ಕರ್ನಾಟಕ ಜೈನದಿಗಂಬರ ಚಾರಿಟಬಲ್ ಟ್ರಸ್ಟ್ ವತಿಯಿಂದ ಒಂದೇ ಸ್ಥಳದಲ್ಲಿ ನೂತನವಾಗಿ ಧ್ಯಾನಮಂದಿರ, ಯೋಗ ಕೇಂದ್ರ, ಜಿನಾಲಯ, ತ್ಯಾಗಿ ಮುನಿ ನಿವಾಸ ಮತ್ತು ಸಮುದಾಯ ಭವನದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಕೆಲವೇ ದಿನಗಳಲ್ಲಿ ಇನ್ನುಳಿದ ಕಾಮಗಾರಿಯು ಪೂರ್ಣಗೊಳ್ಳಲಿದೆ. ಇದೇ ಪ್ರಾಂಗಣದಲ್ಲಿ ಈಗಾಗಲೇ ಆಧುನಿಕ ಸೌಲಭ್ಯಗಳನ್ನು ಒಳಗೊಂಡ 25 ಕೊಠಡಿಗಳ ಧರ್ಮಶಾಲೆಯನ್ನು ನಿರ್ಮಿಸಲಾಗಿದೆ. ಈ ಪವಿತ್ರ ಕಾರ್ಯದಲ್ಲಿ ಅನೇಕ ದಾನಿಗಳು ಮತ್ತು ಧಾರ್ಮಿಕ ಬಂಧುಗಳು ಸ್ವಯಂ ಪ್ರೇರಿತರಾಗಿ ತನುಮನಧನದ ಕೊಡುಗೆಯನ್ನು ನೀಡಿರುತ್ತಾರೆ. ಅಲ್ಲದೇ 108 ಆಚಾರ್ಯ ಶ್ರೀ ಪ್ರಮುಖ ಸಾಗರ ಮುನಿಮಹಾರಾಜರವರ 15 ಪಿಂಚಿಯ ಚತುರ್ವೇದ ಸಂಘವು ಆಗಮಿಸಿ ಪಂಚಕಲ್ಯಾಣ ಮತ್ತು ಪ್ರತಿಷ್ಠಾಪನಾ ಮಹೋತ್ಸವವನ್ನು ಮುಂದಿನ ದಿನಗಳಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ದಿನಾಂಕ 28/07/2024 ರಂದು ಭಾರತದ ಎಲ್ಲಾ ಪ್ರಮುಖ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಸಮಾಜದ ಗಣ್ಯರು ಹಾಗೂ ದಾನಿಗಳು ಸೇರಿ ಪೂರ್ವಭಾವಿ ಸಭೆಯೊಂದಿಗೆ ಪೂಜಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು














