ಅಧಿನಾಥ ಜೈನ್ ಮಂದಿರ / ದಾವಣಗೆರೆ / ಜ್ವಾಲಾಮಾಲಾ ನ್ಯೂಸ್ / 2024

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

 

ದಾವಣಗೆರೆ, ದೇವನಗರಿ ಎಂಬ ಹೆಸರಿನಿಂದ ದಾವಣಗೆರೆಯಾಗಿ ಇದೀಗ ಶೈಕ್ಷಣಿಕ ಮಹಾನಗರಿ ಎಂದು ಪ್ರಖ್ಯಾತವಾಗಿ ಇಲ್ಲಿನ ಗ್ಲಾಸ್ ಹೌಸ್ ಏಷ್ಯದಲ್ಲಿ ಅತಿ ದೊಡ್ಡ ಗಾಜಿನ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ದಾವಣಗೆರೆಗೆ ಭೇಟಿ ನೀಡಿದಾಗ ದಾವಣಗೆರೆ ಬೆಣ್ಣೆ ದೋಸೆ ಹಾಗೂ ಮಂಡಕ್ಕಿ ಮಿರ್ಚಿ ಸವಿಯದೆ ನಿರಾಶರಾಗಬೇಡಿ.

ಪ್ರೀತಿಯ ವೀಕ್ಷಕರೆ, ಇಷ್ಟೇಲ್ಲ ಪೀಠಿಕೆಯೊಂದಿಗೆ ನಾನು ನಿಮಗೆ ಪರಿಚಯಿಸಲು ಹೋರಟಿರುವುದು ನಗರದ ಶ್ರೀ 1008 ಆದಿನಾಥ ದಿಗಂಬರ ಜಿನ ಮಂದಿರ. ದಾವಣಗೆರೆಯ  ಎಂ ಸಿ ಸಿ  ಬಿಬ್ಲಾಕ್ 7ನೇ ಮುಖ್ಯ ರಸ್ತೆಯಲ್ಲಿ ಇರುವ ಜೈನ್ ಹಾಸ್ಟೆಲ್ ಕಟ್ಟಡದ ಮೇಲಿನ ಮಹಡಿಯಲ್ಲಿ ಈ ಜಿನಾಲಯವನ್ನು ನಿರ್ಮಿಸಲಾಗಿದೆ. ಜಿನ ಮಂದಿರ ಒಳ್ಳ ಪ್ರವೇಶಿಸಿದಂತೆ ವಿಶಾಲವಾದ ಪ್ರಶಾಂತ ವಾತಾವರಣ ಹೊರ ದೇಶಗಳಲ್ಲಿನ ಜಿನ ಮಂದಿರಗಳ ಅನುಭವ ನೀಡುತ್ತದೆ. ನಡುವೆ ಇರುವ ಗರ್ಭಗೃಹದಲ್ಲಿ ಶ್ರೀ ಆದಿನಾಥ ಭಗವಂತರ ಮೂಲ ಮೂರ್ತಿ ಇದ್ದು ಸುತ್ತಲು 24 ತೀರ್ಥಂಕರರ ಕೆತ್ತನೆ ಇರುವ ಜಯಸನ್ಮೇರ ಶಿಲೆಯ 7 ಅಡಿ ಎತ್ತರದ ಸುಂದರ ಬೃಹತ್ ಮೂರ್ತಿ. ಮೂರ್ತಿಯ ಎಡ ಬಲದಲ್ಲಿ ಶ್ರೀ ಚಕ್ರೇಶ್ವರಿ ಮಾತೆ ಹಾಗೂ ಶ್ರೀ ಪದ್ಮಾವತಿ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಶ್ರೀ ಮಹಾವೀರ ಸಂಘದವತಿಯಿಂದ ನಿರ್ಮಾಣವಾದ ಈ ಜಿನ ಮಂದಿರದ ಇತಿಹಾಸವನ್ನ ಶ್ರೀಯುತ ಸುನೀಲ್ ಕುಮಾರ್ ರವರು ವಿವರವಾಗಿ ತಿಳಿಸಿದ್ದಾರೆ.

ಸುನೀಲ್ ಕುಮಾರ್ :- ಎಲ್ಲರಗೂ ಜೈ ಜಿನೇಂದ್ರ ಶ್ರೀ ಮಹಾವೀರ ಸಂಘದವತಿಯಿಂದ ಜ್ವಾಲಮಾಲ ಚಾನಲ್ ರವರಿಗೆ ಅಭಿನಂದನೆಯನ್ನು ಸಲ್ಲಿಸುತ್ತ ಶ್ರೀ 1008 ಆದಿನಾಥ ದಿಗಂಬರ ಜಿನ ಮಂದಿರ ಬೆಳೆದು ಬಂದ ರೀತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತಿದ್ದೇನೆ ಎಂದು ಮಾತನ್ನು ಮುಂದುವರೆಸಿದರು.

ದಾವಣಗೆರೆ ಜೈನ ಸಮಾಜದಲ್ಲಿ ತನ್ನದೆ ಆದ ಒಂದು ಜಿನ ಮಂದಿರ ಕಟ್ಟಬೇಕು ಎಂಬ ಕನಸು ತುಂಬ ವರ್ಷಗಳಿಂದ ಇತ್ತು ಹಿರಿಯರ ಕನಸಾಗಿತ್ತು. 2010 ನೇ ಇಸವಿಯಲ್ಲಿ ಪ್ರಮುಖ ಸಾಗರ ಮಹಾರಾಜರು ವಿಹಾರಕ್ಕೆ ಬಂದಿದ್ದಂತ ಸಂದರ್ಭದಲ್ಲಿ ಇಲ್ಲಿ ಜಿನ ಮಂದಿರದ ಅವಶ್ಯಕತೆ ಇಲ್ಲ ಎಂದು ಮನಗಂಡು ರತ್ನತ್ರೇಯ ಸಿದ್ದ ಮೂರ್ತಿಯನ್ನು ನಮ್ಮ ಸಮಾಜಕ್ಕೆ ಕೊಟ್ಟು ಪ್ರತಿಷ್ಠಾಪನೆ ಮಾಡಿ ಲಘು ಪಂಚಕಲ್ಯಾಣ ಮಾಡಿ ದೇವಸ್ಥಾನವನ್ನು ನಿರ್ಮಿಸ ಬೇಕು ಎಂದು ತಿಳಿಸಿದರು. ಆ ದಿನಗಳಲ್ಲಿ ನಮ್ಮ ಸಮಾಜದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆ ಸಂದರ್ಭದಲ್ಲಿ ಒಬ್ಬ ಧರ್ಮಾತ್ಮರು ಬಂದರು, ಅವರು ಚಳ್ಳಗೆರೆ ಕುಟುಂಬದವರಾದ ರಾಜು ಮತ್ತು ರವಿ ಎಂಬವರು ಅವರ ತಾಯಿ ತಂದೆ ಸ್ಮರಣಾರ್ಥ 10 ಲಕ್ಷ ದೇಣಿಗೆ ಕೊಡುತ್ತೇವೆಂದರು, ನಾವು ಅದಕ್ಕೆ ಪ್ರೇರಣೆಯಾಗಿ 70 ಅಡಿ ಉದ್ದದ ಜಿನ ಮಂದಿರವನ್ನು ಮಾಡಿದೇವು. ಸಮಾಜದ ಮುಖ್ಯಸ್ಥರೆಲ್ಲ ಸೇರಿ ಮೇಲ್ಚಾವಣಿಯ ಕೆಲಸವನ್ನು ಮಾಡಿಸಿದರು. ನಂತರ ಸಮಾಜದವರಲ್ಲಿ ದೇಣಿಗೆ ಕೇಳಲು ಹೋದಾಗ ಅತ್ಯುತ್ತಮವಾಗಿ ದೇಣಿಗೆಯನ್ನು ಸಮಾಜದವರು ನೀಡಿದರು. 2011 ರಲ್ಲಿ ಜಿನ ಮಂದಿರ ನಿರ್ಮಾಣ ಮಾಡಲು ಆರಂಭಿಸಿ 2013ರಲ್ಲಿ ನಿರ್ಮಾಣ ಕಾರ್ಯವನ್ನು ಮುಗಿಸಿದೆವು. 2013 ನವೆಂಬರ್ 20 ರಿಂದ 24 ನೇ ತಾರೀಖು 5 ದಿನಗಳ ಕಾಲ ಪಂಚಕಲ್ಯಾಣ ಕಾರ್ಯಕ್ರಮವು ನೆರವೇರಿತು. ಸ್ವರ್ಗಿಯರಾದ ಚಾರೂಕೀರ್ತಿ ಭಟ್ಟಾರಕರು ನಮಗೆ ತುಂಬ ಸಹಕರಿಸಿದರು. ಪ್ರಪ್ರಥಮವಾಗಿ ಭೂವನ ಕೀರ್ತಿ ಭಟ್ಟಾರಕರು ಮತ್ತು ಸೋಂಧಾ ಭಟ್ಟಾಕಲಂಕ ಮಹಾಸ್ವಾಮೀಜಿಯವರು ಸಾನಿಧ್ಯದಲ್ಲಿ ಎಲಿಕ್ಯಾಫ್ಟರ್ ನಲ್ಲಿ ಪುಷ್ಪವೃಷ್ಟಿಯನ್ನು ಮಾಡಿಸಿದೆವು.

ಮಂದಿರ ನಿರ್ಮಾಣದ ಕಾರ್ಯದಲ್ಲಿ ಕನಕಗಿರಿ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ವಾಸ್ತು ರೀತಿಯಲ್ಲಿ ಮಂದಿರದ ಗರ್ಭಗುಡಿ ನಿರ್ಮಾಣವಾಯಿತು. ಇಲ್ಲಿಗೆ ಭೇಟಿ ನೀಡಿದಂತಹ ಮಾಹಾರಾಜರು ಇಲ್ಲಿರು ಗರ್ಭಗುಡಿಯ ವಾಸ್ತು ವನ್ನು ಅತ್ಯುತ್ತಮವಾದ ವಾಸ್ತು ಎಂದು ಹೇಳಿದರು. 2014 ರಿಂದ ನಾವು ಪ್ರತಿವರ್ಷ ಅನಂತನೋಂಪಿ ಕಾರ್ಯಕ್ರಮವನ್ನು ಪ್ರಾರಂಭಿಸಿದೇವೆ. ಸೋಧಾ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರು ಬಂದು ಅನಂತನೋಂಪಿ ಪೂಜಾ ವಿಧಿವಿಧಾನವನ್ನು ನಡೆಸಿಕೊಡ್ಡುತ್ತಾರೆ.  ಹೊಂಬುಜ ಮಠದ ಪರಿದಿಗೆ ನಮ್ಮ ದಾವಣಗೆರೆ ಸೇರುವುದರಿಂದ ಹೊಂಬುಜ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾರಾಜರು ಕೂಡ ಅತ್ಯುತ್ತಮವಾಗಿ ಸ್ಪಂದಿಸಿ ಸಲಹೆ ಸೂಚನೆಯನ್ನು ನಮ್ಮ ಸಮಾಜಕ್ಕೆ ನಮ್ಮ ಮಹಾವೀರ ಸಂಘಕ್ಕೆ ಕೊಡುತ್ತಾ ಬಂದಿದ್ದಾರೆ ಅವರಿಗೂ ನಾವು ಕೃತಜ್ಞತೆ ಅರ್ಪಿಸುತ್ತೇವೆ.

ಪ್ರತಿ ವರ್ಷವು ಅಭಿವೃದ್ಧಿಕಾರ್ಯ ನಡೆಸುವುದಕ್ಕೆ ನಮ್ಮ ದಾವಣಗೆರೆ ಜೈನ ಬಾಂಧವರ ಸಹಕಾರ ಮತ್ತು ನಮ್ಮ ಸಂಘದ ಸದಸ್ಯರು ಕೂಡ ತನು ಮನ ಧನದಿಂದ ಸಹಕಾರ ನೀಡುತ್ತಿದ್ದಾರೆ. 

ಇವರ ಪ್ರಕಾರ ಹಾಸ್ಟೆಲ್ ನ ಕಟ್ಟಡವನ್ನು ದಾವಣಗೆರೆ ನಗರ ಸಭೆಯು 29-10-1992 ರಂದು ನೀಡಿದ್ದ 80X100 ನಿವೇಶನದಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಾಗಿ 1996 ರಲ್ಲಿ ಮಹಾವೀರ್ ಜೈನ್ ಹಾಸ್ಟೆಲ್ ಅನ್ನು ಶ್ರೀ ಮಹಾವೀರ ಸಂಘದವತಿಯಿಂದ ಸಮಸ್ತ ಜೈನ ಶ್ರಾವಕ ಶ್ರಾವಕಿಯರ ಸಹಕಾರದಿಂದ ನಿರ್ಮಿಸಲಾಯಿತು. ನಂತರ ಜೈನ್ ಹಾಸ್ಟೆಲ್ ಅನ್ನು ನವೀಕರಿಸಲಾಯಿತು. ಹಾಗೂ ನವೀಕೃತ ಹಾಸ್ಟೆಲ್ ಕಟ್ಟಡ ದಿನಾಂಕ 12-11- 2006ರಲ್ಲಿ ಉದ್ಘಾಟನೆಯಾಯಿತು. ಪರಮ ಪೂಜ್ಯ ರಾಷ್ಟ್ರ ಸಂತ ಆಚಾರ್ಯ ಶ್ರೀ 108 ಪ್ರಮುಖ ಸಾಗರ ಮುನಿ ಮಹಾರಾಜರ ಪ್ರೇರಣೆಯಂತೆ ಮೊದಲಿಗೆ ರತ್ನತ್ರೇಯ ಮೂರ್ತಿಯನ್ನು ಸ್ಥಾಪಿಸಿ ನಂತರ ದಾನಿಗಳ ಹಾಗೂ ದಾವಣಗೆರೆ ಸಮಸ್ತ ಜೈನ ಬಾಂಧವರ ಸಹಕಾರದಿಂದ ಜಿನ ಮಂದಿರದ ನಿರ್ಮಾಣವನ್ನು ಮಾಡಿ ಪಂಚಕಲ್ಯಾಣವನ್ನು ಅದ್ಧೂರಿಯಾಗಿ ನಡೆಸಿದರು. ಇಲ್ಲಿನ ಪಂಚಕಲ್ಯಾಣದಲ್ಲಿ ಎಲಿಕ್ಯಾಫ್ಟರ್ ಮೂಲಕ ಪುಷ್ಪವೃಷ್ಠಿ ಇತಿಹಾಸವನ್ನು ಸೃಷ್ಠಿಸಿತ್ತು ಅಂದಿನಿಂದ 10 ವರ್ಷಗಳಿಂದ ಶ್ರೀ ಮಹಾವೀರ ಸಂಘವು ಸಮಾಜ ಬಾಂಧವರ ಸಹಕಾರದಿಂದ ಜಿನ ಮಂದಿರದ ಆವರಣದಲ್ಲಿ ಚಾವಣಿ ಮತ್ತು ಸಭಾ ವೇದಿಕೆ, ಶ್ರೀ ಶಾಂತಿಸಾಗರ ತ್ಯಾಗಿ ನಿವಾಸ, ಪುರೋಹಿತರ ಮನೆ, ಗರ್ಭಗುಡಿಯ ಪ್ರವೇಶದ್ವಾರಕ್ಕೆ ಬೆಳ್ಳಿ ಹೊದಿಕೆ, ದಾನಿಗಳಿಂದ ಶ್ರೀ ಚಕ್ರೇಶ್ವರಿ ಮಾತೆ ಮತ್ತು ಪದ್ಮಾವತಿ ದೇವಿ ಅಮ್ಮನವರಿಗೆ ಬೆಳ್ಳಿ ಮುಖವಾಡ, ಬೆಳ್ಳಿಯ ಅನಂತನಾಥ ತೀರ್ಥಂಕರರ ಮೂರ್ತಿ ಶ್ರೀ ಆದಿನಾಥ ತೀರ್ಥಂಕರರಿಗೆ ಬೆಳ್ಳಿ ಮುಕುಟ ಹಾಗೂ ದಾನಿಗಳಿಂದ ಡೀಸೆಲ್ ಜನರೇಟರ್, ಹಾಸ್ಟೆಲ್ ನಲ್ಲಿ 22 ವಿಧ್ಯಾರ್ಥಿಗಳ ವ್ಯಾಸಂಗಕ್ಕೆ ಕೊಠಡಿ ವ್ಯವಸ್ಥೆ, ಪೀಠೋಪಕರಣ ಹಾಗೂ ಇದೀಗ ಸೋಲಾರ್ ವಾಟರ್ ಹಿಟರ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ. ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಶ್ರೀ ಮಹಾವೀರ ಸಂಘವು ನಿರಂತರವಾಗಿ ಮಾಡುತ್ತ ಬಂದಿದ್ದು ಇಂದಿಗೂ ಕೂಡ ಇಲ್ಲಿ ಅನೇಕ ಸಂಘ ಸಂಸ್ಥೆಗಳು ಸೇರಿ ಜಿನ ಮಂದಿರದ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್