ಗೊಮ್ಮಟಗಿರಿ 28-07-2024/ jwalamalanews / 2024

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

 

ಜೈ ಜಿನೇಂದ್ರ ವೀಕ್ಷಕರೆ, ಮೈಸೂರಿನ ಸಮೀಪ ಇರುವ ಶ್ರೀ ಕ್ಷೇತ್ರ ಗೊಮ್ಮಟಗಿರಿ ಭಗವಾನ್ ಬಾಹುಬಲಿ ಸ್ವಾಮಿಯ 75 ನೇ ಮಹಾಮಸ್ತಕಾಭಿಷೇಕ ಅಮೃತ ಮಹೋತ್ಸವ ಡಿಸೆಂಬರ್ 2024 ರಲ್ಲಿ ನಡೆಯಲ್ಲಿದ್ದು ಇದರ ಸವಿ ನೆನಪಿಗಾಗಿ ಗೊಮ್ಮಟಗಿರಿ ತೀರ್ಥಂಕರ ವನ ಎಂಬ ಹೆಸರಿನಲ್ಲಿ ತೀರ್ಥಂಕರರ ಕೇವಲ ಜ್ಞಾನ ವೃಕ್ಷಗಳ ಸಮರ್ಪಣ  ಕಾರ್ಯಕ್ರಮ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಮಾರ್ಗ ದರ್ಶನದಲ್ಲಿ ಹಾಗೂ ಗೊಮ್ಮಟಗಿರಿ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಮನ್ಮತರಾಜ್ ಅಧ್ಯಕ್ಷತೆಯಲ್ಲಿ ಗೌರವ ಅತಿಥಿಗಳಾಗಿ ಶ್ರೀ ನಾ ಪ್ರಸನ್ನ ಕುಮಾರ್, ಶ್ರೀ ಪ್ರದೀಪ್ ಕುಮಾರ್ ಭಂಡಾರಿ ಹಾಗೂ ಧಾರ್ಮಿಕ ಉಪನ್ಯಾಸಕರಾಗಿ ಡಾ|| ವಿದೂಶಿ ತೇಜಸ್ವಿನಿ ಡಿ ಜೈನ್, ಶ್ರೀಮತಿ ಲತಾ ಸುದರ್ಶನ್ ಭಾಗವಹಿಸಿದ್ದ ಕಾರ್ಯಕ್ರಮ ದಿನಾಂಕ 28-7-2024 ರಂದು ಶ್ರೀ ಕ್ಷೇತ್ರ ಗೊಮ್ಮಟ ಗಿರಿಯಲ್ಲಿ ನಡೆಯಿತು. ಧರ್ಮಾತ್ಮರುಗಳು ಕೂಡ ಇಚ್ಛಿಸಿದಲ್ಲಿ ಹಸಿರು ಯೋಜನೆ ಅಡಿಯಲ್ಲಿ 1100 ರೂಗಳನ್ನು ನೀಡಿ ಒಂದು ವೃಕ್ಷವನ್ನು ನೊಂದಾಯಿಸಿಕೊಳ್ಳ ಬಹುದಾಗಿದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್