ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಇಲ್ಲಿಯವರೆಗೆ ನೀವು ವೀಕ್ಷಿಸಿದ ಅತಿಶಯ ಕ್ಷೇತ್ರ ನಾಂದಣಿ ಮನೋಜ್ನ ಪರಿಸರದಲ್ಲಿ ಪರಮಪೂಜ್ಯಾಶಿರೋಮಣಿ ಆಚಾರ್ಯ ಶ್ರೀ 108 ವಿಶುದ್ದ ಸಾಗರ್ ಜಿ ಮಹಾರಾಜರ ಸತ್ಸಂಗ ಸಹಿತ ಪಾವನ ಚಾತುರ್ಮಾಸ ಕಳಸ ಸ್ಥಾಪನಾ ಕಾರ್ಯಕ್ರಮ ದಿನಾಂಕ 20/07/224ರಂದು ಆಚಾರ್ಯ ಶ್ರೀಗಳ ಪಾವನ ಸಾನಿಧ್ಯ ಹಾಗೂ ಪರಮಪೂಜ್ಯ ಜಗದ್ಗುರು ಜಗತ್ ಪೂಜ್ಯ ಸ್ತಸ್ತಿಶ್ರೀ ಜಿನಸೇನಾ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು. ಕಾರ್ಯಕ್ರಮದಲ್ಲಿ ಆದಿನಾಥ ತೀರ್ಥಂಕರರ ಕಳಸವನ್ನು 55 ಲಕ್ಷ ರೂಗಳಿಗೆ , ಮುನಸೂರತ ತೀರ್ಥಂಕರರ ಕಳಸವನ್ನು 21 ಲಕ್ಷ, ಪಾರ್ಶ್ವನಾಥ ತೀರ್ಥಂಕರರ ಕಳಸ 25 ಲಕ್ಷ ಹಾಗೂ ವಾಚನ ಕಳಸ ಶಾಂತಿವೀರ ಕಳಸ 21 ಲಕ್ಷಕ್ಕೆ ಹರಾಜಿನಲ್ಲಿ ತೆಗೆದುಕೊಳ್ಳಲಾಯಿತು. ಅಷ್ಟೆ ಅಲ್ಲದೆ ಕಾರ್ಯಕ್ರಮದಲ್ಲಿ ಪುಸ್ತಕಗಳ ಬಿಡುಗಡೆಯೊಂದಿಗೆ ಮುಂಬರುವ ಪಂಚಕಲ್ಯಾಣೋತ್ಸದ ಹಾಗೂ ಮಹಾಮಸ್ತಕಾಭಿಷೇಕದ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು














