ಫೆಬ್ರವರಿ 5 ರಂದು ನಡೆದ ಕನಕಾದ್ರಿಯ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸುಂದರ ನೋಟ ಪ್ರಸ್ತುತಪಡಿಸುತ್ತಿದ್ದೇವೆ ಜ್ವಾಲಾಮಾಲಾ ಡಾಟ್ ನ್ಯೂಸ್ ನಿಂದ . ಈ ಮಹಾ ಮಸ್ತಕಾಭಿಷೇಕದಲ್ಲಿ ಪ್ರತಿಯೊಬ್ಬರೂ ಸಹ ಕ್ಷೀರಾಭಿಷೇಕ , ಪುಷ್ಪಾರ್ಚನೆ ಮಾಡಿ ಎಲ್ಲರೂ ಸಹ ಪುನೀತ ಪಾವನರಾದರು. ಅಲ್ಲಿ ನೆರೆದಿರುವ ಜನಸಾಗರವನ್ನು ನೋಡಿ ನಮ್ಮ ಕಣ್ಣುಗಳು ಪಾವನವಾಯಿತು.
ಭಗವಾನ್ ಬಾಹುಬಲಿ ಮೂರ್ತಿಯ ದರ್ಶನ ಮಾಡಲು ಕರ್ನಾಟಕದ ಜನತೆ ಅಲ್ಲದೇ , ಇಡೀ ಭಾರತದ ಎಲ್ಲಾ ರಾಜ್ಯಗಳಿಂದಲೂ ಜನರು ಬಂದು ಮೂರ್ತಿಯ ದರ್ಶನ ಮಾಡಿ, ವಿವಿಧ ರೀತಿಯ ಅಭಿಷೇಕಗಳನ್ನು ಮಾಡಿದರು.