ತುಳುನಾಡು ಭೌಗೋಳಿಕವಾಗಿ ಪಶ್ಚಿಮದಲ್ಲಿ ಅರಬಿಸಮುದ್ರ ಮತ್ತು ಪೂರ್ವದಲ್ಲಿ ಭವ್ಯವಾದ ಪಶ್ಚಿಮಘಟ್ಟಗಳು ಹಚ್ಚಹಸಿರಿನಿಂದ ಕೂಡಿರುವ ವನರಾಶಿಯ ನಡುವೆ ನೆಲೆಸಿರುವ ಸುಂದರಬೀಡು ಸಾಂಸ್ಕೃತಿಕವಾಗಿಯು ಕಡಲತೀರದ ವೈಶಿಷ್ಟತೆಯನ್ನುಳ್ಳ ಜಾನಪದ ಆಚರಣೆಗಳು ತುಳುನಾಡಿನವರ ಜೀವನದಲ್ಲಿ ಹಾಸು ಹೋಕ್ಕಾಗಿದ್ದು ಇದಕ್ಕೆ ಬೆನ್ನಮೂಲದ ಸಮುದಾಯಗಳು ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಐತಿಹಾಸಿಕ ಕೊಡುಗೆಗಳನ್ನು ನೀಡಿದೆ ಹಲವು ರಾಜವಂಶಗಳು ಆಳಿ ಹೋಗಿದ್ದು ಇಂದಿನ ಸಂಸ್ಕೃತಿ ಬೆಳೆದು ಬಂದ ಐತಿಹಾಸಿಕ ಚರಿತ್ರೆಗೆ ಅದರದೇ ಆದ ಸುಧೀರ್ಘ ಪರಂಪರೆ ಇದೆ.ಅಂತಹ ಹಲವು ಅರಸ ವಂಶಗಳಲ್ಲಿ ಪ್ರಮುಖ ಪಾತ್ರವಹಿಸಿದ ಬಂದ ಜೈನ ಅರಸ ಮನೆತನಗಳ ಸುತ್ತ ನಮ್ಮ ಪಯಣ ಬನ್ನಿ ಮೂಲ್ಕಿ ಅರಮನೆಯ ಸುತ್ತ ಒಂದು ಸುತ್ತು.
ಕರಾವಳಿ ಸೀಮೆ ಅನೇಕ ಅರಸು ಮನೆತನಗಳ ಪರಿಚಯವನ್ನು ನಾವು ಮಾಡಿಕೊಳ್ಳುತ್ತಾ ಬಂದಿದ್ದೇವೆ ಈ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ಸೀಮೆಯ ಅರಸು ಮನೆತನದ ಪರಿಚಯ ಹಾಗು ಅರಮನೆ ಹೊಸದಾಗಿ ನಿರ್ಮಾಣವಾಗಿದ್ದರು ಕೂಡ ಅಲ್ಲಿನ ಪಾರಂಪರಿಕ ಸೊಗಡನ್ನು ನಾವು ಕಾಣುತ್ತಿದ್ದೇವೆ.ದುಗ್ಗಣ್ಣ ಸಾವಂತ ಅರಸರು ನೆಡೆದು ಕೊಂಡು ಬಂದಿರುವಂತಹ ಹಲವು ಸಂಪ್ರದಾಯಗಳಾದ ಭೂತಾರಾಧನೆ ನಾಗಾರಾಧನೆ ಕಂಬಳ ಅನೇಕ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದಾರೆ ಸಾವಂತ ಅರಸರು ಮೂಲ್ಕಿ ಸೀಮೆ ಎಲ್ಲಾ ದೇವಾಲಯಗಳು ಬಸದಿಗಳ ನಿತ್ಯಪೂಜೆ ಹಾಗು ಜಾತ್ರೆಗಳಲ್ಲಿ ನೇಮೊತ್ಸವಗಳಲ್ಲಿ ಎಲ್ಲವೂ ಇವರ ಮುಂದಾಳತ್ವದಲ್ಲಿ ನೆಡೆಯುವುದಲ್ಲದೇ ಇಂದಿಗೂ ಸೀಮೆಯ ಜನಪ್ರಿಯ ಧಣಿಯಾಗಿ ಇವರ ಅಳತೆಯಂತೆ ಜನರು ಗೌರವದಿಂದ ನೆಡೆಯುತ್ತಾರೆ ಸುಮಾರು 800 ವರ್ಷಗಳ ಹಿಂದೆ ಅರಸು ಮನೆತನದ ಕುರುಹು ಹಾಗಿ ಇದ್ದ ಮುಲ್ಕಿ ಅರಮನೆ ನಶಿಸಿಹೋದರು ಕೂಡ ಇದೇ ಜಾಗದಲ್ಲಿ ಮಾದರಿ ಅರಮನೆಯನ್ನು ನಿರ್ಮಿಸಿ ಪರಂಪರೆಯಿಂದ ಬಂದ ಅರಸು ಪೀಠಕ್ಕೆ ಗೌರವಯುತ ಸ್ಥಾನ ದೊರೆತಿದೆ ಪಟ್ಟದ ಕತ್ತಿಗೆ ಗತ್ತು ಬಂದಿದೆ ಮತ್ತೋಮ್ಮೆ ಇತಿಹಾಸಕ್ಕೆ ಜೀವತುಂಬುವ ಮಹಾತ್ಕಾರ್ಯವಾಗಿದೆ 800 ವರ್ಷಗಳಿಂದ ಒಬ್ಬರಿಂದ ಒಬ್ಬರ ಕೈಗೆ ಬಂದಂತಹ ಮುದ್ರೆ ಉಂಗುರ ಕೈಯಲ್ಲಿ ಯಾವಗಲೂ ಅಲಂಕೃತವಾಗಿರುತ್ತದೆ ಈ ಎಲ್ಲಾ ವಿಷಯದ ಬಗ್ಗೆ ಇತಿಹಾಸದ ಬಗ್ಗೆ ಅವರನ್ನು ನಮ್ಮ ತಂಡ ಮಾತನಾಡಿಸಿದಾಗ ಅನೇಕ ಸಂಗತಿಗಳು ತೆರೆದುಕೊಳ್ಳುತ್ತಾ ಹೋಯಿತು ಹೆಸರಾಂತ ಜೈನ ಮನೆತನಗಳಲ್ಲಿ ಒಂದಾದ ಮೂಲ್ಕಿ ಸೀಮೆಯ ಅರಸರಾದ ಹೆಸರಾಂತ ಶ್ರೀಯುತ ದುಗ್ಗಣ್ಣ ಸಾವಂತ ಅರಸರು ನಮ್ಮೊಂದಿಗಿದ್ದಾರೆ.
ಜೈ ಜೀನೇಂದ್ರ ದುಗ್ಗಣ್ಣ ಸಾವಂತ ಅರಸರು ಈ ಹೆಸರು ನಿಮಗೆ ಹುಟ್ಟಿದ್ದನಿಂದಲೇ ಬಂದಿರುವುದ ಇಲ್ಲ ಪಟ್ಟದ ಹೆಸರ ಎಂದು ನನಗೊಂದು ಕುತೂಹಲ ಸಮಸ್ತ ವೀಕ್ಷಕಬಂಧುಗಳಿಗೆ ಜೈ ಜೀನೇಂದ್ರ ಸಾವಂತ ಅರಸು ಮನೆತನಗಳಲ್ಲಿ ಸುಮಾರು 800 ವರ್ಷಗಳ ಇತಿಹಾಸ ನಮ್ಮದು ಈ ಸಂಧರ್ಭಗಳಲ್ಲಿ 2008ರಲ್ಲಿ ನಾವು ಪಟ್ಟಾಬಿಷಕ್ತರಾಗಿದ್ದೇವೆ ತಮ್ಮ ಮೂಲ ಹೆಸರು ಮಹಾವೀರ ಪಟ್ಟಾಭಿಷೇಕ ಆದ ನಂತರ ಪಟ್ಟದ ಹೆಸರು ದುಗ್ಗಣ್ಣ ಸಾವಂತ ಎಂಬುದಾಗಿ ಕರೆಯಲ್ಪಡುತ್ತದೆ ಇದು ಶತಮಾನ ಶತಮಾನಗಳಿಂದ ಇದು ಪಟ್ಟದ ಹೆಸರಾಗಿ ಕರೆಲ್ಪಡುತ್ತದೆ ಹೆಸರಿನೊಂದಿಗೆ ಏನೆಲ್ಲಾ ಪಟ್ಟದ ಕುರುಹಾಗಿ ಸಿಕ್ಕಿದೆ ಹಾಗೆ ಪಟ್ಟ ಏರುವ ಸಂಧರ್ಭದಲ್ಲಿ ನೆಡೆಯುವ ಸಂಪ್ರದಾಯಗಳ ಬಗ್ಗೆ ನಮಗೆ ತಿಳಿಸಿಕೊಡಿ ಅರಮನೆ ಸುಮಾರು ನಮಗೆ 800 ವರ್ಷಗಳ ಇತಿಹಾಸದಲ್ಲಿ 3 ಕಡೆಗಳಲ್ಲಿ ಸ್ಥಳಾಂತರಗೊಂಡಿದೆ ಪ್ರಾರಂಭದಲ್ಲಿ ನಮ್ಮ ಅರಮನೆ ಮೂಲ್ಕಿ ಸೀಮೆ ಶಮಂತು ಎಂಬ ಸ್ಥಳದಲ್ಲಿ ಇತ್ತು ತದ ನಂತರ ಕಾರಣಾಂತರ ಮೂಲ್ಕಿ ಕೋಟೆಗೇರಿ ಈಗ ಮೂಲ್ಕಿಯ ಪಡುವಣ ಊರಿನಲ್ಲಿ ಅರಮನೆ ಇದೆ ಈ ಅರಮನೆ ಸುಮಾರು 400 ವರ್ಷಗಳ ಹಿಂದೆ ಪಡುವಣ ಊರಿನಲ್ಲಿ ನಿರ್ಮಾಣವಾಗಿರುವಂತಹ ಒಂದು ಅರಮನೆ ಕಾರಣಾಂತರಗಳಿಂದ ಅದು ಸುಟ್ಟು ಭಸ್ಮವಾಗಿರುವಂತಹ ಸಂಧರ್ಭದಲ್ಲಿ ಇವತ್ತು ಸುಮಾರು 150 ವರ್ಷಗಳಕಾಲ ನಾವು ಬಸದಿಯ ಅವಳಿಯ ಅರಮನೆಯ ಕಾರ್ಯಚರಣೆ ಆಗುತ್ತಿತ್ತು ಸುಮಾರು 2016ರಲ್ಲಿ ನಾವು ಅರಮನೆಯ ಪುನರ್ ನಿರ್ಮಾಣಮಾಡಿ 2016ರಿಂದ ಈ ಸ್ಥಳದಲ್ಲಿ ಇದ್ದೇವೆ ಇದೀಗ ನಮ್ಮ ಪಟ್ಟದ ಕುರುಹಾಗಿ ಪಟ್ಟದ ಉಂಗುರ ಇದೆ ಈ ಪಟ್ಟದ ಉಂಗುರ ನಮ್ಮ ಪಟ್ಟದ ದೇವರು ಶಮಂತೂರಿನ ಆದಿ ಜನಾರ್ಧನ ಸ್ವಾಮಿ ಆದಿ ಜನಾರ್ಧನಸ್ವಾಮಿಯ ಹೆಸರೆ ಪಟ್ಟದುಂಗುರದಲ್ಲಿ ಇದೆ ಹಿಂಭಾಗದಲ್ಲಿರುವುದು ನಮ್ಮ ಪಟ್ಟದ ಮಂಚ ಪಟ್ಟಾಭಿಷಕ್ತರಾದ ಸಂಧರ್ಭದಲ್ಲಿ ನಾವು ಆ ಮಂಚದಲ್ಲಿ ಕುಳಿತು ಪಟ್ಟಾಭಿಷಕ್ತರಾಗುತ್ತೇವೆ ಅದು ಕೇವಲ ಒಂದು ಸಲ ಮಾತ್ರ ಮತ್ತೆ ಅಲ್ಲಿ ಕುಳಿತು ಕೊಳ್ಳುವಹಾಗಿಲ್ಲ ತದನಂತರ ನಮ್ಮಲ್ಲಿರುವಂತಹದ್ದು ಪಟ್ಟದಕತ್ತಿ ಅದು ಬಸದಿಯ ಚಂದ್ರನಾಥಸ್ವಾಮಿಯ ಸಾನಿಧ್ಯದಲ್ಲಿ ಇದೆ ಮತ್ತೆ ಹಿಂದಿನಕಾಲದಲ್ಲಿ ನಾವು ನಮ್ಮ ಸೀಮೆಯ ದೇವಸ್ಥಾನ ಪಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವಂತಹ ಸಂಧರ್ಭದಲ್ಲಿ ನಾವು ಎಲ್ಲರನ್ನೂ ಒಳಗೂಡಿಸಿಕೊಂಡು ನಾವು ಆ ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಹೋಗುವಂತಹ ಸಂಪ್ರದಾಯ ಪಟ್ಟದ ಉಂಗುರ ಇದೆ ಪಟ್ಟದ ಮಂಚ ಇದೆ ಪಟ್ಟದ ಕತ್ತಿ ಇದೆ ಪಟ್ಟದ ಪಲ್ಲಕ್ಕಿ ಇದೆ ಈ 4 ಪರ್ವಗಳು ನಮ್ಮ ಕಣ್ಣಮುಂದೆ ಕಾಣಿಸುತ್ತಿದ್ದೆ ಮುಂದಕ್ಕೆ ಎದುರಲ್ಲಿರುವಂತಹ ಧರ್ಮ ಚಾವಡಿ ಹಿಂದಿನಕಾಲದಲ್ಲಿ ನ್ಯಾಯ ತೀರ್ಮಾನ ಅಲ್ಲಿ ಆಗುತ್ತಿತ್ತು ಅಲ್ಲಿ ಒಂದು ಪಟ್ಟದ ಸಿಂಹಾಸನ ಇದೆ ಬೇರೆ ಬೇರೆ ನ್ಯಾಯ ತೀರ್ಮಾನ ಆಗುವಂತಹ ಸಂಧರ್ಭದಲ್ಲಿ ಆ ಸಿಂಹಾಸನದಲ್ಲಿ ಕುಳಿತು ನ್ಯಾಯ ತೀರ್ಮಾನ ಮಾಡುವಂತದ್ದು ಸಂಪ್ರದಾಯಗಳು ಕೂಡ ಇಂದಿಗೂ ನೆಡೆದುಕೊಂಡು ಬರುತ್ತಿದೆ
ಇನ್ನೂ ಇಲ್ಲಿನ ಇತಿಹಾಸವನ್ನು ನಿಮ್ಮಿಂದಲೇ ತಿಳಿದುಕೊಳ್ಳಬೇಕೇಂದು ಕಾತುರದಿಂದ ಕಾಯುತ್ತಿದ್ದೇವೆ ತುಳುನಾಡಿನ ಅರಸು ಮನೆತನಗಳಲ್ಲಿ ನಮ್ಮ ಸಾಮಂತಅರಸು ಮನೆತನವು ಒಂದು ತಮ್ಮ ಮೂಲ ಅರಸು ಪ್ರಾರಂಭವಾಗಿದ್ದು ಶಮಂತೂರಿನಲ್ಲಿ ಸುಮಾರು 1300ರ ಶತಕದಲ್ಲಿ ಅಲ್ಲಿ ಸುಮಾರು 400 ವರ್ಷಗಳ ಕಾಲ ಅರಸು ಪರಂಪರೆ ಆಡಳಿತ ನೆಡೆಯುತ್ತಿತ್ತು ನಮ್ಮ ಪಟ್ಟದ ದೇವರು ಆದಿ ಜನಾರ್ಧನಸ್ವಾಮಿ ದೇವರು 400 ವರ್ಷಗಳನಂತರ ಕಾರಣಾಂತರದಿಂದ ಕೆಲವೊಂದು ಕಾರಣಗಳಿಂದಾಗಿ ನಾವು ನಮ್ಮ ರಾಜಧಾನಿ ಶಮಂತೂರಿನಿಂದ ಮುಲ್ಕಿ ಕೋಟೆಗೆ ಸ್ಥಳಾಂತರಗೊಂಡೆವು ಅಲ್ಲಿ ಒಂದು 100 ವರ್ಷಗಳಕಾಲ ಸ್ಥಳಾಂತರ ಕಾರ್ಯಾಚರಣೆ ಗೊಳಿಸಿ ಇದೀಗ ನಾವು ಪಡುಕೋಣ ಪುರದಲ್ಲಿ ಇದ್ದೇವೆ ಪಡುಕೋಣಪುರದಲ್ಲಿ ಸುಮಾರು 1700ರ ಶತಕದಲ್ಲಿ ನಾವು ಇಲ್ಲಿ ಅರಮನೆಯನ್ನು ಸ್ಥಾಪಿಸಿ ಅಲ್ಲಿ ಸುಮಾರು 400 ವರ್ಷಗಳಕಾಲ ಅರಸು ಪರಂಪರೆ ಆಡಳಿತ ನೆಡೆಯುತ್ತ ಇತ್ತು. ಇಲ್ಲಿ ಪ್ರಜಾಪ್ರಭುತ್ವದ ಈ ದಿನದಲ್ಲಿ ರಾಜಪ್ರಭುತ್ವ ಅಳಿದಿದ್ದರು ಕೂಡ ನಮ್ಮ ಮೂಲ್ಕಿ ಸೀಮೆಯಲ್ಲಿ ಅಂದು ಯಾವರೀತಿ ರಾಜಪ್ರಭುತ್ವಕ್ಕೆ ಮನ್ನಣೆ ದೊರೆಯುತ್ತಿತ್ತು ಹಾಗೇಯೆ ಇವತ್ತು ಮನ್ನಣೆ ದೊರೆಯುತ್ತಿದೆ ರಾಜಕೀಯವಾಗಿ ಯಾವ ಅಧಿಕಾರ ಇಲ್ಲದಿದ್ದರು ಸಾಮಾಜಿಕವಾಗಿ ಧಾರ್ಮಿಕವಾಗಿ ನಮಗೆ ಒಂದು ಹೊಣೆಗಾರಿಕೆ ಇದೆ ಜವಾಬ್ದಾರಿ ಇದೆ ಆ ಜವಾಬ್ದಾರಿಗೆ ಸರಿಸಮವಾದ ಗೌರವವನ್ನು ನಮ್ಮ ಸೀಮೆಯ ಜನರು ನಮಗೆ ಕೊಡುತ್ತಾ ಇದ್ದಾರೆ ಇವತ್ತು ನಮ್ಮ ಸೀಮೆಯ ದೇವರು ಪಪ್ಪನಾಡು ಕ್ಷೇತ್ರದ ದುರ್ಗಾಪರಮೇಶ್ವರಿ ಅಮ್ಮನವರು ನಮ್ಮ ಆಡಳಿತಕ್ಕೆ ಒಳಪಟ್ಟಿದೆ ಪ್ರತಿಯೊಂದು ಸಂಪ್ರದಾಯಗಳು ಕೂಡ ಇವತ್ತು ಸಂಪ್ರದಾಯಬಧ್ದವಾಗಿ ನೆಡೆಯುವ ರಾಜಮರ್ಯಾದೆ ನಮಗೆ ದೇವಸ್ಥಾನದಲ್ಲಿ ದೊರೆಯುತ್ತಿದೆ ಇವತ್ತು ಜೊತೆಗೆ ನಮ್ಮ ಅರಸು ಕಂಬಳ ಎನ್ನುವಂತದ್ದು 400 ವರ್ಷಗಳ ಇತಿಹಾಸ ಇದೆ ಅಂದು ನಡೆದುಕೊಂಡು ಬಂದ ಅರಸು ಕಂಬಳ ಇವತ್ತು ನೆಡೆದುಕೊಂಡು ಬರುತ್ತಿದೆ ತುಂಬಾ ವಿಜೃಂಭಣೆಯಿಂದ ನೆಡೆದುಕೊಂಡು ಬರುತ್ತಿದೆ ಜೊತೆಗೆ ಪಟ್ಟಾಭಿಷಿಕ್ತಗೊಂಡ ಸಂಧರ್ಭದಲ್ಲಿ ನಮ್ಮ ಸಂಪ್ರದಾಯ ಅರಸರನ್ನು ಇವತ್ತು ಮೂಲ್ಕಿ ಸೀಮೆಯ ಎಲ್ಲಾ ಜನಾಂಗದವರು ಎಲ್ಲಾವರ್ಗದವರಿಗೆ ಸಮಾನವಾದ ಗೌರವ ಮತ್ತು ಸ್ಥಾನಮಾನಗಳನ್ನು ಕೊಡುತ್ತಾ ಇರುವಂತದ್ದು ನೆಡೆದುಕೊಂಡು ಬಂದಿದೆ ಆ ಪ್ರಕಾರವಾಗಿ ಇವತ್ತು ನಮ್ಮ ಅರಸರು ಜೈನರಾಗಿದ್ದರು ಕೂಡ ಪಟ್ಟಾಭಿಷೇಕ ಆದ ಸಂಧರ್ಭದಲ್ಲಿ ಸಮಾಜದ ಎಲ್ಲಾ ಜಾತಿಯವರಿಗು ಮತ್ತು ಎಲ್ಲಾ ಸಮೂದಾಯದವರಿಗೂ ಕೂಡ ಸಮಾನವಾದ ಜವಬ್ದಾರಿ ಮತ್ತು ಮರ್ಯಾದೆಕೊಡುವಂತಹ ಸಂಪ್ರದಾಯ ಅಂದಿನಿಂದ ಇಂದಿನವರೆಗೂ ನೆಡೆದುಕೊಂಡು ಬಂದಿದೆ ಇನ್ನೂ ಕಂಬಳದ ವಿಚಾರ ಹೇಳುದಾದರೆ ನಾವು ಕಂಬಳ ನೆಡೆಸುತ್ತಿದ್ದೇವೆ ಆದರೆ ನಾವು ಕಂಬಳ ನೋಡುವಂತಿಲ್ಲ ಕಂಬಳ ನೆಡೆಸುತ್ತೇವೆ ಕಂಬಳ ಮುಗಿಯುವರೆಗೂ ಉಪವಾಸ ಇದಕ್ಕೆ ಕಾರಣ ಏನು ಅಂತ ಹೇಳಿದರೆ ನಾವು ಧಾರ್ಮಿಕವಾಗಿ ಜೈನರು ಅಹಿಂಸಾವಾದಿಗಳು ಕಂಬಳ ಎಂದರೆ ಹಿಂಸೆಗೆ ಪ್ರಚೋಧನೆ ಕೊಡುವಂತಹ ಒಂದು ಕ್ರೀಡೆ ಆದರೆ ರಾಜಪ್ರಭುತ್ವದಲ್ಲಿ ಕಂಬಳ ಎನ್ನುವಂತದ್ದು ಜನರಿಗೆ ಮನರಂಜನೆ ಕೊಡುವಂತಹ ಒಂದು ಕ್ರೀಡೆಯಾದ್ದರಿಂದ ಜನರ ಮನರಂಜನೆಗೆ ಚ್ಯುತಿ ತರಬಾರದು ಎಂಬ ದೃಷ್ಟಿಯಿಂದ ನಾವು ಕಂಬಳವನ್ನು ಹೊರಡಿಸುತ್ತೇವೆ ಆದರೆ ಅಲ್ಲಿ ಧರ್ಮದ ಚ್ಯುತಿ ಬರಬಾರದೆಂದು ದೃಷ್ಟಿಯಲ್ಲಿ ಕಂಬಳವನ್ನು ನೋಡುವುದಿಲ್ಲ ಜೊತೆಗೆ ಕಂಬಳ ಮುಗಿಯುವ ತನಕ ನಾವು ಉಪವಾಸವಿರುವಂತಹ ಸಂಪ್ರದಾಯ ಇಂದಿಗೂ ನೆಡೆದುಕೊಂಡು ಬಂದಿದೆ.
ಅನೇಕ ಮಾಹಿತಿಗಳನ್ನು ನಮ್ಮವೀಕ್ಷಕರಿಗೆ ತಿಳಿಸಿಕೊಟ್ಟಿದ್ದೀರಿ ಹಾಗೇಯೇ ಇಲ್ಲಿನ ಇತಿಹಾಸವನ್ನ ನಮ್ಮವೀಕ್ಷಕರಿಗೆ ತಿಳಿಸಿಕೊಡಲು ಅನುವು ಮಾಡಿಕೊಟ್ಟದ್ದಕ್ಕೆ ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ಹೃತ್ಪೂರ್ವಕ ಧನ್ಯವಾದಗಳು ಸುಮಾರು 8 ಶತಮಾನಗಳ ಇತಿಹಾಸ ಉಳ್ಳಂತಹ ನಮ್ಮ ಸಾವಂತ ಅರಸು ಮನೆತನದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನೆಡೆದು ಬಂದ ಈ ಸಂಧರ್ಭದಲ್ಲಿ ಜ್ವಾಲಾಮಾಲಾ ನ್ಯೂಸ್ ಚಾನೆಲ್ ರವರು ಇಲ್ಲಿಗೆ ಬಂದು ನಮ್ಮ ಇಲ್ಲಿನ ಇತಿಹಾಸವನ್ನು ವೀಕ್ಷಕರಿಗೆ ಪ್ರಚೋದನೆ ಪಡಿಸುವಂತಹ ಒಳ್ಳೆಯ ಕೆಲಸ ಮಾಡಿದ್ದಾರೆ ಜ್ವಾಲಾ ಮಾಲ ನ್ಯೂಸ್ ಚಾನಲ್ ಗೆ ಅತ್ಯಂತ ಹೃತ್ಪೂರ್ವಕ ಧನ್ಯವಾದ ಜೊತೆಗೆ ವೀಕ್ಷಣೆಮಾಡಿದಂತಹ ತಮಗೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.ತಮ್ಮ ಇತಿಹಾಸವನ್ನು ತಿಳಿದುಕೊಂಡಿದ್ದೀರಿ ಅದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಇನ್ನೂ ಮುಂದಕ್ಕೂ ಕೂಡ ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಜ್ವಾಲಾಮಾಲಾ ನ್ಯೂಸ್ ಚಾನೆಲ್ ನವರು ನೆಡೆಸಿಕೊಡಬೇಕಾಗಿ ನಾನು ಹಾರೈಸುತ್ತೇನೆ.ಧನ್ಯವಾದಗಳು ಅರಸು ದಂಪತಿಗಳಿಗೆ ಇಬ್ಬರು ಮಕ್ಕಳು ಪುತ್ರಿ ರಕ್ಷಮೂಲ್ಕಿಯವರು ಮಂಗಳೂರಿನಲ್ಲಿದ್ದಾರೆ ಅವರ ಸುಪುತ್ರ ಅರಸು ವಂಶದಕುಡಿಯಾಗಿ ಕೃಷಿಕನಾಗಿಯೂ ಯಶಸ್ವಿಉದ್ಯಮಿಯಾಗಿಯೂ ಅರಸನಾಗಿಯೂ ಸರ್ವಧರ್ಮಿಯರ ಜೊತೆ ಸೌಹಾರ್ಧಯುತವಾಗಿ ವೆಲ್ಫ್ ಫೇರ್ ಟ್ರಸ್ಟ್ ಅಡಿಯಲ್ಲಿ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ ಹಾಗೇಯೇ ಧಾರ್ಮಿಕವಾಗಿ ಸೀಮೆಗೆ ಸೇರಿದ ಬಸದಿಗಳ ಜೀರ್ಣೋಧ್ದಾರ ಕಾರ್ಯ ಹಾಗೂ ಹಲವು ಧರ್ಮಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಪ್ರಮುಖವಾಗಿ ಹೇಳಬೇಕೆಂದರೆ ಅರಮನೆಯ ನಿರ್ಮಾಣ ಯಶೊಗಾತೆಯಲ್ಲಿಯೂ ಕೂಡ ಅರಸರ ಜೊತೆಯಲ್ಲಿದ್ದಾರೆ.ಸ್ವತಹ ದುಗ್ಗಣ್ಣ ಸಾವಂತ ಅರಸರಿಂದ ಇಲ್ಲಿನ ಇತಿಹಾಸದ ಪರಿಚಯ ನಮಗಾಗಿದೆ.ಈಗ ಅವರ ಮಗ ಗೌತಮ್ರವರು ನಮ್ಮೊಂದಿಗಿದ್ದಾರೆ ಅವರು ಅರಮನೆಯ ವೈವಿಧ್ಯೆತೆಯನ್ನು ಮಾಡಿಕೊಡಲಿದ್ದಾರೆ. ಸರ್ವರಿಗೂ ನಮಸ್ಕಾರ ಇವತ್ತು ವಿಷೇಶವಾಗಿ ಮೂಲ್ಕಿಅರಮನೆಯ ಪರಿಚಯದ ಬಗ್ಗೆ ಮೂಲ್ಕಿ ಅರಮನೆ ಕೇಂದ್ರಸ್ಥಾನ ಅಂತ ಹೇಳಬಹುದು ನಮ್ಮ ಮೂಲ್ಕಿ ಅರಮನೆ ಧರ್ಮ ಛಾವಡಿ ಈ ಮೂಲ್ಕಿ ಛಾವಡಿ ವೈವಿಧ್ಯತೆ ಏನೆಂದರೆ ಹಿಂದಿನಕಾಲದಲ್ಲಿ ನ್ಯಾಯ ತೀರ್ಮಾನದ ಒಂದು ಕ್ರಮವಿತ್ತು ಇವತ್ತಿಗೂ ನ್ಯಾಯ ತೀರ್ಮಾನದ ಸ್ಥಳ ಎಂದರೆ ಈ ಧರ್ಮಛಾವಡಿ ಈ ಗ್ರಾಮದಲ್ಲಿ ಏನಾದರೂ ಸಮಸ್ಯೆ ಆದರೆ ಇಲ್ಲಿಗೆ ಬರುತ್ತಾರೆ ನಮ್ಮ ತಂದೆಯವರು ನ್ಯಾಯ ತೀರ್ಮಾನಮಾಡುತ್ತಾರೆ ಇಲ್ಲಿ ಬಗೆಹರಿಯದಿದ್ದ ಸಂಧರ್ಭದಲ್ಲಿ ಪೊಲೀಸ್ ಸ್ಟೇಷನ್ ಹೋಗುತ್ತಾರೆ ಅಂತದೊಂದು ಕ್ರಮ ಇವತ್ತಿಗೂ ಮುಂದುವರೆದುಕೊಂಡು ಬಂದಿದೆ ಹಾಗು ನಮ್ಮ ಅರಸು ಕಂಬಳ ಎನ್ನುವಂತದ್ದು ಬಹಳ ವಿಷೇಶವಾದ ಕಂಬಳ ಐತಿಹಾಸಿಕ ಕಂಬಳ ಬಹುಷಹ ನಮ್ಮ ದಕ್ಷಿಣ ಕನ್ನಡ ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳಲ್ಲಿ ಐತಿಹಾಸಿಕ ಕಂಬಳ ಯಾವುದೆಂದರೆ ಮೂಲ್ಕಿ ಕಂಬಳ ನಮ್ಮ ಅರಸು ಕಂಬಳದ ವಿಷೇಶತೆ ಏನೆಂದರೆ ಇಲ್ಲಿ ಅರಸರು ಪೀಠಾರೋಹಣ ಆಗಿರುತ್ತಾರೆ ಅವರು ಕಂಬಳ ಮುಗಿಯುವವರೆಗೂ ಉಪವಾಸ ಕೂರುತ್ತಾರೆ ಮೊದಲೆಲ್ಲಾ ಒಂದು ದಿವಸ ಕಂಬಳ ಮುಗಿಯುತ್ತಿತ್ತು ಈಗ ಎರಡು ದಿವಸ ಮಾಡುತ್ತಾರೆ ಕಂಬಳದ ಕೋಣಗಳ ಸಂಖ್ಯೆ ಜಾಸ್ತಿಯಾಗಿದೆ ಎರಡು ದಿವಸ ಕಂಬಳ ನೆಡೆಯುತ್ತದೆ ನಮ್ಮ ಅರಮನೆಯ ಎದುರು ಕಾಣುವುದು ನಮ್ಮ ಕಂಬಳದ ಗದ್ದೆ ನಮ್ಮ ಅರಮನೆಯ ಕೋಣವೇ ಮೊದಲು ಕಂಬಳಕ್ಕೆ ಇಳಿಯಬೇಕು ಕಂಬಳ ಎಲ್ಲಾ ಆದ ಮೇಲೆ ನಮ್ಮ ಅರಮನೆಯ ಕೋಣವೇ ಇಳಿದು ಅಂತಿಮ ಘಟ್ಟಕ್ಕೆ ಬರುತ್ತದೆ.ಮತ್ತೆ ನಮ್ಮ ಕಂಬಳದ ಹಿನ್ನಲೆ ಭೂತಾರಾಧನೆ ನಾಗಾರಾಧನೆ ದೈವಾರಾಧನೆ ನಮ್ಮ ಬಸದಿಗಳ ಪೂಜೆ ಇಂತದೆಲ್ಲಾ ಕಟ್ಟು ಕಟ್ಟಲೆಗಳನ್ನು ನಾವು ಪಾಲಿಸಬೇಕಾಗುತ್ತದೆ ಇಂತದೆಲ್ಲಾ ತುಂಬಾ ಇಂತಹ ವೈಷಿಷ್ಟತೆಗಳನ್ನು ಹೊಂದಿರುವುದು ನಮ್ಮ ಅರಸು ಕಂಬಳ.
ಮೂಲ್ಕಿ ಸೀಮೇಯ ಐದು ಬಸದಿಗಳಲ್ಲಿ ಮೂಲ್ಕಿ ಅರಮನೆಯ ಬಸದಿ ಚಂದ್ರನಾಥಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಯು ಒಂದು ಅರಮನೆ ಶಮಂತೂರು ಕೋಟೆಗೇರೆಗೆ ಸ್ಥಳಾಂತರಗೊಂಡು ಇಲ್ಲಿಗೆ ಬಂದ ಸಂಧರ್ಭದಲ್ಲಿ ಈ ಬಸದಿಯ ನಿರ್ಮಾಣವಾಗಿದೆ. ಅರಮನೆಯ ಆವರಣದಲ್ಲಿ ಈ ಬಸದಿ ಇದೆ 2010ರ ಸೂಮಾರಿಗೆ ಬಸದಿ ತುಂಬಾ ಶಿಥಿಲಾವಸ್ಥೆಯ ಸಂಧರ್ಭದಲ್ಲಿ ಇದನ್ನು ಪುನರ್ ನಿರ್ಮಾಣ ಜೀರ್ಣೋಧ್ದಾರ ಪಂಚಕಲ್ಯಾಣ ನೆಡೆದಿದೆ ಈ ಬಸದಿ ನಿರ್ಮಾಣಗೊಂಡ ಸಂಧರ್ಭದಲ್ಲಿ ಎಲ್ಲಾ ಸೀಮೆಯ ಎಲ್ಲಾ ಜನರು ಒಟ್ಟುಗೂಡಿ ಈ ಬಸದಿಯ ಜೀರ್ಣೋಧ್ದಾರಕ್ಕೆ ಸಹಭಾಗಿಗಳಾಗಿದ್ದಾರೆ ಇಲ್ಲಿ ಬರಿ ಜೈನ ಶ್ರಾವಕರಲ್ಲ ಜೈನೇತರರು ಬಂದು ಪೂಜೆ ಪುನಸ್ಕಾರಗಳನ್ನು ನೆರವೇರಿಸುವುದರ ಮುಖಾಂತರ ಅವರು ತಮ್ಮ ಮನದಿಚ್ಛೆಯನ್ನು ನೆರೆವೆರಿಸುತ್ತಾರೆ.ಸಾವಂತ ಅರಸು ಪರಂಪರೆ ಸಾಹಿತ್ಯ ಮತ್ತು ಶಿಲ್ಪಕಲೆಗೆ ಅತ್ಯಂತ ಪ್ರೋತ್ಸಾಹ ನೀಡಿದ್ದು ಹೊಂಭುಜ ಕ್ಷೇತ್ರ ಮಹಾತ್ಮೆಯನ್ನು ಬರೆದಂತಹ ಪದ್ಮನಾಭ ಕವಿ ಇಲ್ಲಿನ ಹೆಸರಾಂತ ಕವಿಯಾಗಿದ್ದರು. ಇಲ್ಲಿನ ಅರಸರ ಆಸ್ಥಾನಕವಿಯಾಗಿದ್ದರು ಶಿಲ್ಪಕಲೆಗೆ ಒತ್ತು ನೀಡಿದ ಮನೆತನ ಇದಕ್ಕೆ ನಿದರ್ಶನವೆಂಬಂತೆ ಸೀಮೆಗೆ ಸೇರಿದ ಬಸದಿಗಳಲ್ಲಿ ಅರಮನೆಯ ಬಸದಿ ಇದೀಗ ಇಂದಿನ ಬಸದಿಯ ಮಾದರಿಯಲ್ಲಿಯೇ ಇದೀಗ ಜೀರ್ಣೋಧ್ದಾರ ಗೊಂಡಿದ್ದು ಕಲ್ಲಿನಿಂದಲೇ ಅಲಂಕೃತಗೊಳಿಸಿದ್ದಾರೆ ಬಸದಿಯ ಮೂಲ ಮೂರ್ತಿ ಚಂದ್ರನಾಥಸ್ವಾಮಿ ಪದ್ಮಾವತಿ ಅಮ್ಮನವರು ಇಲ್ಲಿ ಪ್ರತಿದಿನ ಪೂಜಿತಳು ಸೀಮೆಗೆ ಸೇರಿದ ಮತ್ತೋಂದು ಬಸದಿ ಬೈಲಂಗಡಿ ಬಸದಿ ಅನಂತನಾಥ ಬಸದಿಗೆ ಯಾವುದೇ ನಿಖರವಾದ ಇತಿಹಾಸವಿಲ್ಲ ಸೀಮೆಯ 3ನೇಯ ಬಸದಿಯನ್ನು ನೋಡುತ್ತಿದ್ದೀರಿ ಮೇಗಿನ ಬಸದಿ ಎಂದು ಕರೆಯಲಾಗುತ್ತದೆ.1530ರ ಸೂಮಾರಿಗೆ ನಿರ್ಮಾಣಗೊಂಡ ಇತಿಹಾಸವಿದ್ದು ಶಿಲಾಶಾಸನ ಕಾಣಬಹುದು ಇಲ್ಲಿನ ಮಾನ ಸ್ತಂಭ 32 ಅಡಿ ಎತ್ತರ ಹಾಗೂ ಇದರ ಕೆತ್ತನೆ ಮನಮೋಹಕವಾಗಿದೆ. ಶಿಲ್ಪಕಲಾ ಸೌಂದರ್ಯ ನೋಡುಗರ ಮನ ಸೂರೆಗೊಳ್ಳುತ್ತಧೆ ಮತ್ತೊಂದು ಪಾರ್ಶ್ವನಾಥ ಬಸಿದಿ ದುಷ್ಕರ್ಮಿಗಳಿಂದ ಸಂಪೂರ್ಣವಾಗಿ ನಾಶವಾಗಿದ್ದು ಇಲ್ಲಿನ ಪಾರ್ಶ್ವನಾಥಸ್ವಾಮಿ ಬಸದಿ ಮೇಗಿನ ಬಸದಿಯಲ್ಲಿದೆ ನಾಶವಾದ ಪಾರ್ಶ್ವನಾಥ ಬಸದಿ ಜೀರ್ಣೋದ್ದಾರ ಇಚ್ಛೆ ಇದ್ದು ಪ್ರಯತ್ನಕೂಡ ಸಾಗಿದೆ.ಇದು ಆವರಣದಲ್ಲಿ ಪರಂಪರೆಯಿಂದ ಉಪಯೋಗಿಸಲ್ಪಟ್ಟ ಅನೇಕ ವಸ್ತುಗಳನ್ನು ನೋಡಬಹುದು ಇದು ಅರಸು ಪಟ್ಟದ ಮಂಚ ಇಲ್ಲಿ ಅರಸು ಪಟ್ಟ ಆಗೋ ಸಂಧರ್ಭದಲ್ಲಿ ವಿಷೇಶವಾಗಿ ಈ ಮಂಚದಲ್ಲಿ ಕುಳಿತುಕೊಂಡು ಕೆಲವೊಂದು ಗುತ್ತುಭಾವಗಳಿವೆ ಅವರಿಗೆ ಅವರದೇ ಆದಂತಹ ಜವಬ್ದಾರಿ ಇದೆ ಆ ಜವಬ್ದಾರಿಯುತ ಮಂಚ ಇದಾಗಿದೆ. ಈ ಮಂಚದಲ್ಲಿ ಕುಳಿತುಕೊಂಡು ಪೀಠಾದಾರಣೆ ಕತ್ತಿಹಿಡಿದುಕೊಳ್ಳುವುದು ಮತ್ತು ಪಟ್ಟದ ಉಂಗುರ ಇವಲ್ಲಾ ಹಾಕುವಂತದ್ದು ಈ ಪಟ್ಟದ ಮಂಚದಲ್ಲಿ ನೆಡೆಯುವಮತಹ ಕ್ರಮ ಪಪ್ಪನಾಡು ದೇವಸ್ಥಾನದಲ್ಲಿ ಜಾತ್ರಮಹೋತ್ಸವ ನೆಡೆಯುತ್ತದೆ ನಮ್ಮ ಮೂಲ್ಕಿಅರಮನೆಗೂ ಈ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ ಅರಸು ಕಂಬಳದ ಫೊಟೊ ಇದೆ ಈ ಬಾರಿ ನೆಡೆದ ಕಂಬಳದಲ್ಲಿ ಮೈಸೂರಿನ ಒಡೆಯರಾದ ಶ‍್ರೀ ಯದುವೀರ್ ಚಾಮರಾಜ ಒಡೆಯರು ಭಾಗವಹಿಸಿದದ್ದು ಒಂದು ಹೆಮ್ಮೆಯ ಸಂಗತಿ ಮೂಲ್ಕಿಅರಮನೆಯ ಇನ್ನೊಂದು ವಿಷೇಶತೆ ಏನೆಂದರೆ ನಮ್ಮ ಮೂಲ್ಕಿ ಅರಮನೆಯ ಗೋಶಾಲೆ ಇವತ್ತಿಗೂ ನಾವು ಒಂದು 30 ದನಗಳನ್ನು ಇಲ್ಲಿ ಸಾಕುತ್ತಾ ಇದ್ದೇವೆ ಇಲ್ಲಿ ಅರಸು ಡೈರಿ ಫಾರಂ ಎಂದು ನಿರ್ವಹಣೆಗೊಳ್ಳುತ್ತಾನೆ ಬೇರೆ ಡೈರಿಗಳಿಗೂ ಇಲ್ಲಿಂದ ಸಪ್ಲೆ ಬರುತ್ತದೆ ಅರಸು ಡೈರಿಯ ಹಾಲು ಮೂಲ್ಕಿ ಪರಿಸರದ ಮನೆಮನೆಗೆ ಅರಸು ಬ್ರಾಂಡ್ ಹೆಸರಿನಲ್ಲಿ ಪ್ಯಾಕೆಟ್ ಆಗಿ ತಲುಪುತ್ತದೆ ಈ.ಗೋಶಾಲೆಯ ಇನ್ನೋಂದು ವಿಷೇಶತೆ ಬೆರಗುಗೊಳಿಸುವ ಪ್ರಕೃತಿನೋಟ ಹಳೆಯ ಆಚರಣೆಗಳು ಕುತೂಹಲಕಾರಿ ವಿಷಯಗಳು ಮತ್ತು ರುಚಿಕರವಾದ ತಿಂಡಿತಿನಿಸು ಕರುನಾಡ ಚಿತ್ರಣ ಮತ್ತಷ್ಟು ವಿಷಯಗಳೊಂದಿಗೆ ಮತ್ತೆ ಭೇಟಿ ಆಗೋಣ ವಂದನೆಗಳು














