-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಪರಮ ಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಮುನಿ ಮಹಾರಾಜರ 35 ನೇ ವರ್ಷದ ಆಚಾರ್ಯ ಪದಾರೋಹಣ ದಿನದ ಆಚರಣೆ ರಾಜಸ್ಥಾನದ ಬನ್ಸ್ ವಾರ ಕ್ಷೇತ್ರದಲ್ಲಿ ಇದೇ ಜುಲೈ ತಿಂಗಳ ದಿನಾಂಕ 6 ಮತ್ತು 7ನೇ ತಾರೀಖಿನಂದು ನಡೆದಿದ್ದು ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾಸ್ವಾಮೀಜಿಗಳವರು ಪಾಲ್ಗೊಂಡು ಆಚಾರ್ಯ ಶ್ರೀಗಳವರೊಂದಿಗೆ ಪೂಜ್ಯ ಶ್ರೀಗಳವರ ಮೊದಲ ಬೇಟಿ ಇದ್ದಾಗಿದ್ದು ಪಟ್ಟಾಭಿಷಕ್ತರಾಗಿ ಪೀಠಾರೋಹಣಗೊಂಡ ಇವರು ಪ್ರಥಮ ಆಶೀರ್ವಾದ ಪಡೆದರು. ಹಾಗೂ ಆಚಾರ್ಯ ಶ್ರೀಗಳವರಿಗೆ ಬೆಳ್ಳಿಯ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಮೂರ್ತಿ ಹಾಗೂ ಪೀಠವನ್ನು ಸಹ ಸಮರ್ಪಿಸಿ ಬೆಟ್ಟದಲ್ಲಿ ವಿರಾಜಮಾನರಾದ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಕೃತಿ ಸ್ವತಃ ಅಭಿಷೇಕವನ್ನು ನೆರವೇರಿಸಿ ಧನ್ಯತೆಪಡೆದರು. ಆಚಾರ್ಯ ಶ್ರೀಗಳಿಗೆ ಹಾಗೂ ನೆರದಿದ್ದ ಸಂಘಸ್ಥಯ್ಯ ತ್ಯಾಗಿಗಳಿಗೆ ಗ್ರಂಥಗಳನ್ನು ಕೂಡ ಅರ್ಪಿಸಲಾಯಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














