ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ನ್ಯೂಸ್ ಅರ್ಪಿಸುತ್ತಿರುವ ನೂತನ ಕಾರ್ಯಕ್ರಮ ಸಮುದಾಯದ ಸೇವೆಯಲ್ಲಿ ನಿರತ ಶ್ರಾವಕ ಶ್ರಾವಕಿಯರ ಜೀವನಗಾಥೆ, ಹೆಮ್ಮೆಯ ಶ್ರಾವಕ ಅಥವಾ ಶ್ರಾವಕಿ ಸಮಾಜಕ್ಕಾಗಿ ಮುಡುಪಾದ ಕಥೆಯನ್ನು ಸಮಾಜದವರೆ ನೋಡಿ ಇನ್ನೂ ಹೆಚ್ಚಿನ ಸೇವೆಗಾಗಿ ಉರಿದುಂಬಿಸುವ ಕಾರ್ಯ ನಿಮ್ಮಿಂದ ಆಗಲಿ.
ಜೈ ಜಿನೇಂದ್ರ ವೀಕ್ಷಕರೆ, ಧರ್ಮ ಪ್ರಭಾವನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮ ಸೇವಕರನ್ನು ಪರಿಚಯಿಸುತ್ತಿರುವ ನಮ್ಮ ಈ ಕಾರ್ಯಕ್ರಮ ಹೆಮ್ಮೆಯ ಶ್ರಾವಕ. ಈ ಸಂಚಿಕೆಯಲ್ಲಿ ಪರಿಚಯಿಸುತ್ತಿದೇವೆ ಜಿನ ವಾಣಿ ಸೇವೆಮಾಡುವ ಸಂಕಲ್ಪ ಹೊಂದಿದ್ದರೆ ಸಾಕು, ಸಾಧಿಸುವ ಚಲವಿದ್ದರೆ ಸಾಕು. ಅಚಲ ಸಂಕಲ್ಪದಿಂದ ಏನನ್ನಾದರು ಸಾದಿಸಬಹದು ಎಂದು ತೋರಿಸಿಕೊಟ್ಟ ಒಂದು ಮಹಾನ್ ಶಕ್ತಿಯನ್ನ.
ಅದು ಈ ಶತಮಾನದ ಪ್ರಥಮ ದಶಕದಕಾಲ ಜಾಲತಾಣಗಳು ಸಮಾಜಿಕವಲಯದಲ್ಲಿ ತನ್ನ ಕಣ್ಣು ನಿಧಾನವಾಗಿ ತೆರೆಯಲು ಆರಂಭಿಸಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮವೊಂದರಲ್ಲಿ ಜೈನ ಧರ್ಮದಲ್ಲಿ ಅಪಾರ ಶ್ರದ್ದೆಯನ್ನು ಇರಿಸಿಕೊಂಡಿದ್ದ ಯುವಕನೊಬ್ಬ ಮನೆಯಲ್ಲಿಯೇ ಕುಳಿತು ತನ್ನ ಸುತ್ತಲಿನ ಸಮಾಜವನ್ನು ತನ್ನ ಬಿಟ್ಟ ಕಂಗಳಿಂದ ವೀಕ್ಷಿಸುತ್ತಿದ್ದ. ಸೂಕ್ಷ್ಮ ಧರ್ಮಸಂವೇದಿಯಾದ ಆತ ಧರ್ಮದ ಕುರಿತು ಸತತವಾಗಿ ಚಿಂತಿಸುತ್ತ ಜೈನ ಸಮಾಜವು ಧಾರ್ಮಿಕ ಅರಿವಿನ ಕೊರತೆಯಿಂದ ಮಿತ್ಯ ಮಾರ್ಗದತ್ತ ನಿರಂತರವಾಗಿ ಸಾಗುತ್ತಿದ್ದ ಬಗೆಯನ್ನು ಕಂಡು ಒಳಗಿಂದೊಳಗೆ ಕೊರಗುತ್ತಿದ್ದ. ಸಮಾಜಕ್ಕೆ ಧಾರ್ಮಿಕ ಅರಿವನ್ನು ನೀಡುವ ಮೂಲಕ ಜಿನ ವಾಣಿ ಸೇವೆ ಮಾಡಬೇಕೆಂದು ಬೆಟ್ಟದಷ್ಟು ಆಸೆ ಇದ್ದರು ಸುತ್ತಲಿನ ಸಮಾಜದತ್ತ ಸಾಗಲಾಗದ ತನ್ನ ಅಸಹಾಯಕ ಪರಿಸ್ಥಿತಿಯನ್ನು ಮನಗಂಡು ಒಳಗಿಂದೊಳಗೆ ಮನದಲ್ಲಿ ಮರುಗುತ್ತಿದ್ದ. ತನ್ನ ಮನದ ಬಾವನೆಗಳನ್ನು ಲೇಖನಗಳ ಮೂಲಕ ತನ್ನ ಸಾಹಿತ್ಯದ ಮೂಲಕ ಜಿನೇಂದ್ರ ಭಗವಂತರ ಕೃತಿಯನ್ನು ಬರೆಯುತ್ತ ಅದರಲ್ಲಿಯೇ ಸಾರ್ಥಕತೆಯನ್ನು ಕಂಡುಕೊಳ್ಳುವ ಪ್ರಯತ್ನ ಪಡುತ್ತಿದ್ದ.
ಪ್ರಾಂಜ್ಯಲ ಮನಸ್ಸಿನ ಕರೆಯನ್ನು ಭಗವಂತನ್ನು ಆಲಿಸುತ್ತಾನಂತೆ ಹಾಗೇ ಮನೆಯಲ್ಲೇ ಕುಳಿತು ಗಮನಿಸುತ್ತಿದ್ದ ಇವರಿಗೆ ಜಿನ ವಾಣಿ ಕೃಪೆಯೋ ಎಂಬಂತೆ ಸಂಪರ್ಕವಾಗಿದ್ದು ಜಾಲತಾಣದ ವಾಟ್ಸ್ ಆಫ್, ಫೇಸ್ ಬುಕ್ ನಂತಹ ಮಾಧ್ಯಮಗಳು. ಸಮಯ ಕಳೆಯಲು ಕುಶಲ ಕ್ಷೇಮ ವಿಚಾರಿಸಲು ಹಾಸ್ಯ ಪ್ರಸಂಗವನ್ನು ಹಂಚಿಕೊಳ್ಳಲು ಇದ್ದ ಈ ಮಾಧ್ಯಮವನ್ನು ಧಾರ್ಮಿಕತೆಯ ಪ್ರಚಾರ ಪ್ರಭಾವನೆಗು ಬಳಸಿಕೊಳ್ಳ ಬಹುದೆಂದು ಮನದಲ್ಲಿ ಯೋಚಿಸುತ್ತಿರುವಾಗಲೇ ಈ ಪ್ರಯತ್ನದ ಆರಂಭ ಹಲವಾರು ಮಾಧ್ಯಮದ ಮೂಲಕ ಕಣ್ಣಿಗೆ ಬಿತ್ತು ಈ ಪ್ರಯತ್ನದಲ್ಲಿ ತಮ್ಮನ್ನು ಕೂಡ ಮುಂದುವರೆಸಿಕೊಂಡು ಹೋದ ನಿರಂಜನ್ ರವರು ಮತ್ತೆಂದು ಹಿಂದೆ ನೋಡಲಿಲ್ಲ. ಇಂತಹ ಎಲ್ಲ ವಾಟ್ಸ್ ಆಪ್ ಗಣಗಳನ್ನು ಖಾಯಂ ಹಾಗಿ ಮುನ್ನಡೆಸುವ ಸಕ್ರಿಯ ಸದಸ್ಯರಾದರು. ಧಾರ್ಮಿಕ ಚರ್ಚೆಯಲ್ಲಿ ನಿರಂತರವಾಗಿ ಭಾಗವಹಿಸುತ್ತ ತನ್ನ ಸಂಪರ್ಕಕ್ಕೆ ಬರುವ ಎಲ್ಲ ಧರ್ಮಿಯರನ್ನು ಧಾರ್ಮಿಕ ಗಣಗಳಿಗೆ ಸೇರಿಸುತ್ತ ಧರ್ಮದೆಡೆಗೆ ಸೇಳೆಯುವ ಕಾರ್ಯಕ್ಕೆ ಚಾಲನೆ ಇಟ್ಟರು. ಹಿಂದೆ ಧಾರ್ಮಿಕ ಚರ್ಚೆಗಳು ಸಿದ್ದಾಂತಗಳ ಅರಿವುಳ್ಳವರಿಗೆ ಮಾತ್ರ ಸೀಮಿತವಾಗಿತ್ತು. ತನ್ನ ಪುಟ್ಟ ಪುಟ್ಟ ಲೇಖನಗಳ ಮೂಲಕ ಅದರ ಅರಿವನ್ನು ವಿಸ್ಥಾರಗೊಳಿಸಿ ನಾಡಿನಾಧ್ಯಂತ ಧರ್ಮಿಯರಿಗೆ ಪರಿಚಿತರಾದರು. ಹೌದು, ನಿರಂಜನ್ ಜೈನ್ ಕುದ್ಯಾಡಿ. ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರತಿಯೊಬ್ಬರಿಗು ಇವರ ಪರಿಚಯವಿದೆ. ಎಲೆ ಮರೆ ಕಾಯಿಯಂತಿದ್ದ ನಿರಂಜನ್ ರಂತಹ ಮೇರು ಶಕ್ತಿ ಮುಖ್ಯ ವಾಹಿನಿಗೆ ಬರಲು ಕರೋನ ಕಾಲವೇ ಪ್ರಮುಖ ಕಾರಣವಾಯಿತು. ಲಾಕ್ ಡೌನ್ ಸಂದರ್ಭದಲ್ಲಿ ಜನತೆ ಅನಿವಾರ್ಯವಾಗಿ ಮನೆಯಲ್ಲಿರುವ ಪರಿಸ್ಥಿತಿ ಬಂದೊದಗಿ ಈ ಸಮಯದ ಸತ್ ಪ್ರಯೋಗವನ್ನು ಪಡೆದು ಈಗಾಗಲೇ ಆರಂಭಿಸಿದ್ದ ಜಾಲತಾಣಗಳ ಮೂಲಕ ಸಮರೋಪಧಿಯಲ್ಲಿ ಜಿನ ವಾಣಿಯ ಪ್ರಭಾವನೆಗೆ ಮುನ್ನಡೆ ಇಟ್ಟು ಜೈನ ಧರ್ಮವನ್ನು ಸಿದ್ದಾಂತಗಳ ಅರಿವನ್ನು ವ್ಯಭಿನಾರ್ಸ್ ವಾಧ್ಯಾಯಗಳನ್ನು ಜಿನ ವಾಣಿಪ್ರಭಾವನ ಕಾರ್ಯಕ್ರಮಗಳನ್ನು ಸಾವಿರಾರು ಧರ್ಮಿಯರ ಮನೆಗೆ ತಲುಪಿಸಿ ಧನ್ಯತೆ ಪಡೆದರು. ಜೈನ ನಾದವನು ಒಮ್ಮೆಯಾದರು ಶಿಕರ್ಜಿ ದರ್ಶನ ಮಾಡಲು ಸಂಕಲ್ಪ ಮಾಡುತ್ತಾನೆ. ತಮ್ಮ ಅಸಹಾಯಕ ಪರಿಸ್ಥಿಯನ್ನು ಕೂಡ ಮೀರಿ ನಿಂತು ಧರ್ಮಾತ್ಮರುಗಳ ಸಹಕಾರದಿಂದ ಜೈನ ತೀರ್ಥ ಶಿಕರ್ಜ ದರ್ಶನದಂತಹ ಭಾಗ್ಯವನ್ನುತಮ್ಮದಾಗಿಸಿಕೊಂಡಿದ್ದಾರೆ. ಇಂತಹ ಜೀವನ ಸಾರ್ಥಕತೆಯ ಕ್ಷಣಗಳನ್ನು ಒಂದೆಡೆ ದಾಖಲಿಸಿ ಶಿಕರ್ಜಿ ದರ್ಶನ ಎಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ. ಇಂತಹ ಅಪ್ರತಿಮ ಯುವ ಸೇವಕ ನಿರಂಜನ್ ಜೈನ್ ಕುದ್ಯಾಡಿ ಬಾಂದಾಜಿ ಕುಮಾರ ಬಂಗ ಮತ್ತು ಪುಷ್ಪಾವತಿ ಅಮ್ಮನವರ ಸುಪುತ್ರ ಬಹಳ ಅನ್ಯೂನ್ಯತೆಯಿಂದ ಕೂಡಿದ ತುಂಬು ಕುಟುಂಬ ಇವರದ್ದಾಗಿದ್ದು ನಿರಂಜನ್ ರವರ ಎಲ್ಲ ಬೆಳವಣಿಗೆಯಲ್ಲಿ ತಮ್ಮ ಅಮೂಲ್ಯ ಸಹಕಾರ ನೀಡುತ್ತ ತಾವು ಭಾಗಿಯಾಗಿದ್ದಾರೆ. ಗಣ್ಯಾತಿ ಗಣ್ಯರು ಅವರ ಮನೆಗೆ ಬಂದು ಅವರ ಬೃಹತ್ ಕಾರ್ಯಕ್ಕೆ ಪ್ರಶಂಸಿಸಿ ಗೌರವಿಸಿದ್ದಾರೆ.
ಶ್ರೀಯುತ ನಿರಂಜನ್ ರವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಸಧರ್ಮ ಬಂಧು, ಜಿನ ದರ್ಶನ ಪುರಸ್ಕಾರ, ಜಿನ ಧರ್ಮ ಪ್ರಭಾವಕ ಪುರಸ್ಕಾರ ಅಹಿಂಸಾ ಗೌರವ ಪುರಸ್ಕಾರ, ಸಧರ್ಮ ಪ್ರೇಮ, ಜಿನವಾಣಿ ಪುರಸ್ಕಾರ, ಪ್ರಭಾನ ಶ್ರೀ, ಜಿನ ಧರ್ಮ ಸೇವಕ, ಆಮಂತ್ರಣ ಗ್ರಾಮೀಣ ಪ್ರಶಸ್ತಿ, ಜೈನ್ ಮಿಲನ್ ವಲಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಸಾಧಕ, ಬೆಳ್ತಂಗಡಿ ಜೈನ್ ಮಿಲನ್ ಇವರಿಂದ ಗೌರವ ಸನ್ಮಾನ ಈಗೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿದೆ. ದೈಹಿಕ ಬಲದ ನ್ಯೂನ್ಯತೆಯನ್ನು ದಾಟಿ ತನ್ನ ಆತ್ಮ ಬಲದಿಂದಲೇ ಸಮಾಜಕ್ಕೆ ಕೊಡುಗೆಯಾದ ಇವರ ಜೀವನಗಾಥೆಯನ್ನು ನಮ್ಮ ಹೆಮ್ಮೆಯ ಶ್ರಾವಕರು ಕಾರ್ಯಕ್ರಮದಲ್ಲಿ ಸಂದರ್ಶನದ ಮೂಲಕ ಇಂಚು ಇಂಚು ಹೇಳುತ್ತಾ ಹೋಗುತ್ತಾರೆ ನಿರಂಜನ್ ರವರು.
ಸಂದರ್ಶಕರು :- ಜೈನ ಸಂಸ್ಕೃತಿ ಜೈನ ಪರಂಪರೆಯನ್ನು ಪ್ರತಿಬಿಂಬಿಸುತ್ತಿರುವಂತಹ ಕನ್ನಡ ಏಕೈಕ ಮೊದಲ ಜೈನ ಚಾನಲ್ ಜ್ವಾಲಮಾಲ ನ್ಯೂಸ್ ಇವರು ನಡೆಸಿಕೊಡುತ್ತಿರುವಂತಹ ಹೆಮ್ಮೆಯ ಶ್ರಾವಕ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆತ್ಮಿಯ ಸ್ವಾಗತ.
ಆತ್ಮಿಯ ವೀಕ್ಷಕರೆ ಅದೇರೀತಿ ಜ್ವಾಲಮಾಲ ನ್ಯೂಸ್ ನಿಂದ ಪ್ರಸಾರವಾಗುತ್ತಿರುವಂತಹ ವಿನೂತನ ಕಾರ್ಯಕ್ರಮಗಳನ್ನ ಚಂದನ ವಾಹಿನಿಯಲ್ಲಿ ಪ್ರತಿ ಭಾನುವಾರ 9:30 ರಿಂದ 10:00 ಗಂಟೆಯವರೆಗೆ ಪ್ರಸಾರವಾಗುತ್ತಿರುವಂತಹ ಧರ್ಮಯಾತ್ರೆ ಕಾರ್ಯಕ್ರಮವನ್ನು ಕೂಡ ತಪ್ಪದೇ ವೀಕ್ಷಿಸಿ ಪ್ರೋತ್ಸಾಹಿಸಿ.
ಜೀವನದಲ್ಲಿ ಘಟಿಸಿದಂತಹ ಅನಿರೀಕ್ಷಿತ ಘಟನೆಗಳಿಂದಾಗಿ ಜೀವನವನ್ನು ಕೊನೆಗಾಣಿಸಲು ಸಾವಿರಾರು ದಾರಿಗಳಿವೆ. ಆದರೆ ಬದುಕನ್ನು ಕಂಡುಕೊಳ್ಳಲು ಇರುವಂತಹ ಒಂದೇ ದಾರಿ ಎಂದರೆ ಅದು ಆತ್ಮವಿಶ್ವಾಸ. ಒಬ್ಬ ವ್ಯಕ್ತಿ ಕನಿಷ್ಟ ಸಮಯದಲ್ಲಿ ಬಹಳ ಎತ್ತರದ ಸಾಧನೆಯನ್ನು ಮಾಡಬಲ್ಲನಂತೆ, ಆದರೆ ಆ ಸಾಧನೆಯನ್ನು ಮಾಡುವುದಕ್ಕೆ ಕಾರಣ ಅತನಲ್ಲಿ ಇರುವಂತಹ ಆತ್ಮವಿಶ್ವಾಸ, ಶ್ರದ್ದೆ, ಛಲ, ಪರಿಶ್ರಮ, ಪ್ರಯತ್ನ. ಇವತ್ತು ಶ್ರದ್ದೆ, ಪರಿಶ್ರಮ, ಛಲ ಇವುಗಳಿಗೆ ಹೆಸರಾದಂತಹ ಶ್ರೀ ನಿರಂಜನ್ ಕುದ್ಯಾಡಿಯವರನ್ನ ನಾನು ಈ ಕಾರ್ಯಕ್ರಮಕ್ಕೆ ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇನೆ.
ಸಂದರ್ಶಕರು :- ಜೈ ಜಿನೇಂದ್ರ,
ನಿರಂಜನ್ ಜೈನ್ ಕುದ್ಯಾಡಿ :- ಜೈ ಜಿನೇಂದ್ರ, ಈ ಕಾರ್ಯಕ್ರಮವನ್ನು ಯೂಟ್ಯೂಬ್ ಮಾಧ್ಯಮದ ಮೂಲಕ ವೀಕ್ಷಿಸುತ್ತಿರುವಂತಹ ಎಲ್ಲ ಸಹೃದಯಿ ಧರ್ಮ ಬಂಧುಗಳಿಗೆ ಜೈ ಜಿನೇಂದ್ರಗಳನ್ನು ಅರ್ಪಿಸುತ್ತಿದ್ದೇನೆ.
ಸಂದರ್ಶಕರು :- ನೀವು ಇವತ್ತು ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಅಂತರಾಷ್ಟ್ರಮಟ್ಟದಲ್ಲಿ ಸಮಾಜಿಕ ಜಾಲತಾಣಗಳ ಮೂಲಕ ಎಲ್ಲರೀಗೂ ಚಿರಪರಿಚಿತರಾದಂತವರು. ನಿರಂಜನ್ ಕುದ್ಯಾಡಿ ಎಂದು ಹೇಳಿದರೆ ಒಬ್ಬ ಬರಹಗಾರ, ಒಬ್ಬ ಲೇಖಕ, ಒಬ್ಬ ಕವಿ ಅದೇ ರೀತಿ ಒಬ್ಬ ಕಾರ್ಯಕ್ರಮ ನಿರೂಪಕ, ಸಂಘಟಕ, ಕಾರ್ಯಕ್ರಮ ಸೈಯೋಜಕ. ನಿರಂಜನ್ ಕುದ್ಯಾಡಿಯವರು ಎಂದು ಹೇಳಿದರೆ ಒಬ್ಬ ಕ್ರಿಯಾಶಿಲ ವ್ಯಕ್ತಿ, ಅತ್ಯಮತ ಸೂಕ್ಷ್ಮ ಸ್ವಭಾವದವರು, ಚುರುಕಿನ ವ್ಯಕ್ತಿತ್ವ ಎಂದು ಅಂದುಕೊಳ್ಳುತ್ತೇವೆ. ಈ ನಿರಂಜನ್ ರವರು ಬಾಲ್ಯದಲ್ಲಿ ಹೇಗಿದ್ದರು ಎಂದು ತಿಳಿದುಕೊಳ್ಳುವ ಒಂದು ಕುತುಹಲ ನಮಗೆ.
ನಿರಂಜನ್ ಜೈನ್ ಕುದ್ಯಾಡಿ :- ಕೆಲವು ಮಾಧ್ಯಮದಲ್ಲಿ ವೀಕ್ಷಿಸುತ್ತಿರುವಂತಹ ಎಲ್ಲ ಸಹೃದಹಿ ಬಂಧುಗಳಿಗೆ ನಾನು ಚಿರಪರಿಚಿತ ನಿದೇನೆ. ಹಾಗೆ ಅನೇಕ ಕಾರ್ಯಕ್ರಮಗಳ ಮೂಲಕ ತೊಡಗಿಸಿಕೊಂಡಿರುವ ಕಾರಣದಿಂದಾಗಿ ಅನೇಕರು ನನಗೆ ಪರಿಚಿತರಾಗಿದ್ದಾರೆ.
ನಮ್ಮದು ಬಾಲ್ಯದಲ್ಲಿ ಕೂಡು ಕುಟುಂಬವಾಗಿತ್ತು, ನಮ್ಮ ತಂದೆ ತಾಯಿ ಮತ್ತು ನಾವೆಲ್ಲ ಮಕ್ಕಳು. ಅತ್ಯಂತ ಬಡತನದ ಕುಟುಂಬವಾಗಿತ್ತು. ಆ ಬಡತನದ ನಡುವೆಯು ಕೂಡ ನಮ್ಮ ತಂದೆ ತಾಯಿ ನಮ್ಮನ್ನು ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಸೇರಿಸಿದ್ದರು. ನಾವು ವಿದ್ಯಾಭ್ಯಾಸ ಮಾಡುತ್ತಿದೇವು ನಂತರ ನಮ್ಮ ಮನೆ ಬೇರೆಡೆಗೆ ಬದಲಾಯಿಸಲಾಯಿತು. ನಮ್ಮ ತಂದೆ ತಾಯಿ ಬಹಳ ಶ್ರಮಜೀವಿಗಳು ನಾವು ಬೇರೆಯಾಗಿ ಬಂದನಂತರ ಅತ್ಯಂತ ಬಡತನದ ಬೇಗೆಯಲ್ಲಿ ನರಳುತ್ತಿತ್ತು. ಅಂತಹ ಸಮಯದಲು ಕೂಡ ನಮ್ಮ ತಂದೆ ತಾಯಿ ನಮಗೆ ಊಟಕ್ಕೆ ಮತ್ತು ನಮ್ಮ ವಿದ್ಯಾಭ್ಯಾಸಕ್ಕೆ ಯಾವುದೇ ಒಂದು ರೀತಿಯ ತೊಂದರೆಯನ್ನು ಮಾಡಲ್ಲಿಲ್ಲಾ. ಅಂದರೆ ಅವರು ಬಹಳ ಕಷ್ಟಪಟ್ಟು ನಮ್ಮ ವಿದ್ಯಾಭ್ಯಾಸವನ್ನು ಮಾಡಿಸಿದರು, ನಮಗೆ ಊಟ ಬಟ್ಟೆ ಬರೆಗಳನ್ನು ಕೊಡಿಸಿದರು. ಅತ್ಯಂತ ಬಡತನದಲ್ಲಿದ್ದ ಕಾರಣದಿಂದಾಗಿ ನಮ್ಮ ಜೀವನ ಸಧಾರಣ ಮಟ್ಟದಲ್ಲಿ ಇತ್ತು. ಆದರು ಕೂಡ ನಮ್ಮ ತಂದೆ ಪ್ರಾಮಾಣಿಕತೆಯನ್ನು ಮರೆಯಲ್ಲಿಲ್ಲಾ, ಸತ್ಯದ ನುಡಿಯಲ್ಲಿ ನಡೆದವರು ಧರ್ಮವಂತರಾಗಿ ಬಾಳಿದರು. ನಮ್ಮ ತಾಯಿಯು ಕೂಡ ಅತ್ಯಂತ ಶ್ರಮ ಜೀವಿ, ಅವರು ಕೂಡ ಅಪಾರ ಶ್ರಮಪಟ್ಟು ನಮ್ಮೆಲ್ಲರನ್ನು ಸಲಹಿದ್ದಾರೆ. ಬಹುಶಹ ನಮ್ಮ ಅಪ್ಪಾಜಿಯ ಮೌಲ್ಯಯುತ ದರ್ಶನ ಅವರ ಜೀವನದ ಅನೇಕ ಹಾಗು ಹೋಗುಗಳು ನಮ್ಮಗೆಲ್ಲರಿಗೂ ಇಂದು ಸ್ಪೂರ್ತಿದಾಯಕವಾಗಿದೆ. ಬಹುಶಹ ನಮ್ಮ ತಂದೆಯಲ್ಲಿರುವಂತಹ ತಾಳ್ಮೆ ಆಪಾರ ಸಾಗರದಷ್ಟಿತ್ತು, ಅದೆಲ್ಲವನ್ನು ನಾವು ಗ್ರಹಿಸಿದೆವು ನಮ್ಮ ತಂದೆಯ ಜೀವನವೇ ನಮ್ಮಗೆಲ್ಲರಿಗೂ ಆದರ್ಶ. ಅಮ್ಮನಿಗೆ ಕಷ್ಟಪಡುವುದೆಂದರೆ ಬಹಳ ಬೇಸರದ ಸಂಗತಿಯಾಗಿತ್ತು. ಅನುದಿನವು ನಾವು ಕಷ್ಟಪಡುತ್ತಿರ ಬೇಕು ಒಂದು ದಿನಕಾದರು ನಮಗೆ ಸುಖ ಬೇಕೆಂದು ಬಯಸುತ್ತಿದ್ದರು. ಅಂತಹ ವಾತಾವರಣದಲು ಕೂಡ ನಾವು ಬೆಳೆಯುತ್ತ ಮುಂದಕ್ಕೆ ಸಾಗಿದೆವು. ಕ್ರಮೇಣವಾಗಿ ನಮ್ಮ ವಿದ್ಯಾಭ್ಯಾಸದ ಮುಂದಿನ ಹಂತಗಳನ್ನು ನಾವು ದಾಟಿ ಹೋದೆವು. ನಮ್ಮ ದೊಡ್ಡಣ್ಣ ಜಯಕೀರ್ತಿ ಯವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಜ್ಜಿ ಮನೆಗೆ ಸೇರಿದರು. ಹಾಗೆಯೆ ಅಲ್ಲಿಯೇ ಇದ್ದು ಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸಿ. ನಂತರ ಧರ್ಮಸ್ಥಳದ ಉಜಿರೆ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಇದೆಲ್ಲವು ನಮಗೆ ಒಂದು ಸೊಜಿಗದ ರೀತಿ ಕಾಣುತ್ತಿತು. ಶಾಲೆಯ ದಿನಗಳು ಅತ್ಯಂತ ಬಡತನದಲ್ಲಿದರು ಕೂಡ ನಾವು ಅತ್ಯಂತ ಪ್ರೀತಿಯಿಂದ ಬಾಳುತ್ತಿದೆವು. ನಮಗೆಲ್ಲರಿಗೂ ಕೂಡ ಒಂದೇ ಬುತ್ತಿ ಒಂದೇ ಚೀಲ ಒಂದೇ ಛತ್ರಿ ಗಳಂತೆ ಇತ್ತು ನಮ್ಮ ಜೀವನ. ಈ ರೀತಿ ಸಾಗುತ್ತಿರ ಬೇಕಾದರೆ ನಮ್ಮ ಅಣ್ಣನ ವಿದ್ಯಾಭ್ಯಾಸವು ಮುಗಿದು ಅತನಿಗೆ ಸರಕಾರಿ ಉದ್ಯೋಗ ದೊರೆಯಿತು. ಆ ಮೂಲಕ ಆತ ನಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಬೆನ್ನೇಲುಬಾಗಿ ನಿಂತ. ತನ್ನ ದುಡಿಮೆಯ ಸಂಪತ್ತನ್ನು ನಮ್ಮ ಏಳಿಗೆಗಾಗಿ ನಮ್ಮ ಮನೆ ಏಳಿಗೆಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆತ ವಿನಿಯೋಗಿಸಿದ ಅದಕ್ಕಾಗಿ ನಾವು ಒಂದು ಜೀವನದ ಒಂದು ರೀತಿಯ ಮಟ್ಟವನ್ನು ತಲುಪಿದೆವು.
ಸಂದರ್ಶಕರು :- ನಾವು ಶಾಲೆಗೆ ಹೋಗ ಬೇಕಾದರೆ ಸ್ವಾತಂತ್ರ್ಯ ದಿನಾಚರಣೆ ಬಂದರೆ ನಾವು ಭಗತ್ ಸಿಂಗ್ ರವರನ್ನು ಆರಾಧ ಪುರುಷರನ್ನಾಗಿ ನೋಡುತ್ತೇವೆ. ಪಠ್ಯಪುಸ್ತಕಗಳಲ್ಲಿ ಬರುವಂತಹ ಮಹಾನ್ ವ್ಯಕ್ತಿಗಳನ್ನು ನೋಡಿದಾಗ ಅವರು ನಮಗೆ ಸ್ಪೂರ್ತಿಯಾಗುತ್ತಾರೆ. ನಿಮ್ಮ ಶಾಲಾ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಸ್ಪೂರ್ತಿ ಎಂದು ಯಾರನ್ನು ಪರಿಗಣಿಸಿದ್ದಿರಿ.
ನಿರಂಜನ್ ಜೈನ್ ಕುದ್ಯಾಡಿ :- ಶಾಲದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ, ಆಟೋಟ ಸ್ಪರ್ಧೆಗಳಲ್ಲಿ ನಾನು ಭಾಗವಹಿಸುತ್ತಿರಲಿಲ್ಲ, ಕಾರಣ ನನ್ನದು ಕ್ರಿಶ್ಯ ಶರೀರವಾಗಿತ್ತು ಆಗಾಗಿ ನಾನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಭಾಷಣ ಸ್ಪರ್ಧೆಯಲ್ಲಿ ನಾನು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದೆ. ನಂತರ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತೀರ್ವ ಆಸಕ್ತಿ ಉಂಟಾಗಿ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ಆದರೆ ಶಾಲೆಯ ಕೆಲವು ಮಕ್ಕಳ ಸಹವಾಸದಿಂದಾಗಿ ಶಾಲೆಗೆ ಚಕರ್ ಹೊಡೆದು ಸಿನಿಮಗಳನ್ನು ನೋಡುವುದು ಅದು ಕೇವಲ 4 ರೂ ಗಳಲ್ಲಿ ಸಿನಿಮವನ್ನು ನೋಡುತ್ತಿದೇವು. ಅದು ಒಂದು ರೀತಿಯಲ್ಲಿ ಬಹಳ ಆನಂದದಾಯಕ ಜೀವನವಾಗಿತ್ತು. ಆಗೆಯೇ ನಾವು ಶಾಲಾ ದಿನಗಳಲ್ಲಿ ನಮ್ಮ ತಂದೆ ತಾಯಿ ಕೃಷಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವಾಗ ನಾವು ಮಕ್ಕಳೇಲ್ಲ ಸೇರಿ ಆಟವಾಡುತ್ತಿದೇವು. ಅದೊಂದು ರೀತಿಯ ಸೊಜಿಗದ ಆನಂದದ ಹಾಗೂ ಮರೆಯಲಾಗದ ಕ್ಷಣವಾಗಿತ್ತು.
ಸಂದರ್ಶಕರು :- ಅಮ್ಮನ ಪ್ರೀತಿ ಅಪ್ಪನ ಸಲಹೆ ಗುರು ಕಲಿಸಿದ ವಿದ್ಯೆ ಅದೇರೀತಿ ಕುಟುಂಬದವರು ಕೊಟ್ಟಂತಹ ಸಂಸ್ಕಾರ ಒಂದು ಹಂತದಲ್ಲಿ ಬಡತನ ಇದ್ದರು ಕೂಡ ಬಾಲ್ಯದಲ್ಲಿ ತಾವು ಸ್ವಲ್ಪ ಒಳ್ಳೆ ರೀತಿಯಲ್ಲಿ ಇದ್ದಂತವರು. ಆದರೆ ತಾವು ಏಕಾಏಕಿಯಾಗಿ ತಾವು ಆರೋಗ್ಯ ದೃಷ್ಟಿಯಿಂದ ತಮ್ಮ ಕಾಲುಗಳಲ್ಲಿ ಸ್ಥಿಮಿತವನ್ನು ಕಳೆದುಕೊಂಡು. ಒಂದು ಹಂತದಲ್ಲಿ ನೀವು ಮನೆಯಲ್ಲಿ ಬಂಧಿಯಾಗುತ್ತೀರಿ, ಹೊರ ಪ್ರಪಂಚದ ಸಂಪರ್ಕವೇ ಇರುವುದಿಲ್ಲ. ಇದರಿಂದ ನಿಮಗೆ ಯಾಗ ರೀತಿಯ ಆಘಾತವಾಯಿತು.
ನಿರಂಜನ್ ಜೈನ್ ಕುದ್ಯಾಡಿ :- ಕ್ರಮೇಣವಾಗಿ ನನ್ನದು 10 ನೇ ತರಗತಿ ಮುಗಿಯುತ್ತಿದಂತೆ. ನನ್ನ ಶರೀರ ಒಂದು ವಿಚಿತ್ರವಾದ ಕ್ಷೀಣತೆಯನ್ನು ಆವರಿಸಿತು. ಇದು ನಮ್ಮ ತಂದೆ ತಾಯಿಗೆ ಆತಂಕವನ್ನು ಉಂಟುಮಾಡಿತು. ಆದರೆ ಕ್ರಮೇಣವಾಗಿ ಕ್ಷೀಣತೆ ವೃದ್ದಿಯಾಗುತ್ತಾ ಹೋಯಿತು. ನನ್ನ ಕೈ ಕಾಲುಗಳಲ್ಲಿ ಇಡೀ ಶರೀರದಲ್ಲಿ ಸ್ವಾದಿತೆಯು ನನ್ನಿಂದ ದೂರವಾಗುತ್ತಿದೆ ಎಂದು ನನಗೆ ಬಾಸವಾಯಿತು. ಮೇಟಿಲುಗಳನ್ನು ಹತ್ತುವುದು ಬಸ್ಸನ್ನು ಹತ್ತುವುದು ಮುಂತಾದ ಕೆಲಸ ಕಾರ್ಯಗಳಲ್ಲಿ ನನಗೆ ಬಹಳ ತ್ರಾಸದಾಯಕವಾಗುತ್ತಿತ್ತು. ಕೃಷಿ ಕೆಲಸಗಳಲ್ಲಿ ನಾನು ತೊಡಗಿಸಿಕೊಳ್ಳುತ್ತಿದ್ದೆ ಆದರೆ ನನ್ನ ಶರೀರದ ಕ್ಷೀಣತೆಯ ಒಂದು ಪ್ರಭಾವ ಗೋಚರವಾಗತೊಡಗಿತು. ಇದರಿಂದ ನೊಂದಂತಹ ನನ್ನ ತಂದೆ ತಾಯಿಗಳು ಅನೇಕ ವೈದ್ಯರುಗಳ ಶುಶ್ರೂಷೆಯನ್ನು ಮಾಡಿಸಿದರು ಆದರೆ ಇದ್ಯಾವುದು ಫಲಕಾರಿಯಾಗಲಿಲ್ಲ. ಮತ್ತೊಂದು ದಿನ ಮಂಗಳೂರಿನ ಕೆ ಎಂ ಸಿ ಆಸ್ಪತ್ರೇಗೆ ಹೋದಾಗ ಅಲ್ಲಿ ನನ್ನ ಕಾಯಿಲೆ ಪರಿಣಾಮವನ್ನು ತಿಳಿಸಿದರು. ಇದರಿಂದ ಬಾಲ್ಯಾವಸ್ಥೆ ಇದ್ದ ಕಾರಣ ಆ ಕಾಯಿಲೆ ಬಗ್ಗೆ ನಾನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಅ ನಂತರ ನಾನು ಕಾಲೇಜಿಗೆ ಹೋಗ ಬೇಕೆಂಬ ಆಸೆ ನುಚ್ಚುನೂರಾಯಿತು. ಉನ್ನತ ಶಿಕ್ಷಣವನ್ನು ಪಡೆದು ಉನ್ನತ ವಿದ್ಯಾಭ್ಯಾಸವನ್ನು ಪಡೆದು ನಾನು ನನ್ನ ತಂದೆ ತಾಯಿಯನ್ನು ನನ್ನ ಸಹೋದರರಂತೆ ಇರ ಬೇಕೆಂಬ ಆಸೆ ನುಚ್ಚುನೂರಾಯಿತು.
ಕ್ರಮೇಣ ಶರೀರದ ಕ್ಷೀಣತೆ ವೃದ್ದಿಯಾದಂತೆ ನನ್ನಲಿ ಸಂಕೋಚ ಅವರಿಸಿತು. ಹೊರಗಿನ ಪ್ರಪಂಚಕ್ಕೆ ನಾನು ತೆರೆದು ಕೊಳ್ಳಲು ಬಹಳ ಸಂಕೋಚವಾಯಿತು. ಯಾರೊಡನೆಯು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಯರಾದರು ನನ್ನ ಶರೀರದ ಕ್ಷೀಣತೆಯ ಬಗ್ಗೆ ನನ್ನು ಪ್ರಶ್ನೆಮಾಡುತ್ತಾರೆಂದು ನಾನು ಬಹಳ ಸಂಕೋಚಪಟ್ಟೆ. ಅದರಿಂದಾಗಿ ನಾನು ಹೋರಗಿನ ಪ್ರಪಂಚಕ್ಕೆ ಅಂದರೆ ಬೇರೆಡೆಗೆ ಹೋಗಲು ನಾನು ಇಷ್ಟ ಪಡುತ್ತಿರಲಿಲ್ಲ. ಆದರೆ ಕಾಲ ಕ್ರಮೇಣವಾಗಿ ನನಗೆ ಹೋರಗಿನ ಪ್ರಪಂಚಕ್ಕೆ ಕಾಲಿಡಲು ಸಹ ಸಾಧ್ಯವಾಗುತ್ತಿರಲಿಲ್ಲ. ನನ್ನ ಶರೀರ ಕ್ಷೀಣತೆ ಅಷ್ಟೋಂದು ನನ್ನನ್ನು ಬಾಧಿಸತೊಡಗಿತು.
ಸಂದರ್ಶಕರು :- ನಿರಂಜನ್ ಕುದ್ಯಾಡಿ ಎನ್ನುವ ಪ್ರತಿಭೆ ಸಮಾಜಕ್ಕೆ ಪರಿಚಯವಾಗಿದ್ದು ಕೊರೋನದ ಸಂದರ್ಭದಲ್ಲಿ ಅದಕ್ಕಿಂತ ಮುಂಚೆ ತಾವು ಸಮಯವನ್ನು ಹೇಗೆ ಕಳೆಯುತ್ತಿದ್ದಿರಿ. ಅದೇ ರೀತಿ ಜೈನ ಧರ್ಮದ ಬಗ್ಗೆ ಬಹಳಷ್ಟು ತಿಳಿದು ಕೊಂಡಿದ್ದೀರಿ ಇದು ಯಾವಾಗ ಪ್ರಾರಂಭವಾಯಿತು ನೀವು ಯಾವಾಗ ಪ್ರಾರಂಭಮಾಡಿದ್ದು.
ನಿರಂಜನ್ ಜೈನ್ ಕುದ್ಯಾಡಿ :- ಮನೆಯಲ್ಲಿ ಇದ್ದುಕೊಂಡು ನನಗೆ ಏಕಾಂಗಿತನ ಆವರಿಸತೊಡಗಿತು. ಇದರಿಂದಾಗಿ ನಾನು ಮಾನಸಿಕವಾಗಿ ಕುಬ್ಜನಾಗತೊಡಗಿದೆ. ಮಾನಸಿಕವಾಗಿ ರೋದಿಸತೊಡಗಿದೆ. ಆದರೆ ಅದೆಲ್ಲವನ್ನು ನುಗ್ಗಿ ಮುನ್ನಡೆಯುತ್ತ ಬಂದೆ ಮನೆಯಲ್ಲಿ ಅನೇಕ ಔಷದಿ ಮಾಡುತ್ತ ಬಂದರು, ಆದರೆ ಅದ್ಯಾವುದು ಪಲಿಸಲಿಲ್ಲ. ಆದರೆ ನನ್ನಲ್ಲಿ ಆತ್ಮವಿಶ್ವಾಸವೆನ್ನುವುದು ನನ್ನ ಮನದ ಮೂಲೆಯಲ್ಲಿ ಅಡಗಿತ್ತು, ಕ್ರಮೇಣವಾಗಿ ನಾನು ಯಾವುದಾದರು ಒಂದು ಅವ್ಯಾಸಕ್ಕೆ ಅಂಟಿಕೊಳ್ಳ ಬೇಕೆಂದು ಬಯಸಿದೆ. ಅದಕ್ಕೆ ನಾನು ಕಂಡುಕೊಂಡಂತಹ ದಾರಿ ಕಾದಂಬರಿಗಳನ್ನು ಓದುವುದು. ಗ್ರಂಥಾಲಯದಿಂದ ಕಾದಂಬರಿಗಳನ್ನು ತರಿಸಿ ಓದಿ ಮುಗಿಸುತ್ತಿದೆ. ಅನೇಕ ಪತ್ತೆದಾರಿ ಕಾದಂಬರಿಗಳನ್ನು ನಾನು ಓದುವ ಹವ್ಯಸವನ್ನಾಗಿ ಮಾಡಿಕೊಂಡೆ. ಪತ್ತೆದಾರಿ ಕಾಂಬರಿಗಳೆಂದರೆ ನನಗೆ ಬಹಳ ಅಚ್ಚು ಮೆಚ್ಚಾಗಿತ್ತು ಅನೇಕ ಕಾದಂಬರಿಗಳನ್ನು ಅಧ್ಯಾಯನ ಮಾಡಿರುವುದರಿಂದಾಗಿ ಜನರ ಜೀವನದ ಮಟ್ಟ ಸಮಾಜಿಕ ಸಮಸ್ಯೆಗಳು ಮತ್ತು ಸಮಾಜಿಕ ಮಟ್ಟದ ಪರಿಚಯವಾಯಿತು. ಆದರೆ ಕ್ರಮೇಣವಾಗಿ ನನ್ನ ಶರೀರದ ಕ್ಷೀಣತೆ ವೃದ್ದಿಯಾಗುತ್ತಲೆ ಇತ್ತು. ನನಗೆ ಮನೆಯಲ್ಲಿ ಸಮಯವನ್ನು ಕಳೆಯಲು ಟಿ ವಿ ಯನ್ನು ತಂದು ಕೊಡ ಬೇಕೆಂದು ಮನೆಯಲ್ಲಿ ಕೇಳಿಕೊಂಡೆ ಅಣ್ಣ ಟಿವಿಯನ್ನು ತಂದುಕೊಟ್ಟ ಟಿವಿಯಲ್ಲಿ ಬರುವಂತಹ ವಿವಿಧ ಕಾರ್ಯಕ್ರಮಗಳನ್ನು ನೋಡುತ್ತ ಕಾಲಕಳೆದೆ. ದಿನಕ್ಕೆ 5-6 ಸಿನಿಮವನ್ನು ನೋಡುವ ಹವ್ಯಾಸವನ್ನು ಇಟ್ಟುಕೊಂಡಿದೆ. ಅದರಲ್ಲು ಕೂಡ ವಿಷ್ಣುವರ್ಧನ್ ರವರ ಸಿನಿಮಗಳೆಂದರೆ ನನಗೆ ಬಹಳ ಅಚ್ಚುಮೆಚ್ಚಾಗಿತ್ತು. ಈಗೆ ಸಮಯವನ್ನು ಕಳೆಯುತ್ತಿರುವಾಗ ಕೆಲವು ಲೇಖನವನ್ನು ಬರೆಯ ಬೇಕು ಎಂದುಕೊಂಡೆ. ಕೆಲವು ಪತ್ರಿಕೆಗಳಿಗೆ ಲೇಖನವನ್ನು ಬರೆಯತೊಡಗಿದೆ. ಕೆಲವು ಪತ್ರಿಕೆಗಳು ನನ್ನ ಲೇಖನಗಳನ್ನು ಪ್ರಕಟಿಸಿದರು. ಪತ್ರಿಕೆಗಳು ನನಗೆ ಪ್ರೋತ್ಸಹವನ್ನು ಕೊಡಲಿಲ್ಲ ನನ್ನ ಲೇಖನಗಳನ್ನು ಸ್ವೀಕರಿಸಲಿಲ್ಲ.
ಈ ಪ್ರಪಂಚವು ಆಧುನಿಕ ಜಗತ್ತಿನತ್ತ ಅತ್ಯಂತ ವೇಗವಾಗಿ ಮುನ್ನುಗ್ಗುತಿತ್ತು. ನನ್ನ ಸ್ಥತಿ ಈಗೆ ಮುಂದುವರೆಯುತ್ತಿರುವಾಗ ನನಗೆ ನನ್ನ ಸಂಗಾತಿಯಾಗಿ ನನಗೆ ಒಂದು ಫೋನ್ ಸಿಕ್ಕಿತು. ಅದರ ಮೂಲಕ ನಾನು ನನ್ನ ಸಮಯವನ್ನು ವ್ಯಹಿಸತೊಡಗಿದೆ. ಮೋಬೈಲ್ ನಲ್ಲಿ ಬೇಡದ ಕೆಲಸವನ್ನು ಮಾಡುವುದರ ಬದಲಾಗಿ ಒಂದು ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ಹಂಚಬಹುದಲ್ಲ ಎಂಬ ಯೋಚನೆ ನನ್ನನ್ನು ಕಾಡತೊಡಗಿತು. ಅದಕ್ಕೆ ನಾನು ಮೊದಲಾಗಿ ಸಂದೇಶವನ್ನು ಎಲ್ಲ ಸಿಕ್ಕ ಸಿಕ್ಕ ನಂಬರಿಗೆ ಕಳುಹಿಸಿದೆ. ನನಗೆ ಸ್ನೇಹಿತರಿರಲಿಲ್ಲ ಆದರು ಕೂಡ ಸಿಕ್ಕ ಸಿಕ್ಕ ಪೇಪರ್ ನಲ್ಲಿ ಬರುವಂತಹ ನಂಬರ್ ಗಳಿಗೆ ಸಂದೇಶವನ್ನು ಕಳುಯಿಸಿದೆ. ಮೇಸೆಜ್ ಗುಂಪುಗಳಲ್ಲಿ ಸೇರಿಕೊಂಡು ಚುಟುಕು ಕವನಗಳನ್ನು ಬರೆಯುವಂತಹ ಅವಕಾಶವಿತ್ತು ಆ ಗುಂಪುಗಳಲ್ಲಿ ಚುಟುಕು ಕವನಗಳನ್ನು ಬರೆದೆ. ತದನಂತರ ಪ್ರಪಂಚ ವೇಗವಾಗಿ ಮುಂದುವರೆಯುತ್ತಿರುವಾಗ ಕೆಲವರಲ್ಲಿ ಟಚ್ ಸ್ಕರಿನ್ ಮೋಬೈಲ್ ಗಳನ್ನು ನೋಡಿದೆ. ನನಗು ಬೇಕೆಂದು ಮನೆಯಲ್ಲಿ ಹೇಳಿದೆ ಹೇಳಿದ ಕೂಡಲೆ ನನಗೆ ಮೋಬೈಲ್ ಬಂದೇಬಿಟ್ಟಿತು. ಆ ಮೋಬೈಲ್ ನನ್ನ ಜೀವನದ ದಿಕ್ಕನೇ ಬದಲಾಯಿಸಿತು. ಆ ಮೋಬೈಲ್ ನಲ್ಲಿ ಎನಾದರು ಮಾಡ ಬೇಕೆಂದು ಆಶಯವಾಯಿತು ಶುತಸ್ಕಂದ ಜಿನ ವಾಣಿ ವಾಟ್ಸ್ ಆಪ್ ಗ್ರೂಪ್ ನಲ್ಲಿ ನನ್ನನ್ನು ಸೇರಿಸಿಕೊಂಡರು. ದಿನ ಧರ್ಮ ಚರ್ಚೆ ನಡೆಯುತ್ತಿತು. ನನಗೆ ಧರ್ಮದ ಬಗ್ಗೆ ಬಹಳ ಆಸಕ್ತಿ ಇತ್ತು. ಆಚಾರ್ಯ ವಿದ್ಯಾನಂದ ಮುನಿ ಮಹಾರಾಜ ಸಾಗರರ ವಿದ್ಯಾನಂದ ವಾಣಿ ಓದಿದರ ಪರವಾಗಿ ನನಗೆ ಬಹಳ ಜೈನ ಧರ್ಮದ ಬಗ್ಗೆ ಶ್ರದ್ದೆ ಅಭಿಮಾನ ಮೂಡುತ್ತಿತು. ಜೈನ ಧರ್ಮ ಜಗತಿನಾಧ್ಯಂತ ಪವಿತ್ರ ಧರ್ಮ ಶ್ರೇಷ್ಠ ಧರ್ಮ ಹಾಗೂ ಆಹಿಂಸ ಪರಮೋಧರ್ಮ ಎಂದು ಸಾರಿದ ಧರ್ಮವೆಂದು ನನಗೆ ಬಹಳ ಹೆಮ್ಮೆಇತ್ತು. ಆ ಮೂಲಕ ಶುತಸ್ಕಂದ ಜಿನ ವಾಣಿ ವಾಟ್ಸ್ ಆಪ್ ಗ್ರೂಪ್ ಮೂಲಕ ನನಗೆ ಸಂದೇಹ ಬರುವಂತಹ ಅನೇಕ ಪ್ರಶ್ನೇಗಳನ್ನು ಕೇಳತೊಡಗಿದೆ. ಆ ಗ್ರೂಪ್ ನಲ್ಲಿ ನಾಡಿನ ಅನೇಕ ಮೂಲೆ ಮೂಲೆಗಳಿಂದ ಅನೇಕ ಸಹೃದಹಿ ಧರ್ಮ ಬಂದುಗಳಿದ್ದರು. ಅವರೆಲ್ಲರು ನನ್ನ ಪ್ರಶ್ನೇಗಳಿಗೆ ಉತ್ತರ ಕೊಡತ್ತಿದ್ದರು. ನನಗೆ ಜೈನ ಧರ್ಮದ ತೀರ್ಥಂಕರ ವಾಣಿಯಲ್ಲಿ ಅಥವಾ ದಿವ್ಯ ವಾಣಿಯಲ್ಲಿ ಮತ್ತಷ್ಟು ಏನೊ ಅಡಗಿದೆ ಎಂಬ ವಿಚಾರ ನನಗೆ ಬಾಸವಾಗತೊಡಗಿತು. ಅದಕ್ಕಾಗಿ ಸ್ವಧ್ಯಾಯಗಳನ್ನು ಮಾಡುತ್ತಿದೆ. ಅನೇಕ ಗ್ರಂಥಗಳನ್ನು ನಾನು ಓದಲು ಪ್ರಾರಂಬಿಸುತ್ತಿದೆ. ಅದನ್ನು ಓದಿದ ನಂತರ ಜೈನ ಧರ್ಮದ ಬಗ್ಗೆ ಮತ್ತಷ್ಟು ಅಭಿಮಾನ ಹೆಚ್ಚಾಯಿತು. ದಿವ್ಯ ವಾಣಿಯ ಮೂಲಕ ದೊರೆತಂತಹ ಸಂದೇಶಗಳು ಶಾಸ್ತ್ರಗ್ರಂಥಗಳಲ್ಲಿಇರುತ್ತಿತ್ತು. ಓದಿದ ನಂತರ ಜೈನ ಧರ್ಮ ಎಷ್ಟೊಂದು ವಿಶಾಲವಾಗಿದೆ ಜೈನ ಧರ್ಮಕ್ಕಾಗಿ ನಮ್ಮಂತಹ ಅನೇಕ ಯುವಕರು ಕೆಲಸ ಕಾರ್ಯಗಳನ್ನು ಮಾಡುವಂತಹ ಅವಕಾಶವಿರುತ್ತದೆ ಅದನ್ನು ನಾವೆಲ್ಲರು ಸಧುಪಯೋಗ ಪಡಿಸಿಕೊಳ್ಳ ಬೇಕೆಂಬ ಹಂಬಲ ಉಂಟಾಯಿತು. ಕವನಗಳ ಗ್ರೂಪ್ ನಲ್ಲಿ ಸಹ ನನ್ನನ್ನು ಸೇರಿಸಿದರು ನಂತರ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದೇನೆ. ಆದರೇ ಕವನಗಳಲ್ಲಿ ನಾನು ಹೆಚ್ಚಾಗಿ ಸಮಾಜಿಕ ಸಮಸ್ಯೆಗಳನ್ನು ಹಾಗೂ ಕೆಲವು ಅನೇಕ ರೀತಿಯ ಕವನಗಳನ್ನು ರಚಿಸುತ್ತಿದ್ದರು ಕೂಡ ನನಗೆ ಒಂದು ರೀತಿಯ ಹಾಸ್ಯಸ್ಪದವಾದ ಮತ್ತು ಶೃಂಗಾರ ಭರಿತ ಕವನಗಳನ್ನು ಬರೆಯುವುದೆಂದರೆ ಬಹಳ ಆಸಕ್ತಿ ಇತ್ತು. ಅಂತಹ ಕವನಗಳನ್ನು ನಾನು ಬರೆಯಲಾರಂಭಿಸಿದೆ ಅದಕ್ಕೆ ಎಲ್ಲರಿಂದಲು ಮೆಚ್ಚುಗೆ ಪ್ರಾರಂಭವಾಯಿತು. ಈ ಮೆಚ್ಚುಗೆ ನನಗೆ ಉತ್ತೇಜನವನ್ನು ನೀಡಿತು. ಅದರ ನಂತರ ಜೈನರ ಸಾಮಾಜಿಕ ಸಮಸ್ಯೆಗಳ ಲೇಖನ ಬರೆಬೇಕೆಂದು ನಾನು ಚಿಂತಿಸತೊಡಗಿದೆ. ಅದಕ್ಕಾಗಿ ನಾನು ಮುಂದಡಿ ಇಟ್ಟಾಗ ನಾನು ಲೇಖನಗಳನ್ನು ಬರೆದು ವಾಟ್ಸ್ ಆಫ್ ಮತ್ತು ಫೇಸ್ ಬುಕ್ ಮಾಧ್ಯಮಗಳಲ್ಲಿ ನಾನು ಪ್ರಚಾರ ಮಾಡಿದಾಗ ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿತು. ಜೈನಧರ್ಮಗಳ ಸಮಾಜಿಕ ಸಮಸ್ಯೆಗಳತ್ತ ನೇರವಾಗಿ ಬರೆಯೊಣ್ಣ ಎಂದು ನಾನು ಟೀಕೆಗಳ ಮೂಲಕವು ಕೂಡ ನೇರ ಮಾತುಗಳ ಮೂಲಕ ಲೇಖನವನ್ನು ಬರೆಯಲಾರಂಭಿಸಿದೆ. ಕೆಲವರು ನನ್ನ ಟೀಕಾ ಲೇಖನಗಳಿಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು ಕೂಡ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದವರೆ ಅಧಿಕ ಮಂದಿ ಇದ್ದರು.
ಜೈನ ಧರ್ಮಕ್ಕೆ ಹೋರಗಿನ ಸಮಾಜದಿಂದ ಬರುವಂತಹ ಅನೇಕ ಸಮಸ್ಯೆಗಳು ಮುಂದೆ ಬರಬಹುದಾದ ಸಮಸ್ಯೆಗಳು ಹಾಗೂ ವರ್ತಮಾನದ ಮೇಲೆ ಬರುವಂತಹ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾರಂಭಿಸಿದೆ. ಇದು ಜೈನೇತರ ಸಮಾಜಕ್ಕೆ ಒಂದು ರೀತಿಯ ಕೆಲವರು ಮುಜುಗರವನ್ನು ವ್ಯಕ್ತ ಪಡಿಸಿದರು ಕೆಲವರು ಆಕ್ಷೇಪವನ್ನು ವ್ಯಕ್ತಪಡಿಸಿದರು. ಕೇಲವು ಕರಾರುವಕ್ಕಾಗಿ ಲೇಖನವನ್ನು ಬರೆಯತೊಡಗಿದೆ ಇದರಿಂದಾಗಿ ನನ್ನ ಲೇಖನವು ಪತ್ರಿಕೆಯಲ್ಲಿ ಮುದ್ರಣವಾಗತೊಡಗಿದವು. ನಾನು ಮತ್ತಷ್ಠು ಉತ್ಸಾಹಗೊಂಡು ಜೈನ ಧರ್ಮದ ಬಗೆಗಿನ ಸಮಾಜಿಕ ಸಮಸ್ಯೆಗಳತ್ತ ಧಾರ್ಮಿಕ ಸಮಸ್ಯೆಗಳತ್ತ ಅನೇಕ ಲೇಖನಗಳನ್ನು ನಾನು ಬರೆಯತೊಡಗಿದೆ. ಕೆಲವು ಜೈನರೆ ಆಕ್ಷೇಪ ವ್ಯಕ್ತಪಡಿಸಿದುಂಟು, ಜೈನೇತರ ಸಮಾಜದಿಂದಲು ಕೂಡ ನನಗೆ ಬೆದರಿಕೆಯನ್ನು ಹಾಕುತ್ತಿದ್ದರು. ಕೆಲವು ಕವನಗಳಿಗೆ ಜೈನೇತರಿಂದ ವಿರೋದವನ್ನು ವ್ಯಕ್ತಪಡಿಸಿದ್ದಾಗ ನಾನು ಗಂಭೀರವಾಗಿ ಪರಿಗಣಿಸಲ್ಲಿಲ್ಲ. ಅನೇಕರು ಪರಿಚಯವಾದರು ರತ್ನಕಂಡಕ ಶ್ರಾವಕಚಾರ ಎಂಬ ಸ್ವಾಧ್ಯಾಯಗಣ ಮೊದಲಾಗಿ ತೆರೆಯಲ್ಪಟ್ಟಿತು ಅದರಲ್ಲಿ ಸ್ವಾಧ್ಯಾಯವನ್ನು ಮಾಡುತ್ತಿದ್ದರು. ಸ್ವಾಧ್ಯಾಯ ತರಗತಿಗೆ ಸೇರಿದ ಕೂಡಲೆ ನನಗೆ ಮತ್ತಷ್ಟು ಜೈನ ಧರ್ಮದ ಬಗ್ಗೆ ತಿಳಿದುಕೊಳ್ಳವ ಅವಕಾಶ ದೊರೆಯಿತು.
ಸಂದರ್ಶಕರು :- ಶತಸ್ಕಂದ ಜಿನವಾಣಿ ವಾಟ್ಸ್ ಆಫ್ ಗ್ರೂಪ್ ಗಳಲ್ಲಿ ಕವಿತೆಗಳನ್ನ ಕವನಗಳನ್ನ ಬರೆಯುತ್ತಾ ಇದ್ದೀರಿ, ನಂತರದ ದಿನಗಳಲ್ಲಿ ಧಾರ್ಮಿಕ ವಿಷಯಗಳಲ್ಲಿ ಬಹಳಷ್ಟು ತೊಡಗಿಸಿಕೊಳ್ಳುತ್ತೀರಿ. ಇದಕ್ಕೆ ಸ್ಪೂರ್ತಿಯಾರು .
ನಿರಂಜನ್ ಜೈನ್ ಕುದ್ಯಾಡಿ :- ಕೆಲವರು ನನ್ನ ಲೇಖನಗಳನ್ನು ಮೆಚ್ಚಿ ನನಗೆ ಕರೆ ಮಾಡುತ್ತಿದ್ದರು. ಕರ್ನಾಟಕದಲ್ಲಿ ಜೈನ ಧರ್ಮದ ಪೇಸ್ ಬುಕ್ ಪೇಜ್ ನ ಚಿತ್ತ ಜಿನೇಂದ್ರ ಕೂಡ ಹೌದು. ಅವರು ಕರೆಮಾಡಿ ನಾವೊಂದು ಹೊಸದಾಗಿ ಕಾರ್ಯಕ್ರಮ ಮಾಡೋಣ್ಣ ಅದರಲ್ಲಿ ನೀವು ಜೊತೆಯಾಗಿದ್ದರೆ ಬಲ ಬರುತ್ತದೆ ಎಂದು ಕೇಳಿಕೊಂಡರು. ಜೈನ ಧರ್ಮದ ಯಾವುದೇ ಕೆಲಸ ಕಾರ್ಯಗಳಿರಲಿ ಯಾರೇ ಮಾಡುತ್ತಿರಲಿ ನಾನು ಶಾಮಿಲ್ ಹಾಗತೊಡಗಿದೆ. ಅದರ ಮೂಲಕ ನಾವು ಅನೇಕ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಿದೇವು. ರತ್ನಕರಂಡಕ ಶ್ರಾವಕಚಾರದ ಮೂಲಕವು ಮಾಡುತ್ತಾ ಬಂದೇವು. ಜ್ವಾಲಮಾಲ ನ್ಯೂಸ್ ನ ಮೂಲಕವು ನಾನು ಕಾರ್ಯಕ್ರಮದಲ್ಲಿ ಜೊತೆಯಾಗಿದೆ. ಇದರಿಂದ ನನಗೆ ಮತ್ತಷ್ಟು ಬಲ ಬಂದು ನಾನೇ ಸ್ವತಃ ನಿರಂಜನ ಲಹರಿ ಮಾಧ್ಯಮದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೇನೆ. ಹಲವಾರು ಕಾರ್ಯಕ್ರಮಗಳಲು ಕೂಡ ಜೊತೆಯಾಗಿ ಕಾರ್ಯಕ್ರಮಗಳನ್ನು ಆನ್ ಲೈನ್ ಮಾಧ್ಯಮದ ಮೂಲಕ ನಿರ್ವಾಹಣೆ ಮಾಡುವುದನ್ನು ಪ್ರಾರಂಭ ಮಾಡಿದೆ. ಜೈನ ಧರ್ಮಕ್ಕೆ ಸಂಬಂಧ ಪಟ್ಟಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಲ್ಲಿ ನನಗೆ ಬಹಳ ಪ್ರೋತ್ಸಹ ಬೆಂಬಲ ದೊರೆಯಿತು.
ಸಂದರ್ಶಕರು :- ಜೈನರ ಶಾಶ್ವತ ಸಿದ್ದ ಕ್ಷೇತ್ರ ಸಮ್ಮೇದ ಶಿಖರ್ಜಿ, ನಮ್ಮ ಜೀವನದಲ್ಲಿ ಒಮ್ಮೆಯಾದರು ಕೂಡ ದರ್ಶನ ಮಾಡ ಬೇಕು ಅನ್ನುವಂತಹದ್ದು ನಮ್ಮೆಲ್ಲರ ಆಸೆ ಅದೇ ರೀತಿ ನಿಮ್ಮಗೂ ಕೂಡ ಆಸೆ ಇರಬಹುದು ಆದರೆ ನೀವು ಇರುವಂತಹ ಪರಿಸ್ಥಿತಿಯಿಂದ ನಿಮಗೆ ಸಾಧ್ಯ ವಾಗುತ್ತದೆ ಎಂದು ಅಂದುಕೊಂಡಿದ್ದೀರ. ಶಾಶ್ವತ ಸಿದ್ದ ಕ್ಷೇತ್ರ ಸಮ್ಮೇದ ಶಿಖರ್ಜಿಗೆ ನೀವು ದರ್ಶನಕ್ಕೆ ಹೋಗುತ್ತೀರ ಅಲ್ಲಿ ಸಿದ್ದ ಕೂಟಗಳ ದರ್ಶನವನ್ನು ಮಾಡುತ್ತೀರ ಅಲ್ಲಿ ಆದಂತಹ ಅನುಭವವೇನು.
ನಿರಂಜನ್ ಜೈನ್ ಕುದ್ಯಾಡಿ :- ನನ್ನ ಮನೆಯ ಕೆಲ ಸದಸ್ಯರು ಸಮ್ಮೇದ ಶಿಖರ್ಜಿಯ ಯಾತ್ರೆಯನ್ನು ಮಾಡುತ್ತಿದ್ದರು ನಮ್ಮ ಬಂಧುಗಳು ಕೂಡ ಸಮ್ಮೇದ ಶಿಖರ್ಜಿ ಯಾತ್ರೆಯನ್ನು ಮಾಡುತ್ತಿದ್ದರು ಅವರುಗಳೆಲ್ಲ ಸಮ್ಮೇದ ಶಿಖರ್ಜಿ ಯಾತ್ರೆಯನ್ನು ಮಾಡುವಾಗ ನನ್ನಂತಹ ಒಬ್ಬ ಅತ ಭಾಗ್ಯನಿಗೆ ಶಿಕರ್ಜಿ ದರ್ಶನ ಮಾಡುವ ಯೋಗವಿಲ್ಲ ಎಂದು ಕೊರಗುತ್ತಿದೆ. ಬೆಂಗಳೂರಿನ ಸುಷ್ಮ ಗಣೆ ಯವರು ಒಂದು ದಿನ ನನಗೆ ಕರೆಯನ್ನು ಮಾಡಿದರು ಅವರ ಪರಿಚಿತರೊಬ್ಬರಾದ ನತ್ಮಲ್ ರಾಜಸ್ಥಾನ ಇವರ ಮೂಲಕ ಅವರು ಪರಿಚಯ ಮಾಡಿಸಿದರು. ನತ್ಮಲ್ ರವರು ರಾಜಸ್ಥಾನ ದವರಾಗಿದ್ದರು ಕೂಡ ನನ್ನ ಬಗ್ಗೆ ಒಂದು ವಿಶೇಷವಾದ ಅಭಿಮಾನವನ್ನು ಹೊಂದಿದ್ದು ನಿಮ್ಮಗೆ ಶಿಕರ್ಜಿ ದರ್ಶನವನ್ನು ಮಾಡಿಸುತ್ತೇನೆ ಅದರ ಖರ್ಚು ವೆಚ್ಚವನ್ನು ನಾನೆ ನೋಡಿಕೊಳ್ಳುತ್ತೇನೆ ಎಂದು ನನಗೆ ಭರವಸೆಯನ್ನು ಕೊಟ್ಟರು. ನನ್ನ ದೈಹಿಕ ಅಸಮರ್ಥದ ಕಾರಣದಿಂದಾಗಿ ಶಿಕರ್ಜಿ ಯಾತ್ರೆಯನ್ನು ನಾನು ಒಪ್ಪಲಿಲ್ಲ. ನನ್ನ ಜನ್ಮ ದಿನಕ್ಕೆ ಮೂಡುಬಿದ್ರೆಯ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಯವರು ನನಗೆ ಶಿಕರ್ಜಿ ದರ್ಶನದ ಯೋಗ ಬಂದಿದೆ ಎಂದು ಗೋಷಣೆಯನ್ನು ಮಾಡಿದರು. ನಾನು ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ನನ್ನಿಂದ ಶಿಕರ್ಜಿ ದರ್ಶನ ಖಂಡಿತ ಸಾಧ್ಯವಿಲ್ಲ ಎಂದು ನನಗೆ ಮನವರಿಕೆಯಾಗಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ನವೀನ್ ಜಾಂಬ್ಳೆಯವರ ನೇತೃತ್ವದಲ್ಲಿ ಎಲ್ಲ ಧರ್ಮ ಬಂಧುಗಳು ಸಭೆ ಸೇರಿ ನಿರಂಜನರನ್ನು ಶಿಕರ್ಜಿಯ ದರ್ಶನ ಮಾಡಿಸಲೇ ಬೇಕೆಂದು ಪಣತೊಟ್ಟರು. ಆದರೆ ನಾನು ಶಿಕರ್ಜಿ ದರ್ಶನ ಮಾಡುವವರೆಗು ಆಸಕ್ತಿಯನ್ನು ಹೊಂದಿರಲಿಲ್ಲ. ನನ್ನ ದೈಹಿಕ ಅಸಮರ್ಥ್ಯದ ಕಾರಣ ತಿಳಿದ್ದಿತ್ತು. ಅದರಿಂದ ಶಿಕರ್ಜಿ ದರ್ಶನ ಮಾಡುವಂತಹ ಯೋಗ ನನ್ನ ಪಾಲಿಗೆ ಇಲ್ಲ ಎಂದು ಕೊಂಡಿದ್ದೆ. ಆತ್ಮಿಯರಾದಂತಹ ಶ್ರೀ ಮಿತ್ರ ಸೇನ್ ಜೈನ್ ಅಳದಂಗಡಿಯವರು ಶಿಕರ್ಜಿ ದರ್ಶನದ ವಿವರವನ್ನು ನೀಡಿದರು ನಮ್ಮ ಮನೆಯವರು ಸಹ ಪ್ರೋತ್ಸಾಹದಾಯಕ ನುಡಿಗಳನ್ನಾಡಿದರು. ನವೀನ್ ಜಾಂಬ್ಳೆಯವರು ಹಾಗೂ ಧೀರಜ್ ಜೈನ್ ಹೊಳೆನರಸೀಪುರ ಇವರು ಭರತ ಬಾಹುಬಲಿಯಂತೆ ನನ್ನ ಜೊತೆಗಿದ್ದು ನನ್ನ ಶಿಕರ್ಜಿ ದರ್ಶನ ಮಾಡುವ ಸಂಕಲ್ಪ ಮಾಡಿದರು, ನಾಡಿನ ಅನೇಕ ಧರ್ಮ ಬಂಧುಗಳು ಕೈ ಜೋಡಿಸಿದರು. ನನಗೆ ಸಿಕ್ಕಂತಹ ಮಹಾ ಪುಣ್ಯವಾಗಿದೆ. ಶಿಕರ್ಜಿ ದರ್ಶನ ಮಾಡಲು ಹೋರಟ ಸಂದರ್ಭದಲ್ಲಿ ನಾನು ಅನೇಕ ಸ್ವಾಮೀಜಿಗಳ ದರ್ಶನ ಮಾಡಿದೆ ಆಶೀರ್ವಾದವನ್ನು ಪಡೆದೆ ಎಲ್ಲ ಪೂಜ್ಯ ಭಟ್ಟಾರಕರು ನನಗೆ ಆಶೀರ್ವದಿಸಿ ಬೆಂಬಲಿಸಿದರು. ಎಲ್ಲರ ಆಶೀರ್ವಾದವನ್ನು ಪಡೆದು ಶಿಕರ್ಜಿಯತ್ತ ಪಯಣವನ್ನು ಮುಂದುವರೆಸಿದೆ.
ಆ ಶಿಕರ್ಜಿಯ ದರ್ಶನದಲ್ಲಿ ನಿರಂಜನನನ್ನು ಕಂಡೆ ಅಂದರೆ ಶುದ್ದವಾದ ಪರಮಾತ್ಮನ ದರ್ಶನವನ್ನು ಮಾಡದೆ. ಅಂತಹ ಅಬೇದ್ಯವಾದ ಪರ್ವತ ಶ್ರೇಣಿಯನ್ನು ನಾನು ಹತ್ತಿದೆನೆಂದರೆ ನನಗೆ ಇಗಲು ಕನಸೇ ಎಂದು ತೋರುತ್ತಿದೆ. ಡೋಲಿಯಲ್ಲಿ ನನ್ನ ಪಯಣ ಡೋಲಿಯಲ್ಲಿ ನನ್ನನ್ನು ಸವಾರಿಸಿಕೊಂಡು ಮುನ್ನುಗಿದೆ. ಶೀಕರ್ಜಿಯ 24 ತೀರ್ಥಂಕರರ ಕೂಟಗಳನ್ನು ದರ್ಶನ ಮಾಡಿ ನಾನು ಪುನೀತನಾದೆ. ಅಂತಹ ಸೌಭಾಗ್ಯವನ್ನು ಕರುಣಿಸಿದಕ್ಕಾಗಿ ಎಲ್ಲ ಧರ್ಮ ಬಂಧುಗಳಿಗು ದನ್ಯವಾದವನ್ನು ಅರ್ಪಿಸುತ್ತೇನೆ. ಶಿಕರ್ಜಿ ದರ್ಶನಕ್ಕಿಂತ ಮೊದಲೇ ನನಗೆ ಧರ್ಮಸ್ಥಳದ ಡಿ ಸುರೇಂದ್ರ ಕುಮಾರ್ ದಂಪತಿಗಳು ನಮ್ಮ ಮನೆಗೆ ಆಗಮಿಸಿ ನನ್ನನ್ನು ಆಶೀರ್ವದಿಸಿದರು. ಅವರ ಪ್ರೀತಿ ವಿಶ್ವಾಸದಿಂದಾಗಿ ಅವರ ಆಶೀರ್ವಾದದ ಕಾರಣದಿಂದಾಗಿಯು ಕೂಡ ನನಗೆ ಶಿಕರ್ಜಿ ದರ್ಶನ ಅತ್ಯಂತ ಸುಗಮವಾಯಿತು. ಬಹುಶಹ ನನ್ನಂತಹ ಒಬ್ಬ ಕ್ಷೀಣ ಬಲದ ಒಬ್ಬ ವ್ಯಕ್ತಿಯನ್ನು ಶಿಕರ್ಜಿ ದರ್ಶನ ಮಾಡಿಸ ಬೇಕಾದರೆ ಅವರಿಗೆ ಗಂಡೆದೆಯು ಬೇಕು ಎಂಟೆದೆಯು ಬೇಕಾಗುತ್ತದೆ. ಅಂತಹ ಸಾಮರ್ಥ್ಯವನ್ನು ಮೈಗೂಡಿಸಿ ಕೊಂಡವರು ನವೀನ್ ಜಾಂಬ್ಳೆಯವರು ಹಾಗೂ ಧೀರಜ್ ಜೈನ್ ಹೊಳೆನರಸೀಪುರ ಬಹುಶಹ ಅವರ ಕೆಚ್ಚೆದೆಯ ಕಾರಣದಿಂದಾಗಿ ನನಗೆ ಶಿಕರ್ಜಿ ದರ್ಶನದ ಪ್ರಾಪ್ತಿಯಾಯಿತು. ಶಿಕರ್ಜಿ ದರ್ಶನದಲ್ಲಿ ನನ್ನ ನೆರೆ ಮನೆಯವನಾದ ಚಕ್ರಾಧರ್ ಕೂಡ ಭಾಗವಹಿಸಿದ್ದರು ಹಾಗೂ ನನ್ನ ತಮ್ಮ ಆಶೋಕ ಕೂಡ ನನ್ನ ಜೊತೆ ಇದ್ದರು. ಇವರೇಲ್ಲರ ಸಂಪೂರ್ಣ ಸಹಕಾರದಿಂದಾಗಿ ಶಿಕರ್ಜಿ ದರ್ಶನವನ್ನು ನಾನು ಯಶಸ್ವಿಯಾಗಿ ಮುಗಿಸಿದೆ.
ಸಂದರ್ಶಕರು :- ನೀವು ಬಹಳಷ್ಟು ಲೇಖನಗಳನ್ನು ಬರೆದಿದ್ದೀರಿ, ಶಿಕರ್ಜಿಗೆ ಹೋಗಿ ಬಂದ ನಂತರ ಶಿಕರ್ಜಿಯಲ್ಲಿ ನಿರಂಜನನ ದರ್ಶನ ಎಂದು ಪುಸ್ತಕವನ್ನು ಬರೆಯುತ್ತೀರಿ. ಅದೇ ರೀತಿ ಜಿನ ಭಕ್ತಿ ಲಹರಿ ಎಂದು ಪುಸ್ತಕವನ್ನು ಬರೆಯುತ್ತೀರಿ.ಈ ಪುಸ್ತಕದ ಸಂಪಾದನೆ ಹೇಗೆ ಆಯಿತು ಪ್ರಕಾಶನಕ್ಕೆ ಯಾರೇಲ್ಲ ಸಹಾಯ ಮಾಡಿದರು. ಇವತ್ತು ಯಾವುದಾದರು ಬರಹಗಳನ್ನು ಕೃತಿಗಳನ್ನ ಬರೆಯುತ್ತಿದ್ದೀರ. ಇದರ ಬಗ್ಗೆ ನಮಗೆ ಸ್ವಲ್ಪ ತಿಳಿಸಿ.
ನಿರಂಜನ್ ಜೈನ್ ಕುದ್ಯಾಡಿ :- ನಾನು ಮೂಲತಃ ಲೇಖಕನಾದ್ದರಿಂದ ಶೀಕರ್ಜಿ ಅನುಭವಗಳನ್ನು ತಾವು ಬರೆಯ ಬೇಕೆಂದು ಹಲವರು ನನ್ನು ಒತ್ತಾಯಿಸಿದರು. ಅವರ ಒತ್ತಾಯದ ಫಲವಾಗಿ ನಾನು ಶಿಕರ್ಜಿಯಲ್ಲಿ ನಿರಂಜನನ ದರ್ಶನ ಎಂಬ ಲೇಖನ ಮಾಲೆಯನ್ನು ಬರೆದೆ. ಈ ಲೇಖನ ಮಾಲೆಯು ಅನೇಕರ ಪ್ರಶಂಸನೆಗೆ ಒಳಗಾಯಿತು. ಓದಿದ ಅನೇಕ ಸಹೃದಹಿಗಳು ಇದನ್ನು ಪುಸ್ತಕ ಮಾಡ ಬೇಕೆಂದು ವಿನಂತಿಸಿಕೊಂಡರು. ಅವರ ಪ್ರೋತ್ಸಾಹದ ನುಡಿಗಳನ್ನು ಕೇಳಿ ಶಿಕರ್ಜಿಯಲ್ಲಿ ನಿರಂಜನನ ದರ್ಶನ ಎಂಬ ಯಲ್ಲಿ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕ ಪ್ರಕಟಣೆಗೆ ನನಗೆ ನೆರವಾದವರು ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ರವರು ಅವರು ನನಗೆ ಪ್ರಾರಂಭಿಕವಾಗಿ ಪ್ರೋತ್ಸಹದ ನುಡಿಗಳನ್ನಾಡಿ ಆರ್ಥಿಕ ಸಹಾಯವನ್ನು ನೀಡಿದರು.
ಪುಸ್ತಕವನ್ನು ಪ್ರಕಾಶನ ಮಾಡುತ್ತೇನೆಂದು ರತ್ನತ್ರೇಯ ದಾರವಾಹಿಯ ನಿರ್ದೇಶಕಿ ಹಾಗೂ ನಿರ್ಮಾಪಕಿಯದಂತಹ ಡಾ|| ನೀರಜಾ ನಾಗೇಂದ್ರ ರವರು ನನಗೆ ಬೆನ್ನೇಲುಬಾಗಿ ನಿಂತರು. ಅವರು ಪ್ರಕಾಶನ ಮಾಡುತ್ತೇನೆ ಎನ್ನುವ ಕಾರಣಕಾಗಿ ನಾನು ಶಿಕರ್ಜಿಯಲ್ಲಿ ನಿರಂಜನನ ದರ್ಶನ ಕೃತಿಯನ್ನು ಪ್ರಕಟಿಸ ಬೇಕೆಂದು ನಾನು ಅಂದುಕೊಂಡೆ. ಈ ಮುದ್ರಣವನ್ನು ಎಲ್ಲಿ ಮಾಡುವುದು ಎಂದು ಚಿಂತೆ ಕಾಡುತ್ತೀರುವಾಗ ನನಗೆ ಬೆಂಗಾವಲಾಗಿ ನಿಂತವರು ಶ್ವೇತಾ ನಿಹಾಲ್ ಜೈನ್ ರವರು ಖ್ಯಾತ ಲೇಖಕಿ ಕಾದಂಬರಿಕಾರರು ಕೂಡ ಹೌದು. ಅವರ ಸ್ವಂತ ಮುದ್ರಣ ಮಾಧ್ಯಮ ಇರುವ ಕಾರಣದಿಂದಾಗಿ ನನ್ನ ಪುಸ್ತಕವನ್ನು ನಾನು ಮುದ್ರಣ ಮಾಡಿಸುತ್ತೇನೆ. ಎಂದು ನನಗೆ ಭರವಸೆ ಇಟ್ಟರು. ಅವರ ಒಂದು ಸ್ನೇಹದ ಕಾರಣದಿಂದಾಗಿ ನನ್ನ ಶಿಕರ್ಜಿಯಲ್ಲಿ ನಿರಂಜನನ ದರ್ಶನ ಕೃತಿ ಪ್ರಕಟವಾಯಿತು. ಆದರೆ ಶಿಕರ್ಜಿಯಲ್ಲಿ ನಿರಂಜನನ ದರ್ಶನ ಕೃತಿ ಪುಸ್ತಕವನ್ನು ಎಲ್ಲಿ ಬಿಡುಗಡೆ ಮಾಡುವುದು ಎಂದು ಚಿಂತನೆ ಮಾಡವಾಗ ಅದೇ ನನ್ನ ಶಿಕರ್ಜಿ ದರ್ಶನ ಮಾಡಿಸಿದಂತಹ ನವೀನ್ ಜಾಂಬ್ಳೆ ಮತ್ತು ಧೀರಜ್ ಜೈನ್ ರವರು ಮುಂದೆ ಬಂದರು. ಆದರೆ ಅನಿವಾರ್ಯ ಕಾರಣದಿಂದ ಆ ಕಾರ್ಯಕ್ರಮ ಕೈಗೂಡಲಿಲ್ಲ. ಆದರೆ ನನ್ನ ಮಿತ್ರರಾದ ವಸಂತ ಕುಮಾರ್ ಬಂಗ ಕಾರ್ಕಳ ಮತ್ತು ಸನತ್ ಕುಮಾರ್ ಹೊಸಮಾರ್ ಇವರು ನನ್ನ ಪುಸ್ತಕ ಬಿಡುಗಡೆಗಾಗಿ ಟೋಂಕ ಕಟ್ಟಿ ನಿಂತರು. ನಮ್ಮ ಕಾರ್ಕಳದ ಜೈನ್ ಮಿಲನ್ ಮಾಜಿ ಅಧ್ಯಕ್ಷರಾದ ಮಾಲತಿ ವಸಂತ ರಾಜ್ ಕಾರ್ಕಳ ಇವರು ಕೂಡ ನನ್ನ ಪುಸ್ತಕ ಬಿಡುಗಡೆಗೆ ಅಭೂತ ಪೂರ್ವವಾದ ಸಹಕಾರವನ್ನು ನೀಡಿದರು. ಆದರೆ ತದನಂತರ ಆ ಕಾರ್ಯಕ್ರಮಕ್ಕೆ ಜೊತೆಯಾದವರು ಮೂಡುಬಿದ್ರೆಯ ಸಂದರ್ಶಕರಾದ ನೀವು ಮತ್ತು ಶಶಿಕಲಾ ಹೆಗ್ಗಡೆ ಕಾರ್ಕಳದವರು. ಈ ನಾಲ್ವರು ಕೂಡಿ ನನ್ನ ಪುಸ್ತಕವನ್ನು ನಾರವಿಯಲ್ಲಿ ಬಿಡಗಡೆ ಮಾಡಿದರು. ಅದೊಂದು ಅಚ್ಚುಕಟ್ಟಾದ ಮರೆಯಲಾಗದ ಸಮಾರಂಭ, ಕಾರ್ಯಕ್ರಮದಲ್ಲಿ ನನ್ನ ಪುಸ್ತಕ ಬಿಡುಗಡೆ ಗೊಂಡು ಹಲವಾರು ಜನರ ಕೈಗಳಲ್ಲಿ ಶಿಕರ್ಜಿಯಲ್ಲಿ ನಿರಂಜನನ ದರ್ಶನ ಕೃತಿ ಇದೆ.
ಸಂದರ್ಶಕರು :- ಧಾರ್ಮಿಕವಾಗಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದಕ್ಕೆ ಅನೇಕ ಸಂಘ ಸಂಸ್ಥೆಗಳು ಬಹಳಷ್ಟು ಪ್ರಶಸ್ತಿಗಳನ್ನ ಪುರಸ್ಕಾರಗಳನ್ನು ಕೊಟ್ಟು ಗೌರವಿಸಿದೆ. ಇದು ಇವತ್ತಿನ ಕಾರ್ಯ ಚಟುವಟಿಕೆಗಳಿಗೆ ಎಷ್ಟು ಅನುಕೂಲವಾಗುತ್ತಿದೆ.
ನಿರಂಜನ್ ಜೈನ್ ಕುದ್ಯಾಡಿ :- ಸಾಧಕನನ್ನು ಪ್ರಶಸ್ತಿಗಳು ಹರಸಿಕೊಂಡು ಬರುವುದು ಸಾಮಾನ್ಯ ಎಂದು ಹೇಳುತ್ತಾರೆ, ಆದರೆ ನಾನು ಅಂತಹ ಸಾಧಕನಲ್ಲ, ಆದರು ಕೂಡ ಅಳದಂಗಡಿ ಮಿತ್ರಸೇನ್ ಜೈನ್ ಅಳದಂಗಡಿ ಇವರು ಮೊದಲಾಗಿ ನನ್ನನ್ನು ಸನ್ಮಾನಿಸಿ ನನಗೆ ಆಶೀರ್ವಾದ ಮಾಡಿದರು. ನಂತರ ಹಲವಾರು ಸಂಘ ಸಂಸ್ಥೆಗಳು ಹಾಗೂ ಜೈನ ಸಮಾಜದ ಮುಂಖಡರುಗಳು ನನ್ನನ್ನು ಸನ್ಮಾನಿಸಿದರು, ಅದೇಲ್ಲವು ನನ್ನ ಕೆಲಸಕ್ಕೆ ಪ್ರೋತ್ಸಹ ಎಂದು ಎನಿಸಿದ್ದೇನೆ ಅವರ ಆಶೀರ್ವಾದ ಎಂದು ಎನಿಸಿಕೊಂಡಿದ್ದೇನೆ. ಕೆಲವರು ನಮ್ಮ ಮನೆಗೆ ಬಂದು ನನ್ನನ್ನು ಆಶೀರ್ವದಿಸಿದ್ದಾರೆ ನನ್ನನ್ನು ಅರಸಿದ್ದಾರೆ. ಪ್ರೋತ್ಸಾಹಿಸಿದ್ದಾರೆ. ಅನೇಕ ಅತಿಥಿಗಳು ನನ್ನ ಯೋಗಕ್ಷೇಮವನ್ನು ವಿಚಾರಿಸಿ ನನ್ನನ್ನು ಅರಸಿದ್ದಾರೆ. ಅನೇಕ ಪ್ರಶಸ್ತಿಗಳು ಬಂದವು ಮೂಡಿಬಿದ್ರೆ ಜೈನ್ ಮಿಲನ್ ಇಂದ ಕೋರೊನ ಸಮಯದಲ್ಲಿ ಮನೆಗೆ ಬಂದು ಅಧ್ಯಕ್ಷರಾದಂತಹ ಶ್ವೇತ ಮೇಡಂ ರವರ ಅಧ್ಯಕ್ಷತೆಯಲ್ಲಿ ನನಗೆ ನೀಡಿದರು.
ಸಂದರ್ಶಕರು :- ನಮ್ಮ ಸಮಾಜದಲ್ಲಿ ಸ್ತ್ರೀ ಆಭಿಷೇಕ, ರಾತ್ರಿ ಅಭಿಷೇಕ, ಯಕ್ಷ ಯಕ್ಷಿಯರ ಪೂಜೆಯ ಬಗ್ಗೆ ಬಹಳಷ್ಠು ದ್ವಂದ್ವವಿದೆ ಇದರಿಂದ ನಮ್ಮ ಯುವ ಜನತೆ ದ್ವಂದ್ವದಲ್ಲಿ ಇದ್ದಾರೆ, ಹಾಗಾಗಿ ಆಗಮಾತ್ಮಕವಾಗಿ ಹೇಗೆ ಹೇಳುತ್ತೀರಿ, ಇವತ್ತಿನ ಸಮಾಜಿಕ ಜೀವನ ಶೈಲಿಯಲ್ಲಿ ನಿಮ್ಮ ನಿಲುವು ಏನು.
ನಿರಂಜನ್ ಜೈನ್ ಕುದ್ಯಾಡಿ :- ನಮ್ಮ ಜೈನ ಧರ್ಮಕ್ಕೆ ಸಮಾಜಿಕ ಸಮಸ್ಯೆಗಳು ಧಾರ್ಮಿಕ ಸಮಸ್ಯೆಗಳು ಆನೇಕ ಇವೆ, ಅದರಲ್ಲಿ ಒಂದು ಸ್ತ್ರೀ ಆಭಿಷೇಕ, ಯಕ್ಷ ಯಕ್ಷಿ ಪೂಜೆ, ರಾತ್ರಿ ಅಭಿಷೇಕ ಮಾಡುವುದು ಬೇಡವ ಎಂದು. ಇನ್ನು ಇತರ ಹಲವಾರು ಸಮಸ್ಯೆಗಳಿವೆ. ನನ್ನ ಅನಿಸಿಕೆಯ ಪ್ರಕಾರ ಈ ಎಲ್ಲ ಸಮಸ್ಯೆಗಳು ನಮ್ಮ ನಮ್ಮೊಳಗೆ ಇರಬೇಕೆ ಹೊರತು ಅದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದು ನಿಂದಿಸುವುದು ಅಥವಾ ಪ್ರೋತ್ಸಾಹಿಸುವುದನ್ನು ನಾವು ಮಾಡಬಾರದು. ನಮ್ಮಗೆ ಇಷ್ಟ ಬಂದ ಆಚಾರಗಳನ್ನು ಅಥವಾ ಶಾಸ್ತ್ರೋಕ್ತವಾಗಿ ತಿಳಿದ ವಿಚಾರಗಳನ್ನು ಆಚರಣೆ ಮಾಡಿಕೊಂಡು ಬಂದು ಸಮಾಜ ಮುಖಿಯಾಗಿ ಇರಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸಂದರ್ಶಕರು :- ನಿಮ್ಮ ಇಷ್ಟೇಲ್ಲ ಬೆಳವಣಿಗೆ ಹಿಂದೆ ನಿಮ್ಮ ಮನೆಯವರು ಬಂಧು ಮಿತ್ರರು ಜೊತೆಗಿದ್ದಾರೆ ಎಂದು ಹೇಳುತ್ತೀರಿ, ಅವರ ಬಗ್ಗೆ ಹೇಳುವುದಾದರೆ.
ನಿರಂಜನ್ ಜೈನ್ ಕುದ್ಯಾಡಿ :- ಕೊನೆಯದಾಗಿ ನಾನು ಏನು ಹೇಳ ಬೇಕೆಂದರೆ ನಾನು ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದು ನೀವು ಪ್ರೋತ್ಸಹ ಮಾಡುತ್ತಿದ್ದೀರಿ ನನ್ನನ್ನು ಬೆಂಬಲಿಸುತ್ತಿದ್ದೀರಿ. ಆದರೆ ಈ ಎಲ್ಲ ಕೆಲಸ ಕಾರ್ಯಗಳಿಗೆ ನನಗೆ ಪ್ರಮುಖವಾಗಿ ಬೆಂಬಲ ನೀಡುವವರು ನನ್ನ ಮನೆಯ ಸದಸ್ಯರು, ನನ್ನನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ. ನನ್ನ ಬೇಕು ಬೇಡಗಳನ್ನು ಪೂರೈಸುತ್ತಿದ್ದಾರೆ. ನನಗೆ ಈ ಕ್ಷಣದಲ್ಲಿ ನನ್ನ ಕುಟುಂಬದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಯಾಕೆಂದರೆ ನನ್ನ ಪ್ರೀತಿಯ ನನ್ನ ಕುಟುಂಬದ ಸದಸ್ಯರು ಸಧಾ ನನ್ನ ಜೊತೆಗೆ ಇದ್ದು ನನಗೆ ಪ್ರೋತ್ಸಹ ಬೆಂಬಲ ನೀಡುತ್ತಿದ್ದಾರೆ. ಸಮಾಜದ ಅನೇಕರು ಕೂಡ ನನಗೆ ಪ್ರೋತ್ಸಹವನ್ನು ನೀಡುತ್ತಿದ್ದಾರೆ. ನತ್ಮಲ್ ಜೀ ರಾಜಸ್ಥಾನ ರವರು ನನಗೆ ಆರ್ಥಕವಾಗಿ ಕೂಡ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಪೂಣ್ಯದ ಕಾರಣದಿಂದಾಗಿ ಇವರೆಲ್ಲರು ನನಗೆ ಬೆಂಗಾವಲಾಗಿ ನಿಂತಿದ್ದಾರೆ. ನನ್ನ ಬಹು ಜನ್ಮದ ಪುಣ್ಯದ ಕಾರಣದಿಂದಾಗಿ ಎಂದು ನಾನು ಭಾವಿಸುತ್ತೇನೆ.
ಸಂದರ್ಶಕರು :- ಕೊನೆಯದಾಗಿ ನಮ್ಮ ಸಮಾಜಕ್ಕೆ ನಿಮ್ಮ ಒಂದು ಸಂದೇಶವೇನು.
ನಿರಂಜನ್ ಜೈನ್ ಕುದ್ಯಾಡಿ :- ಜೈನ ಧರ್ಮದಲ್ಲಿ ಗಂಭೀರ ಸಮಸ್ಯೆಯೊಂದು ನಮ್ಮನ್ನು ಕಾಡುತ್ತಿದೆ. ಈಗಿನ ಯುವ ಜನಾಂಗಕ್ಕೆ ಸರಿಯಾದ ವಧು-ವರರು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜೈನ ಸಮಾಜ ಗಂಭೀರವಾಗಿ ಚಿಂತಿಸಲೇ ಬೇಕು ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜೈನರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುವ ಎಲ್ಲ ಲಕ್ಷಣಗಳಿದೆ.
ಸಂದರ್ಶಕರು :- ಹಿರಿಯರು ಒಂದು ಮಾತು ಹೇಳಿದ್ದಾರೆ, ನಮ್ಮ ನಮ್ಮ ವಿಚಾರಗಳಿಗೆ ನಾವು ಎಲ್ಲಿಯವರೆಗು ಬದ್ದರಾಗಿರುತ್ತೇವೆಯೋ ಅಲ್ಲಿಯವರೆಗು ಸೋಲು ಸುಳಿಯುವುದೇ ಇಲ್ಲ ಎಂದು. ಅದೇರೀತಿ ಇವತ್ತು ನೀವು ಸೋಲಿಲ್ಲದ ಸರದಾರ ಹಾಗಿದ್ದೀರಿ. ನೀವು ಕೈಗೊಂಡಂತಹ ಎಲ್ಲ ಕಾರ್ಯಕ್ರಮಗಳು ಅದು ಸ್ವಧ್ಯಾಯ ಕಾರ್ಯಕ್ರಮ ಇರಬಹುದು ಎಲ್ಲವು ಕೂಡ ಜನರ ಮೆಚ್ಚುಗೆಯನ್ನ ಗಳಿಸಿದೆ. ಇನ್ನೂ ಮುಂದೆಯು ಕೂಡ ಈ ಸಮಾಜಿಕ ಚಿಂತನೆಗಳು ಇದೇ ರೀತಿ ಮುಂದುವರೆಯಲಿ ಜಿನ ವಾಣಿ ಮಾತೆಯ ಸೇವೆ ನಿಮ್ಮಿಂದ ಇದೇ ರೀತಿ ನಡೆಯಲಿ ಎಂದು ಹೇಳಿ ನಾವು ಶುಭವನ್ನು ಹಾರೈಸುತ್ತೇವೆ.
ನಿರಂಜನ್ ಜೈನ್ ಕುದ್ಯಾಡಿ :- ಇಂದಿನ ಈ ಕಾರ್ಯಕ್ರಮದಲ್ಲಿ ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಜ್ವಾಲಮಾಲ ನ್ಯೂಸ್ ನ ಮೂಲಕ ನನ್ನನ್ನು ಪರಿಚಯಿಸಿದ್ದಕ್ಕಾಗಿ ಜ್ವಾಲಮಾಲ ನ್ಯೂಸ್ ನವರನ್ನು ಅಭಿನಂದಿಸುತ್ತಿದ್ದೇನೆ. ವೈಶಾಲಿ ಚಂದ್ರಪ್ರಭು ರವರು ಜ್ವಾಲ ಮಾಲ ನ್ಯೂಸ್ ಮೂಲಕ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಆ ಕಾರ್ಯಕ್ರಮಗಳ ಪ್ರಚಾರ ಪ್ರಸಾರ ಮಾಡಿ ಜಿನ ಧರ್ಮದ ಪ್ರಭಾವನೆಯನ್ನು ಮಾಡುತ್ತಿದ್ದಾರೆ. ನಾವೇಲ್ಲರು ಅವರ ಈ ಕೆಲಸಕ್ಕೆ ಮಹತ್ವ ಪೂರ್ಣವಾದ ಆಸೆ ಆಕಾಂಕ್ಷೇಗಳಿಗೆ ಪ್ರೋತ್ಸಹ ಬೆಂಬಲ ನೀಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗೆ ನನ್ನನ್ನು ಸಂದರ್ಶಿಸಿದಂತಹ ಶ್ವೇತ ಮೇಡಂ ಅವರು ಕೂಡ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗು ಸಹ ನಾವು ಪ್ರೋತ್ಸಹ ಬೆಂಬಲ ನೀಡಬೇಕಾದುದು ಅಗತ್ಯವಾದ ಕೆಲಸವಾಗಿದೆ. ಸಂದರ್ಶಿಸಿದಂತಹ ಶ್ವೇತ ಮೇಡಂ ಅವರಿಗೂ ಕೂಡ ದನ್ಯವಾದವನ್ನು ಅರ್ಪಿಸುತ್ತೇನೆ ಹಾಗೂ ವೈಶಾಲಿ ಚಂದ್ರಪ್ರಭು ಅವರಿಗೂ ಕೂಡ ನಾನು ದನ್ಯವಾದವನ್ನು ಅರ್ಪಿಸುತ್ತಿದ್ದೇನೆ. ಹಾಗೇ ಮುಖ್ಯವಾಗಿ ನನ್ನನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವ ಬೆಂಬಲ ನೀಡುತ್ತಿರುವ ಎಲ್ಲರಿಗು ಅದರಲ್ಲು ನಿಮ್ಮಗೆಲ್ಲರಿಗು ನಾನು ತುಂಬು ಹೃದಯದ ಕೃತಜ್ಞತೆ ಅರ್ಪಿಸುತ್ತೇನೆ. ಇನ್ನೂ ಮುಂದೆಯು ನಿಮ್ಮ ಸಹಕಾರ ನನಗೆ ಈಗೆಯೇ ಇರಲಿ ಎಂದು ನಾನು ಆಶೀಸುತ್ತೇನೆ.
ಸಂದರ್ಶಕರು :- ಆತ್ಮೀಯ ವೀಕ್ಷಕರೆ ನೋಡಿದ್ರಲ್ಲ ಇವತ್ತಿನ ಜ್ವಾಲಮಾಲ ನ್ಯೂಸ್ ನಲ್ಲಿ ಹೆಮ್ಮಯ ಶ್ರಾವಕ ಸಂಚಿಕೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನ ಕುದ್ಯಾಡಿ ಗ್ರಾಮದ ನಿರಂಜನ್ ಕುದ್ಯಾಡಿ ರವರ ಜೀವನಗಾಥೆಯನ್ನು. ಮುಂದಿನ ಸಂಚಿಕೆಯಲ್ಲಿ ಇನ್ನೊಬ್ಬ ಮಹಾನ್ ಶ್ರಾವಕ ಹೆಮ್ಮೆಯ ಶ್ರಾವಕನ ಜೀವನ ಚರಿತ್ರೆಯೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತೇವೆ ಅಲ್ಲಿಯವರೆಗು ಜೈ ಜಿನೇಂದ್ರ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














