ಜೈಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಜ್ವಾಲಾಮಾಲಾ ಧರ್ಮಯಾತ್ರೆಯ ಮುಂದುವರೆದ ಭಾಗವಾಗಿ ಹುಬ್ಬಳ್ಳಿ ಧಾರವಾಡ ನಗರ ನವನಗರ ಬಡಾವಣೆ, ಪಂಚಾಕ್ಷರಿ ನಗರದ ಭಗವಾನ್ ಶ್ರೀ ಮುನಿಸೂರತ ತೀರ್ಥಂಕರರ ಜಿನಮಂದಿರ ನೂತನ ಮಾನಸ್ಥಂಭದ ಚತುರ್ಮುಖ ಜಿನಬಿಂಬದ ಪಂಚಕಲ್ಯಾಣ ಪೂಜಾ ಮಹೋತ್ಸವ ಮಂಗಳ ಕಾರ್ಯಕ್ರಮಗಳು ದಿನಾಂಕ: 3/05/2024 ರಿಂದ ದಿನಾಂಕ 5/05/2024 ರವರೆಗೆ ಹಾಗೂ ದಿನಾಂಕ 6/05/2024 ರಂದು ಪರಮಪೂಜ್ಯ 108 ಪುಣ್ಯಸಾಗರ ಮುನಿಮಹಾರಾಜರ 55 ನೇ ವಾರ್ಷಿಕ ಜನ್ಮಜಯಂತಿ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಸಂತ ಶರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ ಮುನಿಮಹಾರಾಜರ ಪರಮಶಿಷ್ಯರಾದ 108 ಪುಣ್ಯಸಾಗರ ಮುನಿಮಹಾರಾಜರ ಪಾವನ ಸಾನಿಧ್ಯ ಹಾಗೂ ಆಶೀರ್ವಾದದಲ್ಲಿ ಮತ್ತು ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಬಟ್ಟಾಕಲಂಕ ಭಟ್ಠಾರಕ ಸ್ವಾಮೀಜಿ ಸೋಂದಾ ಮಠ ಇವರ ಮಾರ್ಗದರ್ಶನದಲ್ಲಿ ಹಾಗೂ ಸ್ವಸ್ತಿಶ್ರೀ ಪರಮಪೂಜ್ಯ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು , ಶ್ರೀ ಕ್ಷೇತ್ರ ಹೊಂಬುಜ ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ ಪಂಚಕಲ್ಯಾಣ ಮಹೋತ್ಸವದ ಪಾವನ ಕ್ಷಣಗಳನ್ನು ಇಲ್ಲಿ ಸಂಕ್ಷೀಪ್ತವಾಗಿ ನಿಮಗಾಗಿ ತಂದಿದ್ದೇವೆ. ವೀಕ್ಷಿಸಿ ಪುಣ್ಯಭಾಗಿಗಳಾಗಿ.














