-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಚಿಕ್ಕಮಗಳೂರು ಜಿಲ್ಲೆ ಪ್ರವಾಸಿತಾಣ ಎಂದೆನಿಸಿಕೊಂಡಿರುವ ಈ ಕಾಫಿ ನಾಡಿನ ಎತ್ತನೋಡಿದರು ಎತ್ತಕಡೆ ಸಾಗಿದರು ಪ್ರಕೃತಿ ಮಾತೆಯ ರಮಣೀಯ ಸೌಂಧರ್ಯ ನಿಮ್ಮನ್ನು ಬೆರಗು ಗೊಳಿಸುತ್ತದೆ. ಇಂತಹದೆ ಒಂದು ಪ್ರಕೃತಿಯ ಮಡಿಲಲ್ಲಿರುವ ಸುಂದರ ಗ್ರಾಮ ಎಳನೀರು. ಏಳು ನೀರಿನ ಉಗಮವು ಇದೆ ತಾಣದಲ್ಲಾಗುವುದರಿಂದ ಏಳು ನೀರು ನಂತರ ಎಳನೀರು ಎಂದು ಹೆಸರಾಯಿತು ಎನ್ನುವುದು ಇಲ್ಲಿನ ಸ್ಥಳಿಯರ ಆಂಭೊಣ. ಇಲ್ಲಿನ ಇತಿಹಾಸದ ಯಾವ ದಾಖಲೆಗಳು ಸಿಗುವುದಿಲ್ಲವಾದರು ಅದೇ ಸ್ಥಳಿಯರ ಪ್ರಕಾರ ಇಲ್ಲಿರುವ ಸುಂದರ ಆದಿನಾಥ ಜಿನಾಲಯದಲ್ಲಿ ಇರುವಂತಹ ಮೂಲ ಮೂರ್ತಿ 1000 ವರ್ಷಗಳ ಹಿಂದಿನ ಮೂರ್ತಿಯಾಗಿದ್ದು ಬೆರೆಡೆಯಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಹಾಗೂ ಜಿನಪ್ಪಶೆಟ್ಟರು ಎಂಬ ಶ್ರಾವಕರು ಈ ಬಸದಿಯನ್ನು ತಮ್ಮ ಸ್ವಂತ ಜಾಗವನ್ನು ನೀಡಿ ಬಸದಿ ನಿರ್ಮಾಣ ಮಾಡಿದರೆಂದು 1912 ಇಸವಿ 2004 ಹೀಗೆ ಮೂರು ಬಾರಿ ಜೀರ್ಣೋದ್ದಾರಗೊಂಡಿದೆ ಎಂದು ಹೇಳುತ್ತಾರೆ. ಹೊರನಾಡಿನಿಂದ 15 ಕಿ.ಮೀ ಕಳಸದಿಂದ 10 ಕಿ.ಮೀ ದೂರದಲ್ಲಿರುವ ಈ ಸ್ಥಳದಲ್ಲಿ ಜೈನರ ಸಂಖ್ಯೆ ಕ್ಷೀಣಿಸಿದ್ದು ಅತಿ ಕಡಿಮೆ ಕುಟುಂಬ ಉಳಿದಿವೆ ಎಂದಾದರು ವಿಶೇಷ ಪೂಜಾದಿ ಕಾರ್ಯಗಳಿಗೆ ಇಲ್ಲಿನ ಸಮಾಜ ಬಾಂಧವರು ವ್ಯವಸ್ಥೆಗೊಳಿಸಿದ್ದಾರೆ. ಇಂತಹ ಮನೋಹರ ಸ್ಥಳದಲ್ಲಿರುವ ಈ ಸುಂದರ ಪವಿತ್ರ ಜಿನ ಮಂದಿರವನ್ನು ಒಮ್ಮೆ ಎಲ್ಲರು ಕಂಡಿತಾ ನೋಡ ಬೇಕು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














