ಶ್ರವಣಬೆಳಗೊಳದಲ್ಲಿ ಮಸ್ತಕಾಭಿಷೇಕ ಪ್ರಗತಿ ಕಾಮಗಾರಿ

ಶ್ರವಣಬೆಳಗೊಳದ 2018ನೇ ಮಹಾಸ್ತಕಾಭಿಷೇಕದ ಹಿನ್ನೆಲೆಯಲ್ಲಿ ವಿಂಧ್ಯಗಿರಿಗೆ ನೂತನ ಮೇಟಿಲು ನಿರ್ಮಾಣ ಹಲವು ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ದಿನಾಂಕ: 9-2-2017ರಂದು ಚಾಲನೆ ದೊರಕಿದೆ. ಶ್ರೀ ಚಾರುಕೀರ್ತಿ ಭಟಾರಕ ಮಹಾ ಸ್ವಾಮೀಜಿಗಳವರು ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಲು ಚಾವುಂಡರಾಯ ಮಹಾ ಶಿಲ್ಪಿ ಬಳಸಿದ ವಜ್ರದ ಹರಳು ಮತ್ತು ಚಿನ್ನದಿಂದ ತಯಾರಾದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯನ್ನು ಬಳಸಿ ಪಾರಂಪರಿಕವಾಗಿ ಬೆಳೆದುಬಂದಿರುವ ಸಂಪ್ರದಾಯದಂತೆ ಭೂಮಿ ಪೂಜೆ ನೆರೆವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾಂತಕೀರ್ತಿ ಸ್ವಾಮಿಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವೃತ್ತದ ಅಧಿಕ್ಷಕರಾದ ಡಾ|| ಅರುಣ್ ರಾಜ್ .ಟಿ ಹಾಗೂ ಮಹಾಸ್ತಕಾಭಿಷೇಕ ಕಮಿಟಿಯ ರಾಷ್ಟೀಯ ಅಧ್ಯಕ್ಷರಾದ ಸರಿತಾ ಎಮ್.ಕೆ. ಜೈನ್ ರವರು ಉಪಸ್ಥಿತರಿದ್ದರು. ಭಟಾರಕ ಮಹಾಸ್ವಾಮೀಜಿಯವರು ಮಾತನಾಡಿ ಸರ್ಕಾರದಿಂದ ಮೊದಲ ಹಂತದಲ್ಲಿ 5ಕೋಟಿ ಬಿಡುಗಡೆಯಾಗಿದ್ದು, ಶ್ರವಣಬೆಳಗೊಳದಲ್ಲಿ ಯಾತ್ರಾರ್ಥಿಗಳಿಗೆ ಹಾಗೂತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾರ್ಯವಾಗುತ್ತಿದೆ. ಇಲ್ಲಿ ವಿಶ್ವಾದ್ಯಂತ ಪ್ರವಾಸಿಗರು ಬರುವುದರಿಂದ ಭಕ್ತಾದಿಗಳಿಗೆ ಅಗತ್ಯಸೌಕರ್ಯಗಳನ್ನು ಕಲ್ಪಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಬ್ದಾರಿಯಾಗಿದೆ ಎಂದರು. ಶ್ರವಣಬೆಳಗೊಳದ ಇತಿಹಾಸದ ಬಗ್ಗೆ ಸಂಕ್ಷೀಪ್ತಮಾಹಿತಿ ನೀಡಿದರು. (ಶ್ರವಣಬೆಳಗೊಳದಲ್ಲಿನ ಸಮಸ್ಯೆ ಮತ್ತು ಪ್ರವಾಸಿಗರಿಗೆ ಇಲ್ಲಾದಿರುವಂತಹ ಸೌಕರ್ಯಗಳ ಬಗ್ಗೆ ಸರ್ಕಾರದ ಜವಬ್ದಾರಿಯ ಬಗ್ಗೆ ವಿವರಿಸಿದರು ಮತ್ತು ಶ್ರವಣಬೆಳಗೊಳದ ಇತಿಹಾಸವನ್ನು ತಿಳಿಸಿದರು).

ಅರುಣ್ ರಾಜ್ ರವರು ಮಾತನಾಡಿ  ಸಂರಕ್ಷಣೆ ಮತ್ತು ಅಭಿವೃದ್ಧಿಕಾರ್ಯಗಳಲ್ಲಿ ನೂತನ ಮೇಟಿಲು ನಿರ್ಮಾಣ, ಕಬ್ಬಿಣದ ರೈಲಿಂಗ್, ಹೀಗಿರುವ ಮೇಟಿಲುಗಳ ದುರಸ್ಥಿ, ಶೌಚಾಲಯಗಳು ಮತ್ತು ಬೆಟ್ಟದ ಪ್ರಥಮ ಕಾಂಪೌಂಡಿನ ನವೀಕರಣ ಗೊಳಿಸುವ ಮೂಲಕ ಸುರಕ್ಷತೆ ಹೆಚ್ಚಿಸುವ ಕಾರ್ಯಮಾಡಲಾಗುವುದು ಎಂದರು. ಸ್ವಾಮೀಜಿಯವರು ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಗಳಲ್ಲದೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದು ಮಕ್ಕಳ ಆಸ್ಪತ್ರೆಯ ಗುಣಮಟ್ಟವನ್ನು ಹೆಚ್ಚಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತಿದು ಆರೋಗ್ಯ ಸೇವೆ ನಿಟ್ಟಿನಲ್ಲಿ 50 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು.