ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಹಲವಾರು ವರ್ಷಗಳಿಂದ ಭಾರತೀಯ ಜೈನ್ ಮಿಲನ್ ವಲಯ – 8 , ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಇವರ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಯುವಕರಿಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅವರನ್ನು ಒಗ್ಗೂಡಿಸುವ ದೃಷ್ಟಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಬಾರಿ ಬೆಂಗಳೂರಿನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ 2024 ರ ಜಿನಸಮ್ಮಿಲನ ಕಾರ್ಯಕ್ರಮ ಕ್ರೀಡಾದಿನದ ಅಂಗವಾಗಿ ನಡೆದ ಕ್ರಿಕೇಟ್ ಪಂಧ್ಯಾವಳಿ ಹಾಗೂ ತ್ರೋಬಾಲ್, ಚಿತ್ರಕಲೆ ಸೇರಿದಂತೆ ಅನೇಕ ಪಂದ್ಯಾವಳಿಗಳನ್ನು ನಡೆಸಿದರು. ಕಾರ್ಯಕ್ರಮವನ್ನು ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸದಸ್ಯ ಆರ್. ಶೀತಲ್ ಕುಮಾರ್ ರವರು ಉದ್ಘಾಟಿಸಿದರು. ಪ್ರದೀಪ್ ಕೃಷ್ಣರವರು ಟಾಸ್ ಎತ್ತಿ ಬ್ಯಾಟಿಂಗ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಹಾಸ್ತಿ ಯುವಜೈನ್ ಮಿಲನ್ ನ ಅಧ್ಯಕ್ಷ ವಜ್ರಕುಮಾರ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಳ ಹರ್ಷೇಂದ್ರ ಜೈನ್ , ಉದ್ಯಮಿಗಳಾದ ಶರತ್ ಕುಮಾರ್ ಜೈನ್ , ಭರತ್ ಜೈನ್ ಹಳ್ಳಿ ಬೈಲು, ಡಾ|| ಅನಿಲ್ ಕುಮಾರ್ , ಎಂ. ಎಂ ಜಿನೇಂದ್ರ ಸುಹಾಸ್ತಿ ಯುವಜೈನ್ ಮಿಲನ್ ನ ಕಾರ್ಯದರ್ಶಿ ಅಭಿನಂದನ್ ಜೈನ್ ಬಿದರೂರು , ಸಹ ಕಾರ್ಯದರ್ಶಿ ಜೆ. ಪ್ರಜ್ವಲ್ ಜೈನ್ ಖಜಾಂಚಿ ತೇಜಪ್ಪ ಜೈನ್ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ನೀರಜಾ ನಾಗೇಂದ್ರಕುಮಾರ್ ರವರು , ಪದ್ಮಿನಿ ಪದ್ಮರಾಜ್, ಪಿ. ಅಜಿತ್ ಕುಮಾರ್ , ಪ್ರೇಮ ಸುಖಾನಂದ್ ರವರು ಹಾಗೂ ಚಿತ್ರಕಲೆಗೆ ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ವಲಯ – 8 ರ ವಿಭಾಗೀಯ ಕಾರ್ಯಕದರ್ಶಿಗಳಾದ ವಿಲಾಸ್ ಪಾಸಣ್ಣ ನವರು, ಡಾ|| ಅಜಿತ್ ಮುರುಬುಂಡೆ, ಸತೀಶ್ ಬಿರಾದಾರ್ , ಅಭಿನಂದನ್ ಜೈನ್ ಹಾಗೂ ಪ್ರಜ್ವಲ ಜೈನ್ ಇವರುಗಳು ಭಾಗವಹಿಸಿದ್ದರು.
ಕ್ರಿಕೇಟ್ ಪಂದ್ಯಾವಳಿಯಲ್ಲಿ ರಾಜಶ್ರೀ ಚಿನ್ನದಹೆಜ್ಜೆ ಶೀರ್ಷಿಕೆಯಡಿಯಲ್ಲಿ ಫಲಕವನ್ನು ನೀಡಲಾಯಿತು. ಅಂದಿನ ಸಮಾರೋಪ ಸಮಾರಂಭವನ್ನು ಎಂ. ಕೃಷ್ಣಪ್ಪ ನವರು ಉದ್ಘಾಟಿಸಿದರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀಯುತ ಸುರೇಂದ್ರಕುಮಾರ್ ರವರು ಹಾಗೂ ಅನಿತಾ ಸುರೇಂದ್ರಕುಮಾರ್ ರವರು ಯುವಕರನ್ನೆಲ್ಲಾ ಉದ್ದೇಶಿಸಿ ಮಾತನಾಡಿದರು.ಕಳೆದ 8 ವರ್ಷಗಳಿಂದ ನಡೆದುಬರುತ್ತಿರುವ ಈ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಕಾರ್ಯಕ್ರಮಗಳು ಹೀಗೆಯೇ ಮತ್ತೆ ಮತ್ತೆ ಮುಂದುವರೆಯಲಿ ಹಾಗೂ ನಮ್ಮ ಜೈನ ಸಮುದಾಯದ ಯುವ ಪ್ರತಿಭೆಗಳು ಇಡೀದೇಶಾದ್ಯಂತ ಪ್ರಜ್ವಲಿಸಿ ನಮ್ಮ ಸಮಾಜ ಹಾಗೂ ನಮ್ಮ ಧರ್ಮಕ್ಕೆ ತಕ್ಕ ಸ್ಥಾನಮಾನಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಯುವಕರು ಮುಂದುವರೆದುಕೊಂಡು ಬರಬೇಕು. ಎಂದು ಹಲವಾರು ಹಿತನುಡಿಗಳನ್ನು ಹೇಳಿ ಗೆದ್ದಂತಹ ಸ್ಪರ್ಧಾಳುಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಿದರು.














