ಜಿನ ಭಜನಾ-ಸ್ಪರ್ಡೆ / ಅಂತಿಮ / ಶ್ರವಣ ಬೆಳಗೊಳ / jwalamalanews / 2017

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

                                                                          

ಎಲ್ಲರಿಗು ಜೈ ಜಿನೇಂದ್ರ, ದಿನಾಂಕ 09-12-2017 ಅಂದು ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ಗೊಮ್ಮಟ ಜಿನ ಭಕ್ತಿ ಗೀತಾಂಜಲಿಯ ಅಂತಿಮ ಸುತ್ತುಗಳ ಸ್ಪರ್ಧಾ ಕಾರ್ಯಕ್ರಮ ಇಡೀ ರಾಜ್ಯದ ಜೈನ ಬಾಂಧವರನ್ನು ತನ್ನತ್ತ ಸೆಳೆದ ಒಂದು ಅದ್ಭುತ ಕಾರ್ಯಕ್ರಮ. ಸುಂದರ ವೇದಿಕೆ ಬಹಳ ಅಚ್ಚುಕಟ್ಟಾದ ಕಾರ್ಯಕ್ರಮಗಳ ಸೈಯೋಜನೆ. ಪರಮ ಪೂಜ್ಯ ಸ್ವಾಮೀಜಿಯವರಿದಲೆ ಈ ಸಾಲಿನ ಮಸ್ತಕಾಭಿಷೇಕ ಕಾರ್ಯಕ್ರಮಗಳಲ್ಲಿ ಸುಂದರವಾದದೆಂಬ ಹಿರಿಮೆ ಗಳಿಸಿದ ಅಭೂತ ಪೂರ್ವ ಯಶಸ್ಸನ್ನು ಗಳಿಸಿದ ಒಂದು ಕಾರ್ಯಕ್ರಮ ಇದು.

ಅಂದಿನ ಕಾರ್ಯಕ್ರಮ ಪ್ರಾರಂಭವಾಗಿದ್ದು ಭಂಡಾರ ಬಸದಿಯಲ್ಲಿನ ಜಿನ ಅಭಿಷೇಕದಿಂದ.

ಸಮಾರಂಭದ ಯಶಸ್ವಿಗಾಗಿ ಮಂಗಳ ಕಳಸ ಸ್ಥಾಪನೆ.

ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಆರಂಭವಾದ ಅಂದಿನ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅದಮ್ಯ ಚೇತನ ಟ್ರಸ್ಟ್ ನ ಡಾ|| ತೇಜಸ್ವಿನಿ ಅನಂತ ಕುಮಾರ್ ರವರು ನಡೆಸಿಕೊಟ್ಟು ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಂತವರಿಗೆ  ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮದ ಪರಿಕಲ್ಪನಕಾರರಾದ ಅನಿತಾ ಸುರೇಂದ್ರ ಕುಮಾರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಸರ್ಕಾರವು ಪೂಜ್ಯ ಸ್ವಾಮೀಜಿಯವರಿಗೆ ಕೊಟ್ಟು ಗೌರವಿಸಿದೆ ಅದನ್ನು ಅವರೊಟ್ಟಿಗೆ ನಾವು ಹಂಚಿಕೊಳ್ಳುವಂತಹ ಸಂದರ್ಭ ನಮಗೆ ಬಂದಿದೆ.

ಸೆಮಿಪೈನಲ್ಸ್ ಸುತ್ತಿನ ಕೆಲವು ಗೀತೆಗಳು ನಿಮಗಾಗಿ..

ಬೆಂಗಳೂರಿನ ಆಧ್ಯಾತ್ಮ ಕಲಾ ಸಂಘದಿಂದ ನಾಟಕ ಪ್ರದರ್ಶನ..

ಕಾರ್ಯಕ್ರಮದ ಪ್ರತಿ ಘಟ್ಟದಂತೆ ಸಾಂಸ್ಕೃತಿಕ ಕಾರ್ಯದಲು ಯಶಸ್ವಿ.ಎಸ್ ಡಿ ಎಂ ಕಲಾ ವೈಭವದಿಂದ ಅದ್ಬುತ ಪ್ರದರ್ಶನ.

ಮಾರನೇ ದಿನವಾದ 10-12-2017ರಂದು ಸಂಭ್ರಮ ಯುತ ತಯಾರಿಯೊಂದಿಗೆ ದಿನ ಪ್ರಾರಂಭವಾಗಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಧ್ಯೆಯ ಗೀತೆಯೊಂದಿಗೆ ಆರಂಭಗೊಂಡಿತು.

ಭಜನಾ ಕಮ್ಮಟದಲ್ಲಿ ಕುಮಾರಿ ಪೂಜಮೋಹನ್ ರವರಿಂದ ಭಜನಾ ಪಾಠವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಪರಿಚಯ ಹಾಗೂ 6 ವಿಭಾಗಗಳಲ್ಲಿನ ನಡೆದ ಜಿನ ಭಕ್ತಿ ಗೀತಾಂಜಲಿ ಸ್ಪರ್ಧೆ ತಯಾರಿಯ ಒಂದು ವಿಡಿಯೋ ಪ್ರಸ್ತುತಿಯನ್ನು ಅಲ್ಲಿ ನೀಡಲಾಯಿತು.

ಇಂದಿನ ದಿನ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳು ತಮ್ಮ ಗೀತೆಯೊಂದಿಗೆ ಮೂಕವಿಸ್ಮಿತರನ್ನಾಗಿ ಸಿದ್ದರು.

ನಂತರ ನಡೆದ ಸಭಾಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಖ್ಯಾತ ರಂಗ ಭೂಮಿ ಕಲಾವಿದರಾದ ಶ್ರೀಮತಿ ಬಿ ಜಯಶ್ರೀ, ಖ್ಯಾತ ಕನ್ನಡ ಚಲನಚಿತ್ರ ನಟರಾದ ಡಾ|| ಶ್ರೀಧರ್, ಖ್ಯಾತ ಹಿನ್ನೆಲೆ ಗಾಯಕರಾದ ಮಂಜುಳ ಗುರುರಾಜ್ ರವರು ಸಭೆಯನ್ನು ರಂಜಿಸಿದರು.

ಖ್ಯಾತ ಕನ್ನಡ ಚಲನಚಿತ್ರ ನಟರಾದ ಡಾ|| ಶ್ರೀಧರ್ ರವರು ಮಾತನಾಡಿ  ಅವರು ಬಾಲ್ಯದಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಬೇಟಿಕೊಟ್ಟಂತಹ ಸಂದರ್ಭದಲ್ಲಿ ಅವರ ಮೇಲೆ ಬೀರಿದ ಪರಿಣಮಗಳನ್ನು ವಿವರಿಸಿದರು.

ಪರಮ ಪೂಜ್ಯ ಶ್ರೀಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಕಾತರ ಕ್ಷಣ ಫಲಿತಾಂಶ ಪ್ರಕಟಣೆ ಹಾಗೂ ಬಹುಮಾನ ವಿತರಣೆ.

ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು, ಶ್ರೀ ಡಿ ಸುರೇಂದ್ರ ಕುಮಾರ್ ರವರು, ಶ್ರೀ ಎಸ್ ಜಿತೇಂದ್ರ ಕುಮಾರ್ ರವರು, ಶ್ರೀಮತಿ ಡಾ|| ನಿರಜಾ ನಾಗೇಂದ್ರ ಕುಮಾರ್, ಶ್ರೀ ಎಸ್ ಎನ್ ಆಶೋಕ್ ಕುಮಾರ್ ರವರು ಹಾಗೂ ಶ್ರೀಮತಿ ಸುಪ್ರಿಯ ಹರ್ಷೇಂದ್ರ ಕುಮಾರ್ ರವರು ಉಪಸ್ಥಿತರಿದ್ದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್