-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ವೀಕ್ಷಕ ಬಂಧುಗಳೇ ಈ ದಿನ ಚಿಕ್ಕಮಂಗಳೂರು ಜಿಲ್ಲೆಯ ಕಳಸ ಕ್ಷೇತ್ರದ ಸಮಾಜಬಾಂಧವರೆಲ್ಲಾ ಸೇರಿ ಅಲ್ಲಿನ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯ ಜೀರ್ಣೋಧ್ದಾರ ಕಾರ್ಯ ಕೈಗೊಂಡಿದ್ದಾರೆ. ಒಮ್ಮೆ ಅಲ್ಲಿ ಹೋಗಿಬರೋಣ ಚಿಕ್ಕಮಂಗಳೂರು ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರು ವಾಸಿಯಾದ ಸ್ಥಳ ಇಂತಹ ಅಮೋಘ ಪರಿಸರದಲ್ಲಿರುವ ಈ ನಗರ ಬಹಳ ಹಿಂದೆ ಅಂದರೆ 7ನೇಶತಮಾನದ ಕೊನೆಯಲ್ಲಿ ಹೊಂಬುಜ ಕ್ಷೇತ್ರದ ಶಾಂತರಸರ ವಂಶದ ಸ್ಥಾಪಕನಾದ ಜಿನದತ್ತರಾಯನು ಇಲ್ಲಿನ ಸ್ಥಳೀಯ ಆಡಳಿತಗಾರರನ್ನು ವಶಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ಚಿಕ್ಕಮಂಗಳೂರು ಜಿಲ್ಲೆಯ ಕಳಸದವರೆಗೂ ಮತ್ತು ಸಾಗರ ತಾಲ್ಲೂಕಿನ ಗೊವರ್ಧನ ಗಿರಿವರೆಗೂ ವಿಸ್ತರಿಸಿದ ಸಂಧರ್ಭದಲ್ಲಿ 200 ವರ್ಷಗಳ ಕಾಲ ಆಳ್ವಿಕೆ ನೆಡೆಸಿದ ದಾಖಲೆ ಜಿನ ಮಂದಿರದ ಶಾಸನ ಹೇಳುತ್ತದೆ ಹೀಗೆ ಇಲ್ಲಿ ಜೈನರ ಪರಂಪರೆ ಆರಂಭವಾಗುತ್ತದೆ ಎಂದು ಹೇಳುತ್ತಾರೆ ಇಲ್ಲಿನ ಪುರಾತನ 1008 ಶ್ರೀ ಚಂದ್ರನಾಥಸ್ವಾಮಿ ಬಸದಿಯನ್ನು ನೂತನ ಶಿಲಾಮಯಬಸದಿಯನ್ನಾಗಿ ಜೀರ್ಣೋಧ್ದಾರ ಮಾಡುವ ಬಗ್ಗೆ ಇಲ್ಲಿ ಚಾತುರ್ಮಾಸ ಕೈಗೊಂಡಿದ್ದ 108 ಶ್ರೀ ಪ್ರಸನ್ನಸಾಗರ ಮುನಿಮಹಾರಾಜರು ಸಂಕಲ್ಪ ಮಾಡಿಸುತ್ತಾರೆ. ನಂತರ ಇಲ್ಲಿನ ಶ್ರೀಯುತ ಬ್ರಹ್ಮದೇವ ಅವರ ಅದ್ಯಕ್ಷತೆಯಲ್ಲಿನ ಸರ್ವೋದಯ ಜೈನ ಕೀರ್ತಿ ಸಮಿತಿಯ ಸರ್ವಸದಸ್ಯರ ಸಬೆಯಲ್ಲಿ ನೂತನ ಬಸದಿ ಜೀರ್ಣೋದ್ದಾರದ ಬಗ್ಗೆ ತೀರ್ಮಾನಿಸಿ ಎ ಸಿ ಧರೇಣೇಂದ್ರ ಅವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ದಾರ ಸಮಿತಿ ರಚನೆಯಾಗುತ್ತದೆ ಕ್ಷೇತ್ರಕ್ಕೆ ಆಗಮಿಸಿದ 1008 ಶ್ರೀ ಯುಗಳ ಮುನಿ ಮಹಾರಾಜರು ಆರ್ಶೀರ್ವದಿಸಿ ಜೀರ್ಣೊಧ್ದಾರ ಕಾರ್ಯಕ್ಕೆ 11 ಲಕ್ಷ ನೀಡಿದ್ದಾರೆ ನಂತರ ಮುನಿಶ್ರೀ 108 ಮಹಿಮಾ ಸಾಗರರನ್ನು ಬೇಟಿಮಾಡಿದಾಗ ಆರ್ಶೀರ್ವದಿಸಿ ಮಾನಸ್ಥಂಭದ ಸಂಪೂರ್ಣ ವೆಚ್ಛವನ್ನು ತಾವೇ ಭರಿಸಿಕೊಡುತ್ತಾರೆ ತದನಂತರ ಸಮಿತಿಯ ಸದಸ್ಯರು ಕಾರ್ಕಳ ಲಲಿತ ಶ್ರೀ ಭಟ್ಟಾರಕ ಮಹಾಸ್ವಾಮೀಜಿಯವರನ್ನು ಹಾಗೂ ಹೊಂಬುಜ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ನೂತನ ಶಿಲಾಮಯ ಬಸದಿಯ ಕೆಲಸಗಳಿಗೆ ಚಾಲನೆ ನೀಡಲಾಗುತ್ತದೆ ದಿನಾಂಕ 24-10-2021 ರಂದು ನೂತನ ಬಸದಿಯ ಶಿಲಾಪೂಜೆಯನ್ನು 1008 ಶ್ರೀ ಗುಲಾಬ್ ಭೂಷಣ ಮಹಾಸ್ವಾಮೀಜಿಯವರ ಸಮ್ಮುಖದಲ್ಲಿ ಮಾಡಲಾಗುತ್ತದೆ 25-11-2021 ರಂದು ಸ್ವಾಮಿಯನ್ನು ಸ್ಥಳಾಂತರಿಸಿ ಹಳೇಬಸದಿಯನ್ನು ಬಿಚ್ಚಲಾಗುತ್ತದೆ. ಹಳೆಬಸದಿಯ ಮೊದಲ ಹೆಂಚನ್ನು ಹೊರಿ ಮುಖಾಂತರ ತೆಗೆಯುವ ಸಂಪ್ರದಾಯವನ್ನು ಮಾಡಲಾಗುತ್ತದೆ. 22-11-2021 ರಂದು ನೂತನ ಬಸದಿಯ ಶಿಲಾವಿನ್ಯಾಸ ಹಾಗು ಧಾರ್ಮಿಕ ಸಭೆಯನ್ನು ಕಾರ್ಕಳ ಹಾಗು ಹೊಂಬುಜ ಮಠದ ಭಟ್ಟಾರಕರ ಸಮ್ಮುಖದಲ್ಲಿ ನೆರೆವೇರಿಸಲಾಗುತ್ತದೆ 26-04-2024 ರಂದು ಮಾನಸ್ತಂಭದ ಶಿಲಾವಿನ್ಯಾಸವನ್ನು ನೆರೆವೇರಿಸಲಾಗುತ್ತದೆ
ಸಮಾಜ ಭಾಂದವರ ಸಹಕಾರದಿಂದ ಇದುವರೆಗೂ ಅಂದಾಜು 2ಕೋಟಿ ಕರ್ಚಾಗಿದ್ದು ಇನ್ನೂ 2 ಕೋಟಿ ಕೆಲಸ ಪ್ರಗತಿಯಲ್ಲಿದೆ 2025ರ ಫೆಬ್ರವರಿ ಮೊದಲನೇ ವಾರದಲ್ಲಿ ಪಂಚಕಲ್ಯಾಣ ಮಹೋತ್ಸವ ನೆಡೆಯುವುದು ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ ಈ ಬಸದಿ ಹಾಗು ಮಹಾವೀರಭವನ ಇರುವಂತಹ ಒಂದು ಎಕರೆ ಆರುಗುಂಟೆ ಜಾಗವು ಕಳಸದ ಕೆಳಂಗಡಿ ವಾಸಿಯಾಗಿದ್ದ ದಿವಂಗತ ಕೆ ಬ್ರಹ್ಮ ಇಂದ್ರರ ಕುಟುಂಬದಜಾಗವಾಗಿದ್ದು ಸಮಾಜದವರಕೋರಿಕೆಯಂತೆ ಸಮಾಜದ ಉಪಯೋಗಕ್ಕಾಗಿ ದಾನವಾಗಿ ನೀಡಿದ್ದಾರೆ ಗರ್ಭಗುಡಿ ನಿರ್ಮಾಣಮಾಡುವ ಸಂಧರ್ಭದಲ್ಲಿ ಏಕಶಿಲೆಯಲ್ಲಿ ಗರ್ಭಗುಡಿಗೆ 15ಅಡಿ ಉದ್ದ 15ಅಡಿ ಅಗಲ ಸಿಂಗಲ್ ಕಲ್ಲನ್ನು ಹಾಕಿ ಅದರಮೇಲೆ ಗೋಡೆ ಕಟ್ಟಿದ್ದೇವೆ. ಯಾವುದೇಕಾರಣಕ್ಕೂ ಯಾವ ರೀತಿಯಲ್ಲಿಯೂ ಕೆಳಗೆ ಬಿದ್ದು ಹೋಗಬಾರದು 2ನೇಯದು ಮೂಡುಬಿದಿರೆಯ ಸಾವಿರ ಕಂಬ ಬಸೀದಿಯ ಮೊಡೆಲ್ ಆಗಿ ತೆಗೆದುಕೊಂಡು ಈ ಕೆಲಸ ಮಾಡಿದ್ದೇವೆ ಸಾದರಣ ಕಲ್ಲಿನಿಂದ ಹೂವಿನ ಮುಚ್ಚಿಗೆಯನ್ನು ಮಾಡಿದ್ದೇವೆ ಬಾಗಿಲುಗಳನ್ನು ಆದಷ್ಟು ಮರದಿಂದ ತುಂಬಾ ವಿಷೇಶವಾಗಿ ಈ ಕೆಲಸ ಮಾಡಿದ್ದೇವೆ, ಕಾರಣ ನಾವೆಲ್ಲಾ ಸಮಿತಿಯವರು ದ್ವಾರಪಾಲಕರನ್ನು ಎರಡುಕಡೆ ಮಾಡಿದ್ದೇವೆ.ಮಾನಸ್ತಂಭಕ್ಕೆ ಸಂಪೂರ್ಣವಾಗಿ ಆರ್ಶೀರ್ವಾದಮಾಡಿ ಪೂರ್ಣವಾಗಿ ಸಂಪನ್ಮೂಲ ಕೊಟ್ಟವರು ಮಹಿಮಾ ಮುನಿ ಮಹಾರಾಜರು ನಾವು ಹೇಗೆ ಮಾಡಿದ್ದೇವೆ ಎಂದರೆ 4 ದಿಕ್ಕಿನಲ್ಲಿಯೂ ಒಂದು ಶಿಕಸ್ಕಂದ ಒಂದುಕಡೆ ಪದ್ಮಾವತಿ ಒಂದುಕಡೆ ಜ್ವಾಲಮಾಲಿನಿ ಒಂದುಕಡೆ ಬ್ರಹ್ಮದೇವ ಅದಕ್ಕೆ ಸಂಬಂದ ಪಟ್ಟತೀರ್ಥಂಕರರನ್ನು ಅದರ ಮೇಲೆ ಮಾಡಿದ್ದೇವೆ ಮೇಲುಕಡೆ ಮಂಟಪಬರುತ್ತದೆ ಮಂಟಪದಲ್ಲಿ ಚತುರ್ಮಖಬಿಂಬವನ್ನು ಪ್ರತಿಷ್ಟಾಪನೆ ಮಾಡಲಿಕೆ ಮುನಿಗಳು ಹೇಳಿದ್ದಾರೆ. ಜೊತೆಗೆ ಮುನಿಗಳೆ ಆ ಬಿಂಬವನ್ನು ಕಳಿಸಿಕೊಡುತ್ತಿನಿ ಎಂದು ಹೇಳಿದ್ದಾರೆ ಸುತ್ತ ಕಟ್ಟೆಗೆ ತೀರ್ಥಂಕರರ 16 ಸ್ವಪ್ನವನ್ನು ಇಲ್ಲಿ ಬಿಡಿಸುತ್ತಾ ಇದ್ದೇವೆ ಉಳಿದಗ್ಯಾಪಲ್ಲಿ ಪಂಚಕಲ್ಯಾಣದ ದಿವಸ ಹಿಂದೆ ಬಸದಿ ಸ್ಥಾಪನೆಯಾದ ದಿವಸ ಬರೆಯುತ್ತಾ ಇದ್ದೇವೆ.ಅದಕ್ಕೆ 2 ಅಡಿ ಗ್ಯಾಪ್ ಅನ್ನು ಬಿಟ್ಟಿದ್ದೇವೆ ಈ ಬಗ್ಗೆ ಸಮಿತಿಯ ಅಧ್ಯಕ್ಷರು ಮಾತನಾಡಿ ಈ ದಿವಸ ಸಮಾಜದವರೆಲ್ಲಾ ಸೇರಿ ನಾವೋಂದು ಬಸದಿಯನ್ನು ಜೀರ್ಣೋದ್ದಾರ ಮಾಡಿದ್ದೇವೆ ಮುಂದೆ ನಾವು ಫೆಬ್ರವರಿ ಮೊದಲನೆ ವಾರದಲ್ಲಿ ಪಂಚಕಲ್ಯಾಣ ಮಾಡಬೇಕು ಎನ್ನುವ ತೀರ್ಮಾನವನ್ನು ಹಾಗು ಗುರುಗಳ ಆರ್ಶೀರ್ವಾದವನ್ನು ಪಡೆದಿದ್ದೇವೆ. ಪಂಚಕಲ್ಯಾಣಕ್ಕೆ ಇಡೀ ಕರ್ನಾಟಕದ ಜೈನ ಸಮಾಜದವರು ಬಂಧು ಭಾಗವಹಿಸಬೇಕು ಎಂದು ಸ್ವಾಗತಿಸುತ್ತಿದ್ದೇನೆ ಎಲ್ಲರಿಗೂ ಜೈ ಜೀನೇಂದ್ರ ವಿಷೇಶ ಕಾರ್ಯಕ್ರಮವನ್ನು ನಾವು ಪಂಚಕಲ್ಯಾಣದಲ್ಲಿ ಹಮ್ಮಿಕೊಳ್ಳುತ್ತೇವೆ ಜೊತೆಗೆ ಇದೊಂದು ವಿಷೇಶ ಕ್ಷೇತ್ರ ಬೈರವರಸನ ಕಾಲದಿಂದ ಇಲ್ಲಿಯವರೆಗೂ ಬೆಳೆದುಕೊಂಡು ಬಂದಿದೆ ಮತ್ತು ಇಲ್ಲಿನ ವಿಷೇಶತೆ ಪಕ್ಕದಲ್ಲಿ ಕಾಣಿಸುತ್ತಿರುವ ಪಾರ್ಶ್ವನಾಥಸ್ವಾಮಿ ಮತ್ತು ಪದ್ಮಾವತಿ ದೇವಸ್ಥಾನ ಕೂಡ ಶೆಟ್ಟರು ಮನೆ ಅಂತ ಅವರದು ಶೆಟ್ಟರು ಮನೆ ಹೇಗೆ ಬಂತು ಎಂದರೆ ಅರಮನೆಯ ಶೆಟ್ಟಿ ಅವರಾಗಿದ್ದರು ಅರಮನೆಯ ಹಣಕಾಸು ನೊಡಿಕೊಳ್ಳುವವರು ಇದರ ಜೊತೆಗೆ ಸಮಾಜದವರು ಇದನ್ನು ಜೀರ್ಣೋಧ್ಧಾರ ಮಾಡಿದ್ದೇವೆ ಇಲ್ಲಿಯ ಮುಖ್ಯ ದೇವಸ್ಥಾನ ಕಳಶೇಶ್ವರ ಸ್ವಾಮಿ ದೇವಸ್ಥಾನ ಇಲ್ಲಿ ಪ್ರತಿವರ್ಷ ಜಾತ್ರಮಹೋತ್ಸವ ನೆಡೆಯುತ್ತಾ ಇರುತ್ತದೆ ಆ ಜಾತ್ರಮಹೋತ್ಸವಕ್ಕೆ ಶೆಟ್ಟರು ಮನೆಯಿಂದ ಎಲ್ಲಾ ಸಮಾಜವನ್ನು ಕರೆದುಕೊಂಡು ಹೋಗಿ ಅದು ಹೇಗೆ ಗೌರವ ಯುತವಾಗಿ ವಾದ್ಯ ಛತ್ರಿ ಇದು ಮುಖಾಂತರವಾಗಿ ಕರೆದುಕೊಂಡು ಹೋಗಿ ಪ್ರಥಮ ಪೂಜೆಯನ್ನು ಏನು ಸಮಾಜದವರು ಮಾಡಿದ ನಂತರ ಕಳಶೇಶ್ವರ ಸ್ವಾಮಿಯ ರಥವನ್ನು ಎಳೆಯುತ್ತಾರೆ. ಇಲ್ಲಿನ ಸಂಪ್ರದಾಯ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ ಆದರಿಂದ ಎಲ್ಲರನ್ನು ಈ ಸಂಧರ್ಭದಲ್ಲಿ ನಮ್ಮ ಬಸೀದಿಗೆ ತನು ಮನ ಧನ ಕೊಡುವುದರ ಜೊತೆಗೆ ಎಲ್ಲರೂ ಭಾಗವಹಿಸಬೇಕು ಜೀರ್ಣೋಧ್ದಾರ ಸಮಿತಿಯ ಎಲ್ಲರೂ ಕೇಳಿಕೊಳ್ಳುತ್ತೀದ್ಧೇವೆ ಜ್ವಾಲ ಮಾಲ ನ್ಯೂಸ್ ರವರು ಈ ಕಾರ್ಯಕ್ರಮ ಮಾಡಿದ್ದಕ್ಕೆ ನಿಮಗೆ ತುಂಬು ಹೃದಯದ ಅಭಿನಂದನೆಗಳು ಜೊತೆಗೆ ನಮ್ಮ ಮುಂದಿನ ಪಂಚಕಲ್ಯಾಣದಲ್ಲಿ ಕೂಡ ಇಲ್ಲಿಗೆ ಬಂದು ಪ್ರಪಂಚದಾದ್ಯಂತ ಇದನ್ನು ಪ್ರಚಾರಮಾಡಬೇಕು ಎಂದು ಕೇಳಿ ಕೊಳ್ಳುತ್ತೇವೆ ಓಂ ಶ್ರೀ ಚಂದ್ರನಾಥಾಯ ನಮಂ ಹೊಂಬುಜ ಕ್ಷೇತ್ರದಿಂದ ಶಾಂತರಸರು ಕಳಸಕ್ಕೆ 1209 ನೇ ಇಸವಿಯಲ್ಲಿ ಅವರ ರಾಜ್ಯಭಾರ ಇಲ್ಲಿಗೆ ಸ್ಥಳಾಂತರಿಸುತ್ತಾರೆ 200 ಮತ್ತು 300 ವರ್ಷಗಳ ಕಾಲ ಅವರ ಸಂತತಿ ಇಲ್ಲಿಯೇ ಆಳ್ವಿಕೆಮಾಡಿಕೊಂಡು ಇರುತ್ತಾರೆ ತದ ನಂತರ ಅವರು ಇಲ್ಲಿಂದ ಕಾರ್ಕಳಕ್ಕೆ ಶಿಫ್ಟ್ ಆಗುತ್ತಾರೆ ಅರಮನೆಯಲ್ಲಿ ಮಠ ಸ್ಥಾಪನೆಯಾಗಿತ್ತು ಅದಾದ ನಂತರ ಜೈನ ಸಂಸೃತಿ ಬೆಳೆದುಕೊಂಡು ಬಂದಿದೆ ಈಗ ಒಂದು 50 ವರ್ಷ ಇತ್ತೀಚೆಗೆ ಊರೋಳಗಡೆ ಜೈನ ಮನೆತನಗಳು ಕಮ್ಮಿ ಇದ್ದವು ಈಗ 80 ಮನೆಗಳಾಗಿವೆ ಶ್ರದ್ದೆ ಭಕ್ತಿ ಜನಗಳಲ್ಲಿ ಉತ್ಪತ್ತಿಯಾಗುತ್ತಿದೆ ಹಳೆ ಬಸದಿ ಬಿಚ್ಚಿ ಹೊಸಬಸದಿಯನ್ನು ಜೀರ್ಣೋದ್ಧಾರ ಮಾಡಿದ್ದೇವೆ ಶಿಲಾನ್ಯಾಸವಾಗಿ ಹೊಸಬಸಿದಿಯನ್ನು ನಿರ್ಮಾಣಮಾಡುತ್ತಿದ್ದೇವೆ.ಮುಂದಕ್ಕೆ ಹೊಸರೀತಿಯಲ್ಲಿ ಪಂಚಕಲ್ಯಾಣಮಾಡುವ ಯೋಜನೆಮಾಡಿಕೊಂಡಿದ್ದಾರೆ ನಮ್ಮ ಅಧ್ಯಕ್ಷರು ನೂತನವಾಗಿ ನಿರ್ಮಾಣವಾಗುತ್ತಿರುವ ಬಸದಿ ಯಶಸ್ವಿಯಾಗಿ ಪೂರ್ಣಗೊಂಡು ಪಂಚಕಲ್ಯಾಣ ವೈಭವವಾಗಿ ನೆಡೆಯಲಿ ಎಂದು ಜ್ವಾಲಮಾಲ ಆಶಿಸುತ್ತದೆ.














