ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಬಂಧುಗಳೇ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಲೆನಾಡಿನ ಅಂತೂರು ಗ್ರಾಮದಲ್ಲಿ ಹೊಯ್ಸಳ ರಾಜ ವಂಶಸ್ಥರಿಂದ ಪ್ರತಿಷ್ಠಾಪನೆಗೊಂಡ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳು ಬಸದಿ ಮಠ ಸಿಂಹನಗದ್ದೆ ಇವರ ಸಾನಿಧ್ಯ ನೇತೃತ್ವದಲ್ಲಿ ಪರಮ ಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ|| ಡಿ ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರ ಧರ್ಮಸ್ಥಳ ಇವರ ಮಾರ್ಗದರ್ಶನದಲ್ಲಿ ಅಂತೂರು ಗ್ರಾಮಸ್ಥರು ಸಮಸ್ತ ಜೈನ ಶ್ರಾವಕರು ಮತ್ತು ಶ್ರೀಮತಿ ಲಾವಣ್ಯ ಶ್ರೀ ಅರ್ಕ ಕೀರ್ತಿ ಜೈನ್ ಮತ್ತು ಮಕ್ಕಳು ಶಿತಲ್ ಇಂಜಿನಿಯರ್ಸ್ ಪ್ರೈವೆಟ್ ಲಿ. ಏಳನೀರು ಹಾಗೂ ಶ್ರೀ ಪಾರ್ಶ್ವನಾಥ್ ಚಳ್ಳಕೆರೆ ಇವರ ನೆರವಿನೊಂದಿಗೆ ಮಾನಸ್ಥಂಭ ಸಹಿತ ಶಿಲಾಮಯ ಜಿನ ಮಂದಿರದ ಧಾಮಸಂಪ್ರೋಕ್ಷಣ ಪೂರ್ವಕ ಪಂಚಕಲ್ಯಾಣ ಮಹೋತ್ಸವ ಮನಸ್ತಂಭೋಪರಿ ಚತುರ್ಮುಖ ಜಿನ ಬಿಂಬ ಪ್ರತಿಷ್ಠಾಪನ ವಿಧಿವಿಧಾನಗಳು ದಿನಾಂಕ 24-3-2024ನೇ ಭಾನುವಾರದಿಂದ ದಿನಾಂಕ 29-3-2024 ಶುಕ್ರವಾರದ ವರಗೆ ಅಮೋಘವಾಗಿ ನಡೆಯಿತು.
ಸಮರಸ್ಯದ ಪ್ರತೀಕವಾಗಿ ಅಂತೂರು ಪಂಚಕಲ್ಯಾಣ ಕ್ಷೇತ್ರದ ಮಹಿಮೆಯ ಸಂಕೇತವಾಗಿ ನಡೆದ್ದುದು ಪ್ರಶಂಸನೀಯ ಸಂಗತಿಯಾಗಿದೆ. ಶ್ರೀ ಪಾರ್ಶ್ವನಾಥ ಸ್ವಾಮಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಅಂತೂರು ಹಾಗೂ ಪಂಚಕಲ್ಯಾಣ ಸಮಿತಿ ಅಂತೂರು ಇವರ ವತಿಯಿಂದ ಮಹೋತ್ಸವವು ಅಚ್ಚುಕಟ್ಟಾಗಿ ಆಯೋಜನೆಗೊಂಡು ಅಭೂತ ಪೂರ್ವವಾಗಿ ಜರುಗಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














