-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಇವರಲ್ಲಿ ತುಂಬ ಸ್ವರಸ್ಯಕರವಾದ ಮತ್ತೊಂದು ಸಂಗತಿ ಎಂದರೆ ಅವರ ಪರ್ವಗಳಲೊಂದ್ದಾದ ದಶಲಕ್ಷಣ ಪರ್ವ ಎನ್ನುವ ಹತ್ತು ದಿನದ ಪರ್ವದಲ್ಲಿ ಆಚರಿಸುವ ಕ್ಷಮದಿನ ಎನ್ನುವ ವಿಶೇಷ ಆಚರಣೆ. ಅಂದು ತಮ್ಮ ಶತ್ರುಗಳನ್ನಾದಿಯಾಗಿ ಪ್ರತಿಯೊಬ್ಬರೊಂದಿಗೆ ತಿಳಿದೋ ತಿಳಿಯದೋ ತಮ್ಮಿಂದಾದ ತಪ್ಪುಗಳಿಗೆ ಕ್ಷಮೇಯಾಚಿಸುತ್ತಾರೆ. ಇದರಿಂದ ಮಾನವೀಯ ಮೌಲ್ಯಗಳಿಗೆ ಸಂಬಂಧಗಳಿಗೆ ಅವರುಗಳಲ್ಲಿನ ಪ್ರಾಮುಖ್ಯತೆಯ ಅರಿವಾಗುತ್ತದೆ.
ಕ್ಷಮಾಯಾಚನೆಯಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲಾ ದ್ವೆಷವನ್ನು ಬಳಸುವುದರಿಂದ ಅಂತಿಮವಾಗಿ ಸಿಗುವುದು ಶೂನ್ಯ ಕ್ಷಮೆ ಎನ್ನುವುದು ಮನುಷ್ಯ ನನ್ನು ದೇವತಾ ಮನುಷ್ಯನನ್ನಾಗಿಸುತದ್ದೆ. ನೀವು ಮಂದಿರ ಹಾಗೂ ದೇವಸ್ಥಾನಕ್ಕೆ ತಮ್ಮ ಬಯಕೆಗಳನ್ನು ಅವಶ್ಯಕತೆಗಳಿಗೋಸ್ಕರ ದೇವರಲ್ಲಿ ಪ್ರಾರ್ಥಿಸಲು ದಾವಿಸುತ್ತಿರಾದರೆ, ಜೈನರು ದೈವಿ ಗುಣಗಳನ್ನು ತಮ್ಮದಾಗಿಸಿಕೊಳ್ಳಲು ದೈವತ್ವದ ಅಧ್ಯಾತ್ಮದ ಅನುಕರಣೆಗಾಗಿ ಶಾಶ್ವತ ಮುಕ್ತಿಗಾಗಿ ಬಸದಿಗಳಿಗೆ ತೆರಳುತ್ತಾರೆ. ಯಾವುದೆ ಆರ್ಥಿಕ ಲಾಭಕ್ಕಾಗಿ ಅಲ್ಲ ಅಧ್ಯಾತ್ಮಿಕ ಲಾಭಕ್ಕಾಗಿ ಅಲ್ಲಿನ ಧನಾತ್ಮಕ ಶಕ್ತಿಯನ್ನು ತಮ್ಮಲ್ಲಿ ತುಂಬಿಕೊಳ್ಳುತ್ತಾರೆ. ವಿಶ್ವದೆಲ್ಲೆಡೆ ಜೈನ ಸಂಸ್ಕೃತಿಯ ಇತಿಹಾಸ ಅಧ್ಯಾಯನ ನಡೆಯುತ್ತಿದ್ದು, ವಿಶ್ವದ ಬೃಹತ್ ವಿಶ್ವವಿಧ್ಯಾಲಯಗಳಲ್ಲಿ ಈ ಸಿದ್ದಾಂತದ ಬಗ್ಗೆ ಉತ್ಸುಕರಾಗಿದ್ದಾರೆ. ಸಂಶೋಧನೆ ಅಧ್ಯಾಯನ ನಡೆಸುತ್ತಾರೆ. ಹೀಗಿರುವಾಗ ಈ ಸಮಯದಲ್ಲಿ ಇದು ಉಪಯುಕ್ತ ಮಾಹಿತಿ ಎಂದುಕೊಂಡಿದ್ದೇನೆ. ಮನುಷ್ಯತ್ವದ ನೇಲೆಗಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ದೇಹದ ಸ್ವಾಸ್ಯವನ್ನು ಈ ಪರಿಶುದ್ಧ ವಾತಾವರಣದಲ್ಲಿ ಕಾಪಡಿಕೊಳ್ಳಲು ಸಹಾಯಕಾರಿ ಎಂದು ಭಾವಿಸುತ್ತ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














