ಸೋಂಧ ಜಾತ್ರೆ- 2024 / jwalamalanews / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಈ ದಿನ ನಾವು  ಶ್ರೀ ಕ್ಷೇತ ಸ್ವಾಧಿ ದಿಗಂಬರ ಜೈನ ಮಠ ಸುಧಾಪುರ ಸೋಂದಾದಲ್ಲಿ ದಿನಾಂಕ: 25/3/2023 ರಂದು ನಡೆದ ಚತುರ್ವಂಶದೀ ತೀರ್ಥಂಕರರ ಏಕಕಾಲದಲ್ಲಿ ಪಂಚಾಮೃತ ಅಭಿಷೇಕ ಸಹಿತ ಕಲ್ಪದೃಮ ಪೂಜೆ , 108 ಹವನ ಕುಂಡದಲ್ಲಿ ಪೂರ್ಣಾಹುತಿ ಶ್ರೀ ಜಿನಭಗವಂತರ  ಶ್ರೀ ವಿಹಾರ ಹಾಗೂ ಸಂಜೆ ಮುತ್ತಿನಕೆರೆಯಲ್ಲಿ ನಡೆದ ತೆಪ್ಪೋತ್ಸವ  ಈ ಎಲ್ಲಾ ಕಾರ್ಯಕ್ರಮವನ್ನು ನಿಮಗೆಂದು ಸಂಗ್ರಹಿಸಿ ತಂದಿದ್ದೇವೆ.

ಶ್ರೀ ಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠದಲ್ಲಿ ದಿನಾಂಕ 17/03/2024 ರಿಂದ 25/03/2024 ರವರೆಗೂ ಶ್ರೀ ಸಿದ್ದ ಚಕ್ರ ಆರಾಧನಾ ಹಾಗೂ ಮಹಾ ರಥೋತ್ಸವ ಮತ್ತು ವಿವಿಧ ಕಾರ್ಯಕ್ರಮಗಳು ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಪರಮಶಿಷ್ಯರಾದ ಪರಮಪೂಜ್ಯ 108 ಪುಣ್ಯಸಾಗರ ಮುನಿಮಹಾರಾಜರು ಹಾಗೂ ಪರಮಪೂಜ್ಯ 108 ಪುರಾಣಸಾಗರ ಮುನಿಮಹಾರಾಜರ ದಿವ್ಯ ಉಪಸ್ಥಿತಿ ಜಗದ್ಗುರು ಅಕಲಂಕ ಕೇಸರಿ ಪರಮಪೂಜ್ಯ ಸ್ವಸ್ತಿ ಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆದ 25/03/2024 ರಂದು ನಡೆದ ಕಾರ್ಯಕ್ರಮದ ಸುಂದರ ಮಂಗಲಮಯ ಕ್ಷಣಗಳು ಇಲ್ಲಿವೆ.