ರಥಂಕರವರ್ಣಿ ಪ್ರಶಸ್ತಿ-2024/ ಜ್ವಾಲಾಮಾಲಾ ನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ದಕ್ಷಿಣ ಕನ್ನಡ ಜೈನ ಮೈತ್ರಿ ಕೂಡ ಬೆಂಗಳೂರು ವತಿಯಿಂದ 37 ನೇ ವಾರ್ಷಿಕೋತ್ಸವದಲ್ಲಿ ಮಹಾಕವಿ ರತ್ನಾಕರ ವರ್ಣಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದಿನಾಂಕ 10/03 2024 ರಂದು ಪ್ರತಿವರ್ಷದಂತೆ ವೈಭವವಾಗಿ ನಡೆಸಿದರು. ಸಮಾರಂಭದ ಪಾವನ ಸಾನಿಧ್ಯ ಮತ್ತು ಪ್ರಶಸ್ತಿ ಸಮಾರಂಭವನ್ನು ಶ್ರೀ ಕ್ಷೇತ್ರ ಹರಹಂತ ಗಿರಿಯ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ|| ಧವಳಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು , ಸ್ಥಾಪಕ ಅಧ್ಯಕ್ಷರಾದ ಶ್ರೀ ಡಿ ಸುರೇಂದ್ರ ಕುಮಾರ್ ರವರು , ಸ್ಥಾಪಕ ಕಾರ್ಯಾಧ್ಯಕ್ಷರಾದ  ಕೆ.ಬಿ ಯುವರಾಜ್ ಬಲ್ಲಾಳ್ , ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಕಾರ್ಯದರ್ಶಿ ಶಶಿರೇಖಾ ಅನಿತಾನಂದ ಶೆಟ್ಟಿ ಇವರುಗಳು ಸೇರಿ ವಿಶ್ರಾಂತ ಪ್ರಾಚಾರ್ಯರು ಮತ್ತು ಹಿರಿಯ ಜೈನ ವಿದ್ವಾಂಸರಾದ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಶಸ್ತಿಪುರಸ್ಕೃತರಾದ ಶ್ರೀ ಕೆ. ಗುಣಪಾಲ್ ಕಡಂಬ ರವರಿಗೆ  ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನ್ಯೂಸ್ 18 ಕನ್ನಡ ಚಾನೆಲ್ನ ಕುಮಾರಿ ನಮಿತಾ ಜೈನ್ ರವರಿಗೂ ಕೂಡ ಸನ್ಮಾನಿಸಲಾಯಿತು.  ದೃಶ್ಯಕಾವ್ಯದ ಮೂಲಕ ಏಕಪಾತ್ರಾಭಿನಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂಡಿ ಬಂದಿತು. ಈ ಎಲ್ಲಾ ಅಪೂರ್ವ ಕ್ಷಣಗಳು ನಿಮ್ಮ ಮುಂದೆ. ಕಾರ್ಯಕ್ರಮದಲ್ಲಿ ಅಲ್ಲೆ ನೆರೆದಿದ್ದ ಪ್ರಮುಖರುಗಳು ಹಾಗೂ ಸ್ವಾಮೀಜಿಗಳು ತಮ್ಮ ಆಶೀರ್ವಚನದ ಮಾತುಗಳನ್ನು ಆಡಿದರು. ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂದಿತು.