ಶ್ರೀ ಸಿಂಹನಗದ್ದೆ ಬಸ್ತಿ ಮಠದ ರಥೋತ್ಸವ 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಜೈ ಜಿನೇಂದ್ರ ವೀಕ್ಷಕರೆ,

ಪೆನುಗೊಂಡೆ ದಿಗಂಬರ ಜೈನ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರ ಸಿಂಹನಗದ್ದೆ, ಬಸ್ತಿಮಠ, ನರಸಿಂಹರಾಜಪುರ ಭಗವಾನ್ ಶ್ರೀ 108 ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥ ಯಾತ್ರಾ ಜಾತ್ರಾ ಮಹೋತ್ಸವ . ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ  ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮಿಜಿಗಳವರ ನೇತೃತ್ವದಲ್ಲಿ ದಿನಾಂಕ 31/03/2024 ರಿಂದ 04/04/2024ರವರೆಗೆ  ನಡೆಯಲಿದೆ. ದಿನಾಂಕ 02/04/224ರಂದು ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಉಯ್ಯಾಲೆ ಸೇವೆ 1008 ಮಂತ್ರಪುಷ್ಪ , ಶೋಡಷೋಪಚಾರ ಹಾಗೂ ಸಂಜೆ ಧಾರ್ಮಿಕ ಸಭೆ ಮತ್ತು ರಜತ ರಥೋತ್ಸವ. ದಿನಾಂಕ 03/04/2024 ರಂದು ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವ. ನಡೆಯಲಿರುವ ಅಷ್ಟು ದಿನಗಳ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಬಾಗಿಯಾಗಿ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಜ್ವಾಲಾಮಾಲಿನಿ ಅಮ್ಮನವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಪುಣ್ಯಭಾಗಿಗಳಾಗಬೇಕಾಗಿ ಶ್ರೀ ಮಠದಿಂದ ಆತ್ಮೀಯ ಆಹ್ವಾನ.