Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.
ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಪರಮಪೂಜ್ಯ ಯುಗಳ ಮುನಿಮಹಾರಾಜರ ಪಾವನ ಉಪಸ್ಥಿತಿಯಲ್ಲಿ ಧರ್ಮಸ್ಥಳ ಸುರೇಂದ್ರಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ಹಾಗೂ ಕಿರುತೆರೆಯ ನಟ ಶ್ರೀ ಅನಿರುಧ್ ಜಿತಕರ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ರವರು ಆಗಮಿಸಿದ್ದರು. ಶ್ರೀ ಅನಿರುಧ್ ರವರು ಇಂತಹ ಅಮೋಘ ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಪಾಲ್ಗೊಳ್ಳುತ್ತಿರುವುದಾಗಿ ಎಂದು ತಿಳಿಸುತ್ತಾ ನಮ್ಮ ಸಂಪ್ರದಾಯಗಳು ಉಳಿದು ಬೆಳೆಯಬೇಕು ರಾಜ್ಯ ಮಾತ್ರವಲ್ಲದೇ ಇಡೀ ದೇಶಾದ್ಯಂತ ಹರಡಬೇಕು ಎಂದು ತಿಳಿಸಿದರು.
ಕುಮಾರಿ ಅನನ್ಯ ಭಟ್ ರವರು ತಮ್ಮ ಶುಭ ನುಡಿಗಳೊಂದಿಗೆ ತಮ್ಮ ಕಂಚಿನ ಕಂಠದಿಂದ ಹಾಡನ್ನು ಹಾಡಿ ಸಭಿಕರಲ್ಲಿ ಸಂಚಲನ ಮೂಡಿಸಿದರು.
ಈ ಸಮಾರೋಪ ಸಮಾರಂಭದಲ್ಲಿ ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ವೀರಾಂಗನಾ ಅನಿತಾ ಸುರೇಂದ್ರಕುಮಾರ್ ರವರು ವಲಯ8ರ ಕಾರ್ಯಾಧ್ಯಕ್ಷರಾದ ವೀರ್ ಕೆ, ಪ್ರಸನ್ನ ಕುಮಾರ್ ಗೌರವಾಧ್ಯಕ್ಷರಾದ ವೀರಾಂಗನಾ ಶೀಲಾ ಅನಂತರಾಜುರವರು , ಅಧ್ಯಕ್ಷರಾದ ಕೆ. ಯುವರಾಜ್ ಭಂಡಾರಿ , ಶ್ರೀಮತಿ ಸೋನಿಯಾ ವರ್ಮ ನಿರ್ದೇಶಕರು ಜಿನಭಜನಾ ಸೇವಾ ಸಮಿತಿ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಜೈನ್ , ಪ್ರಧಾನ ಕಾರ್ಯಕರ್ಶಿಗಳಾದ ವೀರ್ ರತ್ನರಾಜ್ ಜೈನ್ , ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ , ಕಾರ್ಕಳ ಜೈನ್ ಮಿಲನ್ ಅಧ್ಯಕ್ಷರಾದ ವೀರಾಂಗನಾ ಮಾಲತಿ ವಸಂತರಾಜುರವರು, ಲಂಡನ್ ಜೈನ್ ಮಿಲನ್ ನ ಅಧ್ಯಕ್ಷರಾದ ವೀರ್ ಡಾ|| ನರೇಂದ್ರ ಅಳದಂಗಡಿಯವರು ಉಪಸ್ಥಿತರಿದ್ದರು.
ಅಂದು ವಿಜೇತ ತಂಡಗಳಾದ ಹಿರಿಯರ ವಿಭಾಗದಲ್ಲಿ ಕ್ರಮವಾಗಿ ಮೈಸೂರು ವಿಭಾಗದ ಹಾಸನದ ಸಿದ್ದಾಯಿನಿ ಜಿನಭಜನಾ ತಂಡ ಪ್ರಥಮ ಸ್ಥಾನ ಗಳಿಸಿದರೆ , ದ್ವಿತೀಯ ಸ್ಥಾನವನ್ನು ಮೈಸೂರು ವಿಭಾಗದ ಧವಳ ಧ್ವನಿ ಜಿನಭಜನಾ ತಂಡ ಶ್ರವಣಬೆಳಗೊಳ ಹಾಗೂ ತೃತೀಯ ಸ್ಥಾನವನ್ನು ಮಂಗಳೂರು ವಿಭಾಗದ ಸೇವಾ ಸಮಿತಿ ಧರ್ಮಸ್ಥಳ ಪಡೆದವು.
ಹಿರಿಯರ ವಿಭಾಗದಲ್ಲಿ ಕೀರ್ತಿಶೇಷ ವರ್ಧಮಾನ ಹೆಗ್ಗಡೆಯವರ ಸ್ಮರಣಾರ್ಥ ರೋಲಿಂಗ್ ಟ್ರೋಫಿಯನ್ನು ಮೈಸೂರು ವಿಭಾಗ ಪಡೆಯಿತು. ಅದೇ ರೀತಿ ಕಿರಿಯರ ವಿಭಾಗದಲ್ಲಿ ಧಾರವಾಡ ವಿಭಾಗದ ನಿರಂಜನ ತಂಡ ಬೆಳಗಾವಿ ಪ್ರಥಮ ಸ್ಥಾನ ಬೆಳಗಾವಿ , ಬೆಂಗಳರೂ ವಿಭಾಗದ ಹಂಸಧ್ವನಿ ತಂಡ ಬೆಂಗಳೂರು ತಂಡ ದ್ವಿತೀಯ ಸ್ಥಾನ ಹಾಗೂ ಮಂಗಳೂರು ವಿಭಾಗದ ಕೇವಲೀಶ್ ತಂಡ ವೇಲೂರು ತೃತೀಯ ಸ್ಥಾನ ಪಡೆದವು. ಕಿರಿಯರ ವಿಭಾಗದಲ್ಲಿ ಮಹಾಕವಿ ರತ್ನಾಕರ ವರ್ಣಿಯ ಸ್ಮರಣಾರ್ಥ ರೋಲಿಂಗ್ ಟ್ರೋಫಿಯನ್ನು ಪಡೆಯಿತು.














