ವೇಣೂರಿನಲ್ಲಿ ಮೈಸೂರು ಮಹಾರಾಜರು ಯದುವೀರ್ / jwalamalanews / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಮೈಸೂರಿನ ಮಹಾರಾಜರಾದ ಯದುವೀರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುನಿಸ್ವಾಮಿಗಳಿಗೆ ಎಲ್ಲರಿಗೂ ಬಂದಿರುವಂತಹ ಗಣ್ಯರುಗಳನ್ನೆಲ್ಲಾ ತುಂಬು ಹೃದಯದಿಂದ ಎಲ್ಲರನ್ನೂ ಸ್ವಾಗತಿಸಿ ಭಾಷಣವನ್ನು ಮಾಡಿದರು. ಅವರು ಜೈನ ಬಸದಿಗಳ ಸಂಪ್ರದಾಯಗಳು , ಧಾರ್ಮಿಕ ಪದ್ದತಿಗಳು ಎಲ್ಲ ಜನಾಂಗಕ್ಕೂ ಮಾದರಿಯಾದ ಜನಾಂಗವಾಗಿದೆ ಎಂದು ತಿಳಿಸಿದರು. ನಾನೂ ಸಹ ಹಲವಾರು ಜೈನ ಬಸದಿಗಳನ್ನುನೋಡಿದ್ದೇನೆ. ಬಸದಿಗಳಲ್ಲಿರುವ ಶಾಂತತೆ ,ಸ್ವಚ್ಛತೆ , ಶಿಸ್ತು ಪಾಲನೆ ಎಲ್ಲವೂ ಹಲವಾರು ನಮಗೂ ಸಹ ಆದರ್ಶವಾಗಿರುವ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು. ಮತ್ತು ಕರ್ನಾಟಕದ ಎಲ್ಲಾ ಬಸದಿಗಳಲ್ಲೂ ತನ್ನದೇ ಅದ ಒಂದೊಂದು ವಿಶೇಷತೆಗೆ ನಿದರ್ಶನವಾಗಿದೆ. ಅದರಲ್ಲಿ ಪ್ರಮುಖವಾಗಿ ಶ್ರೀ ರಂಗಪಟ್ಟಣ, ಶ್ರವಣಬೆಳಗೊಳದಲ್ಲಿರುವ ಹಾಗೂ ಇನ್ನೂ ಪ್ರಮುಖ ಜಿಲ್ಲೆಗಳಲ್ಲಿರುವ ಬಸದಿಗಳಲ್ಲಿರುವ ಸ್ವಾಮಿಯವರನ್ನು ದರ್ಶನ ಮಾಡಿದರೆ ನನಗೂ ಸಹ ಸ್ವಲ್ಪ ರೋಮಾಂಚನವಾಗಿದ ಅನುಭವವಾಯಿತು ಎಂದು ತಿಳಿಸಿದರು.

ಹಾಗೆಯೇ ಗಂಗರು ಕಾಲದಿಂದ ಬೆಳೆದು ಬಂದಿರುವ  ಹಲವಾರು ಕವಿಗಳಾದ ರತ್ನಾಕರವರ್ಣಿ, ಹಾಗು ಮುಂತದ ಕವಿಗಳ ಹಳೆಗನ್ನಡದ ಕವನಗಳು ನಾನು ಓದಿದ್ದೇನೆ. ಬಹಳ ಸುಂದರವಾದ ಸಾಲುಗಳನ್ನು ಬರೆದಿರುತ್ತಾರೆ. ಜೈನ ಸಾಹಿತ್ಯಕ್ಕೆ ಇವರುಗಳು ಕೊಟ್ಟಿರುವ ಕೊಡುಗೆಗಳು ಅಪಾರವಾಗಿದೆ ಎಂದು ತಿಳಿಸಿದರು. ನಮ್ಮ ತಂದೆಯ ಕಾಲದಲ್ಲಿ  ವೇಣೂರಿನ ಬಾಹುಬಲಿ ಮೂರ್ತಿಯು ಸ್ಥಾಪನೆಯಾಯಿತು . ಅಂದಿನಿಂದ ನಮ್ಮ ತಂದೆಯವರು ಸಹ ಜೈನ ಸಮುದಾಯಕ್ಕೆ ತುಂಬ ಗೌರವವನ್ನು ಕೊಡುತ್ತಾ ಬಂದಿರುತ್ತಾರೆ. ನಾನೂ ಸಹ ಅವರಂತೆಯೇ ಮಂದುವರೆಸಿಕೊಂಡು ಬರುತ್ತಿದ್ದೇನೆ. ಇನ್ನೂ ಮುಂದೆಯೂ ಕೂಡ ಮುಂದುವರೆಸಿಕೊಂಡು ಬರುತ್ತೇನೆ ಎಂದು ಜೈನ ಸಂಪ್ರದಾಯ ಸಂಸ್ಕೃತಿ ಹಾಗೂ ಜೈನ ಧಾರ್ಮಿಕತೆ ಜೈನ ಬಂಧುಗಳ ಬಗ್ಗೆ ತಮ್ಮ ಮನ ಬಿಚ್ಚಿ ಮಾತನಾಡಿದರು.