ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಜೈ ಜಿನೇಂದ್ರ ವೀಕ್ಷಕರೆ,
ಶಿವಮೊಗ್ಗೆ ಜಿಲ್ಲೆಯ ಸಾಗರ ತಾಲ್ಲೂಕಿನ ಸಮೃದ್ಧ ಮಲೆನಾಡಿನ ಪ್ರಕೃತಿಯ ಸಿರಿಯ ಮಧ್ಯೆ ಶ್ರೀ ಕ್ಷೇತ್ರ ವಡಂಬೈಲಿನಲ್ಲಿ ಭಕ್ತಾದಿಗಳ ಸಹಕಾರದಿಂದ ಬಹಳ ಸುಂದರವಾಗಿ ವ್ಯವಸ್ಥಿತವಾಗಿ ನಿರ್ಮಿಸಲಾದ ಜಿನಮಂದಿರಗಳ ದಾನಸಂರೋಕ್ಷಣೆ ಹಾಗೂ ಶ್ರೀ ಭಗವತ್ ಜಿನೇಂದ್ರರ ಪಂಚಕಲ್ಯಾಣ ಮಹೋತ್ಸವ ಪೂರ್ವಕ ಜಿನಬಿಂಬಗಳ ಸ್ಥಾಪನ ಕಾರ್ಯಕ್ರಮ ಶ್ರೀ ಸಿದ್ದಗಿರಿ ವಡನಬೈಲು ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಮಂದಿರದ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚ ಕಲ್ಯಾಣ ಮಹೋತ್ಸವ .
ದಿನಾಂಕ 01/02/2024 ರ ಶುಕ್ರವಾರದಿಂದ 06/03/2024ರ ಬುಧವಾರದವರೆಗೆ ನಡೆಯಲಿರುವ ಮಹೋತ್ಸವದ ಪಾವನ ಸಾನಿಧ್ಯ ಸಂತ ಶಿರೋಮಣಿ ಆಚಾರ್ಯ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರ ಹಾಗೂ ಶ್ರೀ ಕ್ಷೇತ್ರ ಸ್ವಾದಿ ಜೈನಮಠದ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮಸ್ತ ಭಟ್ಟಾರಕರುಗಳು ಸಾನಿಧ್ಯ ವಹಿಸಲಿರುವ ಈ ಮಹೋತ್ಸವ ಹೆಚ್. ಎಂ ವೀರರಾಜಯ್ಯ ಜೈನ್ ಧರ್ಮದರ್ಶಿಗಳು ಇವರ ನೇತೃತ್ವದಲ್ಲಿ ನಡೆಯಲಿದ್ದು ಪೂಜಾ ವಿಧಿವಿಧಾನಗಳು , ಪಂಚಕಲ್ಯಾಣ ಪೂಜಾ ವಿಧಿ , ಹಾಗೂ ಆರಾಧನೆಗಳು ಜೈನ ಆಗಮೋಕ್ತ ಪದ್ದತಿಯಲ್ಲಿ ನಡೆಯಲಿದ್ದು ಈ ನಿಮಿತ್ತ ವಿವಿಧ ಆರಾಧನೆಗಳು, ಚತುರ್ವಿದ ದಾನಗಳ ಮೂಲಕ ಲೋಕ ಕಲ್ಯಾಣದ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ. ಧಾರ್ಮಿಕ ಸಭೆಗಳು ಹಾಗೂ ಸಾಂಸ್ಕೃತಿಕ ಸಭಾ ಕಾರ್ಯ














