ಸುಲ್ಕೇರಿ/ ಜ್ವಾಲಾಮಾಲಾನ್ಯೂಸ್ / 2024

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಮಾಲ ಧರ್ಮಯಾತ್ರೆ.

ಧರ್ಮಯಾತ್ರೆ ಕಾರ್ಯಕ್ರಮದಲ್ಲಿ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿ ಸುಲ್ಕೇರಿ ಶ್ರೀಕ್ಷೇತ್ರ.

ಅಜಿತ್ ಎನ್ ಅಡ್ವಕೇಟ್ :- ಕಾರ್ಕಳ ನರಾವಿ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ನೇಮಿನಾಥಸ್ವಾಮಿ ಬಸದಿಯು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಪುರಾತನ ಬಸದಿಯಾಗಿದ್ದು ಈ ಬಸದಿಯನ್ನು 1978 ರಲ್ಲಿ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಹಾಗೂ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆದಿದ್ದು. 45 ವರ್ಷಗಳ ನಂತರ ಈ ಬಸದಿಯ ಸಂಪೂರ್ಣ ನವೀಕರಣ ಶಿಲಾಮಯ ಬಸದಿಯನ್ನ 9 ತಿಂಗಳಲ್ಲಿ ಊರ ಪರಊರ ದಾನಿಗಳ ಹಾಗೂ ಪೂಜ್ಯ ಕಾರ್ಕಳ ಮಠದ ಸ್ವಾಮೀಜಿಯವರ ಆಶೀರ್ವಾದ ಹೆಗ್ಗಡೆಯವರ ಅನುಗ್ರಹ ಹಾಗೂ ಊರ ಹಾಗೂ ಪರ ಊರ ಭಕ್ತರ ಸಹಕಾರದಿಂದ ಸುಂದರ ಭವ್ಯವಾದ ಬಸದಿಯ ನಿರ್ಮಾಣವಾಗಿದೆ. ಡಿಸೆಂಬರ್ 29, 30, 31 ರಂದು ವಿಜೃಂಭಣೆಯಿಂದ ಧಾಮ ಸಂಪ್ರೋಕ್ಷಣ ಕಾರ್ಯಕ್ರಮವನ್ನು ಕೂಡ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿ ಈಗ ಬಸದಿ ಸುಂದರವಾಗಿ ಭಕ್ತರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಪ್ರವಾಸಿಗರು ಕೂಡ ಇಲ್ಲಿ ಆಗಮಿಸಿ ತಮ್ಮ ಮನಶಾಂತಿಗೊಸ್ಕರ ಪೂಜೆಗಳನ್ನ ನೆರವೇರಿಸುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಅತ್ಯುತ್ತಮ ಬಸದಿ ಹಾಗೂ ಭಕ್ತರ ಧ್ಯಾನದ ಕೇಂದ್ರವಾಗಿ ಮೂಡಿಬರುತ್ತಿದೆ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್