ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜ್ವಾಲಮಾಲ ಧರ್ಮಯಾತ್ರೆ
ಧರ್ಮ ಬಂಧುಗಳೇ, ಈ ದಿನ ನಾವು ಕುಣಿಗಲ್ ಕ್ಷೇತ್ರದಲ್ಲಿ ಇದ್ದೇವೆ. ಕುಣಿಗಲ್ ಕ್ಷೇತ್ರವು ತುಮಕೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿ ವ್ಯಾಪರ ಕೇಂದ್ರವು ಕೂಡ ಹೌದು. ನೀವು ನೋಡುತ್ತಿರುವಂತೆ ಇಲ್ಲಿನ ತುಮಕೂರು ಮೈಸೂರು ಮುಖ್ಯ ರಸ್ತೆಯಲ್ಲಿ ಸುಂದರ ಜಿನ ಮಂದಿರ ಜೀರ್ಣೋದ್ಧಾರಗೊಂಡಿದೆ.
ಸುಮಾರು 65 ವರ್ಷಗಳ ಹಿಂದೆ 1968ರಲ್ಲಿ ಕ್ಷೇತ್ರದ ಕುಣಿಗಲ್ ಆದಣ್ಣ, ದನ್ಯಕುಮಾರ್, ನಾಗೇಂದ್ರಯ್ಯನವರ ಕುಟುಂಬ ಬೆಂಗಳೂರಿನ ಜಿವಂದರಯ್ಯ ಮತ್ತು ಎಂ ಸಿ ಅನಂತರಾಜಯ್ಯನವರ ನೇತೃತ್ವದಲ್ಲಿ, ಊರಿನ ಶ್ರಾವಕ ಶ್ರಾವಕಿಯರ ನೇರವಿನಿಂದ ಬಸದಿ ನಿರ್ಮಾಣ ಮಾಡಲಾಗಿತ್ತು. ಈ ಬಸದಿ ಶಿಥಿಲಾವಸ್ಥೆಗೆ ತಲುಪಿದಾಗ ನೂತನವಾಗಿ ಶಿಲಾಮಯ ಜಿನ ಮಂದಿರದ ನಿರ್ಮಾಣದ ಸಂಕಲ್ಪವನ್ನು ಊರಿನ ಧರ್ಮ ಬಂಧುಗಳು ಕೈಗೊಂಡು ಊರ ಪರ ಊರ ಸಹಕಾರದಿಂದ ಶಿಲಾಮಯ ಜಿನ ಮಂದಿರವಾಗಿ ನಿರ್ಮಾಣಗೊಂಡಿದೆ ಈ ಬಸದಿ.
ಬಸದಿಯೂ ಶ್ರೀಕ್ಷೇತ್ರ ನರಸಿಂಹರಾಜ ಪುರ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿಗಳವರ ಮಠದ ವ್ಯಾಪ್ತಿಗೆ ಒಳಪಟ್ಟಿದ್ದು ಕರ್ಮಯೋಗಿ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಆಶೀರ್ವಾದದೊಂದಿಗೆ ನರಸಿಂಹರಾಜ ಪುರದ ಶ್ರೀಗಳವರ ಮಾರ್ಗದರ್ಶನದಂತೆ ಪಂಚಕಲ್ಯಾಣ ವಿಧಿವಿಧಾನಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು ಶ್ರೀಕ್ಷೇತ್ರ ಅರಹಂತಗಿರಿಯ ಸ್ವಸ್ತಿಶ್ರೀ ಧವಳ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಹಾಗೂ ಸಮಸ್ತ ಭಟ್ಟಾರಕರುಗಳ ಉಪಸ್ಥಿತಿಯಲ್ಲಿ ದಿನಾಂಕ 28-04-2024 ರಿಂದ 01-05-2024ರ ವರೆಗೆ ಭಗವಾನ್ 1008 ಶ್ರೀ ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬ ನವನಿರ್ಮಿತ ಶಿಲಾಮಯ ಜಿನ ಮಂದಿರದ ಪುನರ್ ಪ್ರತಿಷ್ಠಾಪನೆ ಮಾನಸ್ಥಂಭೋಪರಿ ಚತುರ್ಮುಖ ಶ್ರೀ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಹಾಗೂ ಜಿನ ಶಾಸನ ಯಕ್ಷ ಯೆಕ್ಷಿಯರ ಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಧರ್ಮ ಬಂಧುಗಳ ಸಹಕಾರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ಸಮಿತಿ ವಿನಂತಿಸಿದೆ.
ಸಮಿತಿ ಮುಖಂಡರು ಜ್ವಾಲಮಾಲ ನ್ಯೂಸ್ ಗೆ ಮಾತನಾಡಿ ಜಿನ ಮಂದಿರದ ಪುನರ್ ಪ್ರತಿಷ್ಠಾಪನೆ ಗೆ ಸಹಕಾರ ನೀಡಿದವರಿಗೆ ನೆನಪಿಸಿದರು ಮತ್ತು ಸಮಸ್ತ ಭಟ್ಟಾರಕರುಗಳ ಉಪಸ್ಥಿತಿಯಲ್ಲಿ ದಿನಾಂಕ 28-04-2024 ರಿಂದ 01-05-2024ರ ವರೆಗೆ ನಾಲ್ಕು ದಿನ ನಡೆಯುವ ನವನಿರ್ಮಿತ ಜಿನ ಮಂದಿರದ ಪಂಚಕಲ್ಯಾಣ ಕಾರ್ಯಕ್ರಮದ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ವಿನಂತಿಸಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














