ಶ್ರವಣ ಬೆಳಗೊಳ ಜಾತ್ರೆಯ ಪ್ರಚಾರ-/ jwalamalanews / 2024

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಭಗವಾನ್ ಶ್ರೀ ಶ್ರೀ ಶ್ರೀ 1008 ನೇಮಿನಾಥ ತೀರ್ಥಂಕರರ ಪಂಚಕಲ್ಯಾಣ ಹಾಗೂ ಮಹಾರಥೋತ್ಸವ  ಶ್ರೀ ಕ್ಷೇತ್ರ ಶ್ರವಣಬೆಳಗೊಳ.

ವೀಕ್ಷಕ ಬಂದುಗಳೇ, ನೀವು ಇಲ್ಲಿ ನೋಡುತ್ತಿರುವುದು ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ 18 ಶತಮಾನದ ಪೂರ್ವ ದಿಂದಲು ನಡೆಯುತ್ತ ಬಂದಿರುವ ವೈಭವ ರಥೋತ್ಸವದ ಕುರುಹು ಆಗಿರುವ ಶ್ರೀ ಕ್ಷೇತ್ರದ ಶ್ರೀಮಠದಲ್ಲಿರುವ ವರ್ಣರಂಜಿತ ಬಿತ್ತಿ ಚಿತ್ರ ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ 2300 ವರ್ಷಗಳ ಇತಿಹಾಸವುಳ್ಳ ಪ್ರತಿವರ್ಷವು ಪರಂಪರಾಗತವಾಗಿ ಪಂಚಕಲ್ಯಾಣ ನಡೆದುಕೊಂಡು ಬರುತ್ತಿರುವ ಜೈನ ಮಠ ಶ್ರೀಮಠದ ಶ್ರೀವಿಹಾರ ರಥೋತ್ಸವ ಕರೋನ ಹಿನ್ನೆಲೆ ಹಾಗೂ ಕಾರಣಾಂತರಗಳಿಂದ ಕಳೆದ ನಾಲ್ಕು ವರ್ಷಗಳ ನಂತರ ಈ ಪ್ರಸ್ತುತ ವರ್ಷ ನಡೆಯಲಿರುವ ಭಗವಾನ್ ಶ್ರೀ ಶ್ರೀ ಶ್ರೀ 1008 ನೇಮಿನಾಥ ತೀರ್ಥಂಕರರ ಪಂಚಕಲ್ಯಾಣ ಹಾಗೂ ಮಹಾರಥೋತ್ಸವ ವೈಭವೋಪಿತವಾಗಿ ಪ್ರಾತಃ ಸ್ಮರಣೀಯ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದೊಂದಿಗೆ, ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ದಿನಾಂಕ 11-04-2024 ರಿಂದ 25-04-2024 ರವರೆಗೆ ನಡೆಯಲಿದೆ.

ದಿನಾಂಕ 11 ರಿಂದ 17ರ ವರೆಗೆ ಪ್ರತಿದಿನ ಕ್ಷೇತ್ರದ 40 ಬಸದಿಗಳಲ್ಲು ಪೂಜಾರಾಧನೆಗಳು ವಿಧಿಪೂರ್ವಕವಾಗಿ ನಡೆಯಲಿದ್ದು ಪ್ರಮುಖವಾಗಿ ದಿನಾಂಕ 13-04-2024 ರಂದು ವಿಂಧ್ಯಗಿರಿ ಶಿಖರ ಚೂಡಾಮಣಿ ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 1044ನೇ ಪ್ರತಿಷ್ಠಾಪನಾ ದಿವಸ ವಿಶೇಷ ಪಾದಪೂಜೆ. 18-04-2024 ರಂದು ಪರಂಪರಾಗತವಾಗಿ ಶ್ರೀ ಸ್ವಾಮಿಯವರುಗಳನ್ನು ಮೇಣಿಯಲ್ಲಿ ಕರೆದುಕೊಂಡು ಹೋಗಿ ಧರ್ಮಚಕ್ರ ಪೂಜೆ ಹಾಗೂ ಅಂದು ಬಂಡಾರ ಬಸದಿಯ ಎದುರು ದ್ವಜರೋಹಣ. 19 ರಂದು ಗರ್ಭಕಲ್ಯಾಣ ಮತ್ತು ದೇವೇಂದ್ರ ವಾಹನೋತ್ಸವ. 20 ರಂದು ಜನ್ಮಕಲ್ಯಾಣ ಪಾಂಡುಕ ಶಿಲೆಯಲ್ಲಿ ಜನ್ಮಾಭಿಷೇಕ, ಸಂಜೆ ಪರಂಪರಾಗತವಾಗಿ ವಿಂಧ್ಯಗಿರಿ ಮಹಾದ್ವಾರದ ಎದುರು  ಉಯ್ಯಾಲೆ ಕಟ್ಟೆಯಲ್ಲಿ ಬಾಲಲಿಲೋತ್ಸವ.  21 ರಂದು ಶ್ರೀಮಠದಲ್ಲಿ ಸಿಂಹಾಸನ ಪೂಜೆ ಹಾಗೂ ಶ್ರೀಗಳವರ ಪ್ರಥಮ ಪಟ್ಟಾಭಿಷೇಕ ವರ್ಧಂತೋತ್ಸವ. ಅಂದು ಭಗವಾನ್ ಶ್ರೀ ಮಹಾವೀರ ಜಯಂತಿ ಪ್ರಯುಕ್ತ ಬೆಳ್ಳಿ ಪಲ್ಲಕ್ಕಿಯಲ್ಲಿ ಉತ್ಸವ ಹಾಗೂ ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಪಂಚಾಮೃತ ಅಭಿಷೇಕ. 22 ರಂದು ಚಂದ್ರಗಿರಿಯ ಅಂತರಾಳ ಪಾರ್ಶ್ವನಾಥ ಸ್ವಾಮಿಯವರಿಗೆ ಮಸ್ತಕಾಭಿಷೇಕ ಸಂಜೆ ಶ್ರೀ ಬಾಹುಬಲಿ ಸ್ವಾಮಿ ಮತ್ತು 24 ತೀರ್ಥಂಕರರ ಉತ್ಸವ ಹಾಗೂ ಸರ್ವಾಹ್ಣಿ ಯಕ್ಷೆ ಉತ್ಸವ. ದಿನಾಂಕ 23-04-2024 ರಂದು ಸಮವಸರಣ ಪ್ರತೀಕವಾದ ಮಹಾರಥಯಾತ್ರಾ ಮಹೋತ್ಸವ ಸಂಜೆ ಶ್ರೀ ಮಠದಲ್ಲಿ ಶ್ರೀ ಕೂಷ್ಮಾಂಡಿನಿದೇವಿಗೆ ಶೋಡಷೋಪಚಾರ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ. 24 ರಂದು ಪ್ರತಾಃ ಕಾಲ ಬಂಡಾರ ಬಸದಿಯಲ್ಲಿ 24 ತೀರ್ಥಂಕರರಿಗೆ ಏಕಕಾಲದಲ್ಲಿ ಮಹಾಭಿಷೇಕ ಪೂಜೆ ಸಂಜೆ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯವರಿಗೆ ಪಾದಾಭಿಷೇಕ ಹಾಗೂ ಚಿಕ್ಕದೇವರಾಯ ಒಡೆಯರ ಕಲ್ಯಾಣಿಯಲ್ಲಿ ತೆಪ್ಪೋತ್ಸವ. ಹೀಗೆ ಇಷ್ಟು ದಿನಗಳ ಪೂಜಾ ಕಾರ್ಯಕ್ರಮದಲ್ಲಿ ಧರ್ಮಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಪುಣ್ಯಲಾಭ ನಿಮ್ಮದಾಗಿಸಿ. ಈ ಎಲ್ಲ ಕಾರ್ಯಕ್ರಮಗಳನ್ನು ನೀವು ಜ್ವಾಲಮಾಲ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್