ಮಕ್ಕಿ ಮನೆ ಕಲಾವೃಂದ ಹಂತೂರು-2024/ jwalamalanews / 2024

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಹಂತೂರು, ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಬಸದಿ ಧಾಮಸಂಪ್ರೋಕ್ಷಣಾ ಪಂಚಕಲ್ಯಾಣ ಮಹೋತ್ಸವ ಮಾನಸ್ಥಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನಾ ವಿಧಿವಿಧಾನಗಳು ನೆರವೇರಿತು. ನಂತರ ಸಂಸ್ಕೃತಿ ಜೈನ್ ಎಳನೀರು ಇವರ ನಿರೂಪಣೆಯೊಂದಿಗೆ ಜಿನ ಭಜನಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ದಿನಾಂಕ 22-03-2024 ನೇ ಶುಕ್ರವಾರದಿಂದ ದಿನಾಂಕ 24-03-2024 ನೇ ಭಾನುವಾರದವರೆಗೆ ಸ್ವಸ್ತಿಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಸಮಸ್ತ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿ ಇವರ ಉಪಸ್ಥಿತಿಯಲ್ಲಿ ಧಾಮಸಂಪ್ರೋಕ್ಷಣಾ ಪಂಚಕಲ್ಯಾಣ ಮಹೋತ್ಸವ ಮಾನಸ್ಥಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನಾ ವಿಧಿವಿಧಾನಗಳು ಸಂಪನ್ನಗೊಳ್ಳಲಿದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್