-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುವ ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಸ್ವಾಮಿ ಮತ್ತು ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ರಥಯಾತ್ರ ಮಹೋತ್ಸವ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ದಿನಾಂಕ 25-03-2024 ರಿಂದ ದಿನಾಂಕ 28-03-2024 ರವರೆಗೆ ಕ್ಷೇತ್ರದ ವಿವಿಧ ಬಸದಿಗಳಲ್ಲಿ ವಿಶೇಷ ಆರಾಧನೆಗಳು ನಡೆಯಲಿದೆ. ಹಾಗೂ ದಿನಾಂಕ 29-03-2024 ರಿಂದ 03-04-2024ರ ವರೆಗೆ ರಥಯಾತ್ರ ಮಹೋತ್ಸವಗಳು ನಡೆಯಲಿದ್ದು, 29-03-2024 ರಂದು ನಾಗವಾಹನೋತ್ಸವ 30 ರಂದು ಸಿಂಹವಾಹನೋತ್ಸವ 31 ರಂದು ಬೆಳ್ಳಿ ರಥೋತ್ಸವ, ಪುಷ್ಪರಥೋತ್ಸವ ಹಾಗೂ 01-04-2024 ರಂದು ಮಹಾರಥೋತ್ಸವ ನಡೆಯಲಿದೆ. ಧರ್ಮ ಬಂಧುಗಳು ಆಗಮಿಸಿ ಪುಣ್ಯಾಭಾಗಿಗಳಾಗ ಬೇಕಾಗಿ ಶ್ರೀಮಠದ ಆತ್ಮೀಯ ಆಹ್ವಾನ ಹಾಗೂ ಈ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ನಲ್ಲಿ ನೇರಪ್ರಸಾರ ಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














