ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಲೆನಾಡ ಪರಿಸರದಲ್ಲಿ ಹಂತೂರು ಗ್ರಾಮದ ಸುಮಾರು 930 ವರ್ಷಗಳ ಹಿಂದೆ ಜಿನ ಭಕ್ತರಾದ ಹೊಯ್ಸಳ ರಾಜರ ವಂಶಸ್ಥರಿಂದ ಪ್ರತಿಷ್ಠಾಪನೆಗೊಂಡ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಜಿನ ಮಂದಿರವು ಸಂಪೂರ್ಣ ಶೀತಿಲಾವಸ್ಥೆಗೊಂಡಿದ್ದು ಈ ಜಿನ ಮಂದಿರವನ್ನು ಸ್ವಸ್ತಿಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿ ಬಸದಿ ಮಠ ಸಿಂಹನಗದ್ದೆ ನರಸಿಂಹರಾಜ ಪುರ ಇವರ ಸಾನಿಧ್ಯ ಹಾಗೂ ನೇತೃತ್ವದಲ್ಲಿ ಪರಮ ಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ|| ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಂತೂರು ಗ್ರಾಮಸ್ಥರು ಸಮಸ್ತ ಜೈನ ಶ್ರಾವಕರು ಮತ್ತು ಶ್ರೀಮತಿ ಲಾವಣ್ಯ ಶ್ರೀ ಅರ್ಕಕೀರ್ತಿ ಜೈನ್ ಮತ್ತು ಮಕ್ಕಳು ಶಿಥಲ್ ಇಂಜಿನಿಯರ್ಸ್ ಪ್ರೈ., ಲಿ ., ಎಳನೀರು ಹಾಗೂ ಶ್ರೀ ಪಾರ್ಶ್ವನಾಥ್, ಚೆಳ್ಳಕೆರೆ ಇವರ ನೆರವಿನೊಂದಿಗೆ ಮಾನಸ್ಥಂಭ ಸಹಿತ ಶಿಲಾಮಯ ಜಿನ ಮಂದಿರ ಜೀರ್ಣೋದ್ಧಾರ ಕಾಮಗಾರಿಯೂ ಪೂರ್ಣಗೊಂಡಿದ್ದು ದಿನಾಂಕ 22-03-2024 ನೇ ಶುಕ್ರವಾರದಿಂದ ದಿನಾಂಕ 24-03-2024 ನೇ ಭಾನುವಾರದವರೆಗೆ ಸ್ವಸ್ತಿಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಸಮಸ್ತ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿ ಇವರ ಉಪಸ್ಥಿತಿಯಲ್ಲಿ ಧಾಮಸಂಪ್ರೋಕ್ಷಣಾ ಪಂಚಕಲ್ಯಾಣ ಮಹೋತ್ಸವ ಮಾನಸ್ಥಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನಾ ವಿಧಿವಿಧಾನಗಳು ಸಂಪನ್ನಗೊಳ್ಳಲಿದೆ. ಸಂಯುಕ್ತ ಸಧರ್ಮ ಬಂಧುಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಪೂಣ್ಯಾರ್ಜನೆಯನ್ನು ಮಾಡಿಕೊಂಡು ಶ್ರೀ ಜಿನ ಗಂದೋದಕವನ್ನು ಸ್ವೀಕರಿಸ ಬೇಕಾಗಿ ಶ್ರೀಗಳವರ ಅಪ್ಪಣೆಯಂತೆ ಅಪೇಕ್ಷಿಸುತ್ತಿದೇವೆ. ಹಾಗೂ ಈ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ನಲ್ಲಿ ನೇರಪ್ರಸಾರಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














