ಸೋಂಧ ಮಹಾರಥೋತ್ಸವ ಪ್ರೋಮೋ-2024 / jwalamalanews / 2024

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ ಸುಧಾ ಪುರ ಸೋಂಧಾ. ಇಲ್ಲಿ ಜಗದ್ಗುರು ಅಕಲಂಕ ಕೇಸರಿ ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ  ಮಹಾಸ್ವಾಮೀಜಿಗಳವರ ದಿವ್ಯ ನೇತೃತ್ವ ಹಾಗೂ ಮಾರ್ಗ ದರ್ಶನದಲ್ಲಿ ದಿನಾಂಕ 17-03-2024 ರಿಂದ ದಿನಾಂಕ 24-03-2024 ರವರೆಗೆ ಶ್ರೀ ಸಿದ್ಧ ಚಕ್ರ ಮಹಾಮಂಡಲ ಆರಾಧನೆ ಹಾಗೂ ದಿನಾಂಕ 25-03-2024 ನೇ ಸೋಮವಾರ ಶ್ರೀ ಚತುರ್ವಿಂಶತಿ ತೀರ್ಥಂಕರರಿಗೆ ಕಲ್ಪದೃಮ ಮಹಾ ಪೂಜೆ ಹಾಗೂ 108 ಅವನ ಕುಂಡಗಳಲ್ಲಿ ಪೂರ್ಣಾಹುತಿ ಮತ್ತು ಶ್ರೀ ಜಿನ ಭಗವಂತರ ಶ್ರೀ ವಿಹಾರ ಶ್ರೀ ಆದಿನಾಥ ಸ್ವಾಮಿಯ ಮುತ್ತಿನ ಕೆರೆಯಲ್ಲಿ ತೆಪ್ಪೋತ್ಸವ, ಮತ್ತು ಕ್ಷೇತ್ರದ ಎಲ್ಲ ಬಸದಿಗಳಲ್ಲಿ ವಿಶೇಷ ಪೂಜಾಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ ಸೋಂಧಾದಲ್ಲಿ ಬಹಳ ವೈವಿದ್ಯಮಯ ಹಾಗೂ ವಿಜೃಂಭಣೆಯೊಂದಿಗೆ ಆಚಾರ್ಯ ಶ್ರೀ 108 ವಿಧ್ಯಾಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ಅಭಿಷ್ಣ ಜ್ಞಾನ ಭಾಸ್ಕರ ಪರಮಪೂಜ್ಯ 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯ ಹಾಗೂ ಸಮಸ್ತ ಮಠದ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಈ ಮಂಗಲ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ಈ ಮಂಗಲ ಮಯ ಕಾರ್ಯಕ್ರಮಗಳಲ್ಲಿ ಸಮಸ್ತ ಶ್ರಾವಕ ಶ್ರಾವಕಿಯರು ಧರ್ಮ ಬಂಧುಗಳು ಭಾಗವಹಿಸಿ ಪೂಣ್ಯ ಭಾಜನರಾಗಬೇಕೆಂದು ಅಪೇಕ್ಷಿಸುತ್ತೇವೆ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್