-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ನಗು ಮೊಗದ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ. 12 ವರ್ಷದ ಬಳಿಕ ದಿನಾಂಕ 22-2-2024 ರಿಂದ ದಿನಾಂಕ 1-3-2024 ರವರೆಗೆ ವಿಜೃಂಭಣೆಯಿಂದ ಮಹೋತ್ಸವ ಜರುಗಿ ಅಷ್ಟು ದಿನ ಸಂಭ್ರಮ ಮೇಳೈಸಿ ಅಜಿರ ಮನೆತನದವರಿಂದ ಸ್ಥಾಪಿಸಲ್ಪಟ್ಟ ತ್ಯಾಗ ಮೂರ್ತಿ ವಿರಾಗಿಗೆ ಅಷ್ಠ ದ್ರವ್ಯಗಳಿಂದ ಅಭಿಷೇಕಗೈದು ವಿವಿಧ ವರ್ಣದಲ್ಲಿ ಮಿಂದೆದ್ದ ಸುಂದರಾಂಗನ ಕಣ್ಣತುಂಬಿಕೊಂಡ ಜನಸಾಗರ, ಯುಗಳ ಮುನಿ ಮಹಾರಾಜರಾದ ಪರಮ ಪೂಜ್ಯ 108 ಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜರು, ಪರಮ ಪೂಜ್ಯ ಅಮರ ಕೀರ್ತಿ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಮೂಡುಬಿದ್ರೆ ಜೈನ ಮಠದ ಡಾ|| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಯವರ ಸಮ್ಮುಖದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಅಳದಂಗಡಿ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ನೇತೃತ್ವದಲ್ಲಿ, ಪ್ರವೀಣ್ ಅಜ್ರಿ ಇವರ ಅಭಿಷೇಕದ ಪೂರ್ಣ ಉಸ್ತುವಾರಿಯಲ್ಲಿ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವ ಮೈಸೂರು ಮಹಾರಾಜರು ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಸಮಸ್ತ ಭಟ್ಟಾರಕರುಗಳು ಅಭಿಷೇಕ ಪೂಜಾದಿ ಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶೋಭೆತಂದರು ಅನೇಕ ಸಾಂಸ್ಕೃತಿಕ ತಂಡಗಳು 9 ದಿನ ಭಾಗವಹಿಸಿ ಮಹೋತ್ಸವದ ಮೆರಗನ್ನು ಹೆಚ್ಚಿಸಿದ್ದವು. ಒಟ್ಟಾರೆ ಬಿಸಿಲ ಬೇಗೆಯನ್ನು ಮರೆಸಿ ಸಂಭ್ರಮದಿಂದ ದೂರ ದೂರದಿಂದ ಆಗಮಿಸಿದ ಧರ್ಮ ಬಂಧುಗಳು ಮೈಮರೆತು ಪಂಚಕಲ್ಯಾಣ ಮಹೋತ್ಸವ ಹಾಗೂ ಭಗವಂತನ ಮಹಾಮಜ್ಜನದಲ್ಲಿ ಪಾಲ್ಗೊಂಡರು ಸಂಕ್ಷಿಪ್ತ ದೃಶ್ಯಾವಳಿಗಳು ಇಲ್ಲಿದೆ.
ಜಾಹೀರಾತು.
ಶ್ರೀ ಸಂವೇದ ಶೀಕರ್ಜಿ ಪಾವಪುರಿ ಪ್ರವಾಸ ಪಹಾರ ಭೋಜನ ವಸತಿ ಬಸ್ಸಿನ ವ್ಯವಸ್ಥೆ ಸೇರಿದಂತೆ ಪ್ಯಾಕೆಜ್ ಅನ್ನು ಬಿ ಜಿ ಸುವೀರ್ ಜೈನ್ ತಮಕೂರು ಇವರು ಆಯೋಜಿಸಿದ್ದಾರೆ. ಅಂತೆಯೇ ಅಯೋಧ್ಯ ವಾರಣಾಸಿ ಆಗ್ರಾ ಮಥುರ ಪ್ರಯಾಗ್ ರಾಜ್ ಪ್ರವಾಸ ಕೂಡ ಏರ್ಪಡಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬಿ ಜಿ ಸುವೀರ್ ಜೈನ್ ತಮಕೂರು.
ಜಾಹೀರಾತು.
ಪ್ರಕೃತಿ ನಿರ್ಮಿತ ಐತಿಹಾಸಿಕ ಸುಂದರ ತಾಣಗಳು ಸುತ್ತಲು ಜೈನ ಬಸದಿಗಳಿರುವ ಕ್ಷೇತ್ರಗಳಾದ ಮೂಡುಬಿದ್ರೆ ಕಾರ್ಕಳ ವೇಣೂರು ಹೀಗೆ ಸುತ್ತಲು ಅನೇಕ ಜೈನ ಕ್ಷೇತ್ರಗಳಿರುವ ಬೀಡು ಬಾಹುಬಲಿ ಕ್ಷೇತ್ರ ಆನೆಕೆರೆ ಚತುರ್ಮುಖ ಬಸದಿ ಇರುವ ಕಾರ್ಕಳ ಕ್ಷೇತ್ರದ ನಡುವೆ ಅತಿ ಸನಿಹದಲ್ಲಿ ತಂಗಲು ಪ್ರಶಾಂತ ವಾತಾವರಣದಲ್ಲಿ ನಿರ್ಮಿತವಾದ ವರ್ಧಮಾನ ದಾನ ಶಾಲಾ ರೆಸಿಡೆನ್ಸಿಗೆ ಒಮ್ಮೆ ಬೇಟಿಕೊಡಿ. ಸುಂದರ ಬೆಟ್ಟದ ಪರಿಸರಕ್ಕೆ ತೆರೆದುಕೊಳ್ಳುವ ಸುವ್ಯವಸ್ಥಿತ ಕೊಠಡಿಗಳು, ವೈ–ಫೈ ಕನೆಕ್ಷನ್, ಎಸಿ ಕೊಠಡಿಗಳ ಸಹಿತ ಊಟೋಪಚಾರ ವ್ಯವಸ್ಥೆಯಲ್ಲಿ ಜೈನ್ ಫೂಡ್ ಕೂಡ ದೊರೆಯಲಿದೆ. ಸಮಂಜಸವಾದ ಬೆಲೆಯೊಂದಿಗೆ ನಿಮಗೆ ಸೇವೆ ನೀಡಲು ಸಜ್ಜಾಗಿದೆ. ವರ್ಧಮಾನ ದಾನ ಶಾಲಾ ರೆಸಿಡೆನ್ಸಿ ಕಾರ್ಕಳ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್
.














