ವರ್ಧಮಾನ್ ಜೈನ್ ಮಿಲನ್ ನಮೋಕಾರ ಮಂತ್ರ ಪಠಣ -2024 / jwalamalanews / 2024

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ಮೈಸೂರಿನ ವರ್ಧಮಾನ್ ಜೈನ್ ವತಿಯಿಂದ 08-03-2024 ರಿಂದ 09-03-2024 ರ ವರೆಗೆ ನಡೆದ 24 ಗಂಟೆಗಳ ಅಖಂಡ ನಮೋಕಾರ ಪಠಣಾ ಕಾರ್ಯಕ್ರಮವು ಎಂ ಎಲ್ ಜೈನ್ ಭೋರ್ಡಿಂಗ್ ನಲ್ಲಿ ಬಹಳ ಅಚ್ಚುಕಟ್ಟಾಗಿ ವಿಧಿವತ್ತಾಗಿ ನಡೆಯಿತು. ಈ ಕಾರ್ಯಕ್ರಮವು ಮೊದಲಿಗೆ ಅಂದರೆ 08-03-2024 ರಂದು 1008 ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಉದ್ಘಾಟನೆಯನ್ನು ದಿಗಂಬರ ಜೈನ ಸಮಾಜದ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸದಸ್ಯರು, ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷರು, ಭಾರತೀಯ ಜೈನ್ ಮಿಲನ್ ವಲಯ 8ರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಎಲ್ಲಾ ಮಿಲನ್ ಅಧ್ಯಕ್ಷರು ಸದಸ್ಯರು, ಜ್ವಾಲಮಾಲ ನ್ಯೂಸ್ ನಿರ್ಮಾಪಕರು ಹಾಗೂ ತಂಡದವರು, ಸಮಸ್ತ ಶ್ರಾವಕ ಶ್ರಾವಕಿಯರು ಬಂದು ವರ್ಧಮಾನ್ ಜೈನ್ ಮಿಲನ್ ನಿಂದ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಭಾಗವಹಿಸಿದ ಎಲ್ಲಾ ಶ್ರಾವಕ ಶ್ರಾವಕಿಯರಿಗೆ ಭಾಗವಹಿಸುವಿಕೆ ಪತ್ರ ಹಾಗೂ ಫಲವನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವು 9-03-2024ರ ಬೆಳಿಗ್ಗೆ 7:30ಕ್ಕೆ ಪಂಚಾಮೃತ ಅಭಿಷೇಕ ಮಾಡಲಾಗಿ 8:20ಕ್ಕೆ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ವರ್ಧಮಾನ್ ಜೈನ್ ಮಿಲನ್ ವತಿಯಿಂದ ನಡೆದ ಕಾರ್ಯಕ್ರಮಗಳು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್