ವೇಣೂರಿನಲ್ಲಿ ಅಜಿತ್ ಹನಮಕ್ಕನವರ್/ ಜ್ವಾಲಾಮಲನ್ಯೂಸ್/2024

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಅಜಿತ್ ಹನುಮಕ್ಕನವರ್ :- ಸಭಿಕರಿಗೆ ನಮಸ್ಕರಿಸಿ ತಮ್ಮ ಮಾತುಗಳನ್ನು ಪ್ರಾರಂಭಿಸಿದರು. ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ವೇಣೂರಿಗೆ  ಬಂದಿರುವುದು ಹಾಗೂ ವೇದಿಕೇ ಮೇಲೆ ಕುಳಿತಿರುವ ಒಬ್ಬೊಬ್ಬರು ಸಹ ಸಮಾಜಕ್ಕೆ ಅವರು ಕೊಟ್ಟಿರುವ ಕೊಡುಗೆ ಧರ್ಮ ಸೇವೆಯಲ್ಲಿ ಅವರ ಮುಂದೆ ನಾನು ತೃಣ ಸಮಾನ ಅವರ ಜೊತೆಯಲ್ಲಿ ಕುಳಿತು ಕೊಳ್ಳವುದು ಸೌಭ್ಯಾಗ ವೆಂದರು. ಯುಗಳ ಮುನಿಗಳು ಮತ್ತು ಭಟ್ಟಾರಕ ಆಶೀರ್ವಾದವನ್ನು ಕೋರಿದರು. ವೇದಿಕೆ ಗಣ್ಯರ ಭಾಷಣವನ್ನು ಕೇಳಲು ಕಾತರನಾಗಿದೇನೆ ಎಂದರು.

ಜೈನ ಸಿದ್ದಾಂತ, ಜೈನ ದರ್ಶನ ಈ ಪ್ರಪಂಚಕ್ಕೆ ಕೊಟ್ಟಿರುವ ಅತಿದೊಡ್ಡ ಕೊಡುಗೆ ಮತ್ತು ಈ ಪ್ರಪಂಚಕ್ಕೆ ಬೇಕಾಗಿರುವುದು ಅನೇಕಾಂತವಾದ. ಮೂರು ಮೂಲ ಸಿದ್ದಾಂತದ ಪೈಕಿಯಲ್ಲಿ ಒಂದಾಗಿರುವ ಅನೇಕಾಂತವಾದ ಬಗ್ಗೆ ಮಾತನಾಡೊಣ್ಣ. ಬೋಗಿಗಳು ಬಹಳ ಆದರು ಆದರೆ ಈ ನೆಲದಲ್ಲಿ ಗೌರವ ಸಿಕ್ಕಿದ್ದು ತ್ಯಾಗಿಗಳಿಗೆ, ಬೋಗಿಗಳು ಬೋಗ ಆ ಒಂದು ಜೀವನಕ್ಕೆ ಚಿರಕಾಲ ಗೌರವವನ್ನು ಪಡೆದಿದ್ದು ಚಿರಕಾಲ ಪೂಜನಿಯವಾಗಿದ್ದು ತ್ಯಾಗಿಗಳು ಮಾತ್ರ. ತ್ಯಾಗಕ್ಕೆ ಎಂಥಹ ಗೌರವವಿದೆ ಈ ನಾಡಿನಲ್ಲಿ ಎನ್ನುವುದಕ್ಕೆ ಉದಾಹರಣೆ ಬಾಹುಬಲಿ. ಎಲ್ಲವನ್ನು ಗೆದ್ದ ನಂತರವು ಕೂಡ ಇದರಲ್ಲಿ ಏನು ಸುಖವಿಲ್ಲಾ ಎಂದು ಆರ್ಥ ಮಾಡಿಕೊಂಡಿದ್ದಕ್ಕೆ ನಾವು ಅವರನ್ನು ಪೂಜಿಸುತ್ತೀವಿ, ಇದ್ದು ಈ ನಾಡಿನಲ್ಲಿ ತ್ಯಾಗಕ್ಕಿರುವ ಬೆಲೆ. ತ್ಯಾಗವನ್ನು ಸಧಾ ಕಾಲ ಗೌರವಿಸಿದಂತಹ ನಾಡು, ತ್ಯಾಗಕ್ಕೆ ಬೆಲೆ ಕೊಟ್ಟಂತಹ ನಾಡು, ತ್ಯಾಗಿಗಳನ್ನು ಗೌರವಿಸಿದ ನಾಡು ಅದಕ್ಕಾಗಿ ಮೈಮೇಲೆ ಬಟ್ಟೆ ಇಲ್ಲದೆ ಹೋದರು ಕೂಡ ಅವರನ್ನು ಮಹಾರಾಜರು ಎಂದು ಕರೆಯುತ್ತೇವೆ.

ಅರಿಹಂತ ಎಂದರೆ ಕೊಂದವನು ಎಂದು, ಅಂದರೆ ತನ್ನೊಳಗಿನ ವೈರಿಯನ್ನು ಕೊಂದವನು ಅರಿಹಂತ ಎಂದು ಅರ್ಥ. ಇಂತಹ ದರ್ಶನಗಳು ಹುಟ್ಟುವುದಕ್ಕೆ ಭಾರತಕ್ಕಿಂತಲೂ ಯೋಗ್ಯವಾದ ಭೂಮಿ ಇರಲಿಲ್ಲ.  ಜೈನ ತೀರ್ಥಂಕರರ ಸಿದ್ದಾಂತವನ್ನು ಮತ್ತು ಅವರ ಜೀವಮಾನದ ಅಷ್ಟು ಭೋಧನೆಗಳನ್ನ 2 ಶಬ್ಧಗಳಲ್ಲಿ ಹೇಳಬಹುದು ಆ ಶಬ್ಧಗಳು ಅನೇಕಾಂತವಾದ ಮತ್ತು ಸ್ಯಾಧವಾದ, ಇವತ್ತಿನ ಜಗತ್ತಿಗೆ ಬೇಕಾಗಿರುವಂತಹದ್ದು ಎಂದು ತಿಳಿಸಿದರು. ಕೇವಲ ಜ್ಞಾನದ ಅರಿವು ಜಗತ್ತಿಗೆ ಎಷ್ಟು ಅಗತ್ಯವಿದೆ ಎಂದು ಒಂದು ಸರಳ ಕಥೆಯೊಂದಿಗೆ ವಿವರಿಸಿದರು. ಹಾಗೂ ಪ್ರಪಂಚದಲ್ಲಿ ಶಾಂತಿ ಸ್ಥಾಪನೆಯ ಅನಿವಾರ್ಯತೆ ಮತ್ತು ಅದಕ್ಕೆ ಜೈನ ಸಿದ್ದಾಂತದ ಅಗತ್ಯತೆಯನ್ನು ವಿವರಿಸಿದರು.

“ಪರಸ್ಪರೋಪಗ್ರಹೋ ಜೀವಾನಾಂ” ಎಂಬ ಜೈನ ಶ್ಲೋಕದ ಅರ್ಥದೊಂದಿಗೆ ಜಗತ್ತಿನಲ್ಲಿ ಒಬ್ಬರಿಗೊಬ್ಬರ ಅನಿವಾರ್ಯತೆಯನ್ನು ವಿವರಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್