ಕನಕಗಿರಿ ಅತಿಶಯ ಮಹೋತ್ಸವ ದಿನಾಂಕ 5/2/2017 ರಂದು ವೈಭವಯುತ ಗಜರಥ ಮಹೋತ್ಸವದೊಂದಿಗೆ ಸಮಾರೋಪಗೊಂಡಿತು. ಗಜ ರಥೋತ್ಸವದಲ್ಲಿ ಪಾಲ್ಗೊಳ್ಳಲು ವಿವಿದೆಡೆಯಿಂದ ಜನ ಸಾಗರೋಪಾದಿಯಲ್ಲಿ ಹರಿದು ಬಂದಿತ್ತು. ಇದರೊಂದಿಗೆ ಕನಕಗಿರಿ ಮಹೋತ್ಸವ ಅದ್ಭುತ ಯಶಸ್ಸನ್ನು ಕಂಡಿತು.
ವಿವಿಧ ರೀತಿಯ ಮಂಗಳವಾದ್ಯಗಳು . ಸ್ಥಬ್ಧ ಚಿತ್ರಗಳು, ವಿವಿಧ ಬಗೆಯ ನೃತ್ಯ ಗಳನ್ನು ನೋಡಿ ಜನರು ಕಣ್ತುಂಬಿಕೊಂಡರು. ಗಜ ಪಡೆಯನ್ನು ಮೆರವಣಿಗೆ ಮೂಲಕ ಕರೆ ತಂದಿದ್ದು ತುಂಬಾ ಆಕರ್ಷಣೀಯವಾಗಿತ್ತು.