ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಹೀಗೆ ಅನೇಕ ಧರ್ಮ ಅಹಿಂಸೆಯನ್ನು ಪ್ರತಿಪಾದಿಸಿದರು ಕೂಡ ಜೀವನದ ಎಲ್ಲ ಘಟ್ಟದಲು ಅಹಿಂಸೆ ಸಿದ್ಧಾಂತವನ್ನು ಪಾಲಿಸುತ್ತದೆ ಜೈನ ಧರ್ಮ ಅದರ ಪ್ರಕಾರ ಪ್ರತಿಯೊಂದು ಜೀವಿಗೂ ಆತ್ಮವಿರುತ್ತದೆ ಪ್ರತಿಯೊಂದು ಜೀವಿಯು ಸ್ವತಂತ್ರವಾಗಿರಲ್ಲು ಬಯಸುತ್ತದೆ. ನೀವು ನೋಡಬಹುದು ಈ ಹಾದಿಯಲ್ಲಿ ಅತ್ಯಂತ ಸರಳ ಜೀವನವನ್ನು ಜೀವಿಸುವ ಸಾಧು ಮುನಿಗಳನ್ನು. ಶುದ್ಧ ಸಸ್ಯಹಾರಯುತ ಸರಳ ಆಹಾರ, ಮಳೆ ಇರಲಿ ಬಿಸಿಲಿರಲ್ಲಿ ಚಳಿ ಇರಲಿ ಬರಿಗಾಲಲಿ ಎಷ್ಟು ದೂರವನ್ನಾದರು ಸರಿ ಕ್ರಮಿಸುವ ದೃಢತೆ ಅವರಲ್ಲಿರುತ್ತದ್ದೆ. ಮಾತನಾಡುವಾಗ ನಡೆಯುವಾಗ ನಡೆಯುವ ದಾರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ನಡೆಯುತ್ತಾರೆ, ಇರುವೆಯಂತಹ ಸೂಕ್ಷ್ಮ ಜೀವಿಗಳಿಗೂ ನಮ್ಮಿಂದ ಹಿಂಸೆಯಾದಿರಲ್ಲಿ ಎನ್ನುವುದು ಭಾವನೆ. ಇದೆ ಸಿದ್ದಾಂತವನ್ನು ಅನುಸರಿಸಿ ಎಲ್ಲಾ ಜೈನ ಅನುಯಾಯಿಗಳು ಸೂಕ್ಷ್ಮ ಜೀವಿಗಳಿಗೂ ತಮ್ಮಿಂದ ಪ್ರಾಣ ಹಾನಿಯಾಗಬಾರದೆಂದು ಶಪತ ಮಾಡುತ್ತಾರೆ, ಸಸ್ಯಹಾರ ಸೇವಿಸುತ್ತಾರೆ. ಸಸ್ಯಹಾರದಲು ಈರುಳ್ಳಿ, ಬೆಳ್ಳುಳ್ಳಿ, ಗೆಡ್ಡೆಗಳು, ಮಷ್ರೊಂ ಇದ್ಯಾವುದನ್ನು ತಿನ್ನುವುದ್ದಿಲ್ಲಾ, ಏಕೆಂದರೆ ಅದನ್ನು ಭೂಮಿಯಿಂದ ಅಗೆದು ತೆಗೆಯುವಾಗ ಅನೇಕ ಸೂಕ್ಷ್ಮ ಜೀವಿ ಜಂತುಗಳಿಗೆ ಹಾನಿಯಾಗುವ ಸಂಬವವಿರುತ್ತದೆ, ಜೊತೆಗೆ ರೆಂಬೆ, ಹೂ, ಹಣ್ಣುಗಳನ್ನಲ್ಲದೆ, ಅದರ ಬೇರನ್ನೆ ಕಡಿದರೆ, ಅದರ ಜೀವದ ಕೊನೆಯಾಗುವುದು ಎನ್ನುವುದು ಒಂದು ಭಾವನೆಯಾದರೆ, ತಮ್ಮ ಸ್ವಸ್ತ್ಯದ ದೃಷ್ಟಿಯಿಂದಲು ನೋಡುವುದ್ದಾದರೆ ಇವುಗಳ ಸೇವನೆಯಿಂದ ಉದ್ರೇಕ ಭಾವನೆಗಳು ಉತ್ಪತ್ತಿಯಾಗುತ್ತದೆ. ಇದು ನಮಗೆ ಸಾಮಾನ್ಯ ವಿಷಯವಾಗಿರುವುದು ವೈಜ್ಞಾನಿಕವಾಗಿ ಗಮನಿಸಿದಾಗ ಅಂಧಕಾರ ಎಲ್ಲಿರುತ್ತದೆ ಅಲ್ಲಿ ಜೀವಿಗಳ ಉತ್ಪತ್ತಿಯಾಗುತ್ತದೆ. ಏಕೆಂದರೆ ಅಲ್ಲಿಗೆ ಸೂರ್ಯನ ಕಿರಣಗಳು ಬೀಳುವುದಿಲ್ಲ, ಇದೆ ಕಾರಣದಿಂದ ಜೈನರು ತಮ್ಮ ದಿನದ ಕೊನೆಯ ಆಹಾರವನ್ನು ಸೂರ್ಯಾಸ್ತದ ಮೊದಲೆ ಸೇವಿಸುತ್ತಾರೆ. ನಾವು ಏನನ್ನು ಸೇವಿಸುತ್ತೇವೆಯೊ ನಮ್ಮ ಭಾವೊದ್ವೇಕಗಳು ಹಾಗೆ ಇರುತ್ತವೆ. ಇಂತಹ ಆಹಾರ ಸೇವನೆಯಿಂದ ಕೋಪ ಕ್ರೋಧದಂತಹ ಅಪಾಯಕಾರಿ ಗುಣಗಳು ಅಲ್ಲಿ ಬೆಳೆಯಬಹುದು. ಅಷ್ಟೇ ಅಲ್ಲಾ ಶುದ್ಧ ಸಸ್ಯಹಾರ ಸೇವನೆ ನಮ್ಮ ಶರೀರದ ಪಚನ ಕ್ರಿಯೆಗೆ ಬಹಳ ಅನುಕೂಲಕರವಾಗಿರುತ್ತದೆ. ಬಹಳ ಸುಲಭವಾಗಿ ಅವುಗಳ ಪೋಷಕಾಂಶಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತವೆ, ವೈದ್ಯರು ಕೂಡ ಅನೇಕ ರೋಗಿಗಳಿಗೆ ಸಾತ್ವಿಕ ಆಹಾರ ಸೇವನೆಯ ಸಲಹೆ ನೀಡುತ್ತಾರೆ,
ಡಾ|| ಬಿ.ಎಂ. ಕಾವ್ಯ ರವರು ಮಾತನಾಡಿ (ಸಸ್ಯಹಾರ ಸೇವನೆಯಿಂದ ಆಗುವಂತಹ ಅನುಕೂಲವನ್ನು ತಿಳಿಸಿದರು).
ಸಾತ್ವಿಕ ಸೇವನೆಯಿಂದ ಸೈಯಮ ಶಕ್ತಿ ಹೆಚ್ಚುತ್ತದೆ, ಅದೇ ಶಕ್ತಿಯಿಂದ ಕಣ್ಣಿನ ಹೊಳಪು ತೇಜಸ್ ಅನ್ನು ಕೊಡುತ್ತದೆ. ಈಗ ಜೈನರಷ್ಟೇ ಅಲ್ಲದೆ ಉತ್ತಮ ಸ್ವಸ್ತ್ಯದ ಅವಶ್ಯಕತೆ ಇರುವ ಪ್ರತಿಯೊಬ್ಬರು ನ್ಯೂಟ್ರಿಶನ್ಸ್ ಉನ್ನತ ಹುದ್ದೆಯಲ್ಲಿರುವವರು ಅನೇಕ ಬೃಹತ್ ಉದ್ಯಮಿಗಳು ಹೀಗೆ ಅನೇಕರು ಜೈನ ಸಿದ್ಧಾಂತವನ್ನು ಒಪ್ಪುತ್ತಾರೆ, ಅವರೊಂದಿಗೆ ಸ್ನೇಹವನ್ನು ಬಯಸುತ್ತಾರೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














