ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಐತಿಹಾಸಿಕ ಪ್ರಸಿದ್ದ ಆನೆಕೆರೆ ಬಸದಿ ಇದೀಗ ದೇಶವಿದೇಶದ ಗಮನ ಸೆಳೆದ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಇಂತಹ ಮನೋಹರ ಪ್ರಕೃತಿ ನಿರ್ಮಿತ ವಾತಾವರಣದಲ್ಲಿ ನಡೆದ ಕಾರ್ಕಳ ಆನೆಕೆರೆ ಚತುರ್ಮುಖ ಬಸದಿಯ ದಾನಸಂಪ್ರೋಕ್ಷಣ , ಪಂಚಕಲ್ಯಾಣ ಮಹೋತ್ಸವವನ್ನು ಸಂಕ್ಷೀಪ್ತವಾಗಿ ಇಲ್ಲಿ ಸಂಕರಿಸಲಾಗಿದೆ. ಯುಗಳ ಮುನಿಮಹಾರಾಜರುಗಳ ಪಾವನ ಸಾನಿಧ್ಯದಲ್ಲಿ ಸ್ವಸ್ತಿಶ್ರೀ ಲಲಿತಾಕೀರ್ತಿ ಭಟ್ಠಾರಕರುಗಳವರ ಆಶೀರ್ವಾದ , ಪೂಜ್ಯ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಇನ್ನೂ ಹಲವಾರು ಗಣ್ಯರುಗಳ ಸಹಯೋಗದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಆ ಸುಂದರ ದೃಶ್ಯಾವಳಿಗಳು ನಿಮಗಾಗಿ.














