ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಪರಮಪೂಜ್ಯ ಮುನಿಶ್ರೇಷ್ಠ ಚರಣಗಳಿಗೆ ವಂದಿಸುತ್ತಾ ಪೂಜ್ಯ ಕಾವಂದರ ಅಡಿದಾವರಗಳಿಗೆ ವಂದಿಸುತ್ತಾ ಮಾತೃಶ್ರೀ ಅಮ್ಮನವರ ಆಶೀರ್ವಾದವನ್ನು ಬೇಡುತ್ತಾ ಎಲ್ಲ ದೈವ ದೇವರುಗಳ ಆಶೀರ್ವಾದವನ್ನು ಈ ಸಂದರ್ಭಲದಲ್ಲಿ ಸ್ಮರಿಸುತ್ತಾ ಭಾರತೀಯ ಜೈನ್ ಮಿಲನ್ ವಲಯ 8 ಇವರ ಜಿನಭಜನಾ ಸ್ಪರ್ಧೆ ಸೀಸನ್ 7 ಇದರ ಪ್ರಯುಕ್ತ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ವಿಶಿಷ್ಟ ಹಾಗೂ ವಿನೂತನ ಪರಿಕಲ್ಪನೆಯಲ್ಲಿ ಎಸ್ ಡಿ ಎಂ ಕಾಲೇಜು ಸಿಬ್ಬಂದಿಗಳು ನಿಮ್ಮ ಮುಂದೆ ಇಂದು ಸಾದರ ಪಡಿಸುವ ನಾಟಕ “ ದೃಶ್ಯ ಧ್ವನಿ ಕಾವ್ಯ” . ಮೂಡುಬಿದಿರೆಯ ಮಹಾಕವಿ ರತ್ನಾಕರ ವರ್ಣಿಯ ಮಹಾಕಾವ್ಯವಾದ ಭರತೇಶ ವೈಭವದ ರಾಜೇಂದ್ರ ಗುಣವಾಕ್ಯ ಸಂದಿಯ ಆಯ್ದ ಪದ್ಯಗಳನ್ನು ಬಳಸಿಕೊಂಡು ಮಾತೃಶ್ರೀ ಹೇಮಾವತಿ ಅಮ್ಮನವರೇ ರಚಿಸಿ ಮಾರ್ಗದರ್ಶನ ಮಾಡಿರುವ ಈ ದೃಶ್ಯ ಧ್ವನಿ ನಾಟಕವು ರತ್ನಾಕರ ವರ್ಣಿಯ ಭರತೇಶ ವೈಭವ ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಹೆಸರೇ ಹೇಳುವಂತೆ ಇದು ವೈಭವವೇ ಹೊರತು ವೈರತ್ವವಲ್ಲ . ಇಲ್ಲಿ ಜೈನ ಧರ್ಮದ ಅಹಿಂಸೆ ಎಂಬ ಮೂಲ ಮಂತ್ರವನ್ನು ಜಗತ್ತಿಗೆ ಸಾರಿದ ಒಂದು ಮಹಾನ್ ಕೃತಿಯನ್ನು ರಂಗಕ್ಕೆ ತಂದು ನಾಟಕವನ್ನಾಗಿ ಪರಿವರ್ತನೆ ಮಾಡಿ ಸರಳ ಸುಂದರವಾಗಿ ಎಲ್ಲರಿಗೂ ಅರ್ಥೈಸಿಕೊಳ್ಳಲು ಸಹಾಯವಾಗುವಂತೆ ಮಾತೃಶ್ರೀ ಅಮ್ಮನವರ ರಂಗ ಕಲ್ಪನೆಗಳು ಪೂರಕವಾಗಿವೆ. ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ಈಗಾಗಲೇ ಹಲವಾರು ಕೃತಿಗಳು, ಕಾವ್ಯಗಳು, ಹಾಡುಗಳು, ಕಥೆಗಳು ನಾಟಕಗಳು ಭಿನ್ನ ವಿಭಿನ್ನ ಶೈಲಿಯ ದೃಶ್ಯ ರೂಪಕಗಳು ನೃತ್ಯ ರೂಪಕಗಳು ರಂಗದಲ್ಲಿ ಪ್ರದರ್ಶನ ಕಂಡು ನೋಡುಗರ ಮೆಚ್ಚುಗೆಗೆ ಪಾತ್ರವಾಗಿ ಎಲ್ಲರ ಮನಗಳನ್ನು ತಣಿಸಿವೆ. ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ಈಗಾಗಲೇ ರಂಗ ಶಿವ ಎಂಬ ಕಲಾ ಬಳಗವು ಧರ್ಮಸ್ಥಳದಲ್ಲಿ ನಿರಂತರ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಲವಾರು ನಾಟಕಗಳನ್ನು ಪ್ರದರ್ಶನ ನೀಡಿ ಜನ ಮನ್ನಣೆಯನ್ನು ಪಡೆದಿದೆ.
ಇಂದು ಈಗ ನಿಮ್ಮ ಮುಂದೆ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಅಭಿನಯಿಸುವ ನಾಟಕ “ ದೃಶ್ಯ ಧ್ವನಿ ಕಾವ್ಯ”.
ರಚನೆ: ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ನಿರ್ದೇಶನ: ಸುನೀಲ್ ಶೆಟ್ಟಿ , ಕಲ್ಕೊಪ್ಪ ಧರ್ಮಸ್ಥಳ














