ಜಿನಭಜನ ಸ್ಪರ್ದೆಯಲ್ಲಿ ಅನಿರುಧ್ ಜಾತ್ಕರ್/ ಜ್ವಾಲಾಮಲನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಚಲನಚಿತ್ರ ರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಗಾಯಕರಾಗಿರುವಂತಹ ಅನಿರುಧ್ ರವರು ಕಾರ್ಯಕ್ರಮದಲ್ಲಿ ಮಾತನಾಡಿ ಜಿನಭಜನಾ ಕಾರ್ಯಕ್ರಮದ ವ್ಯವಸ್ಥೆ ತುಂಬಾ ಚೆನ್ನಾಗಿ ಮಾಡಿದ್ದಾರೆ. ಭಜನೆಯು ಸಂಗೀತದ ಒಂದು ಪ್ರಕಾರ ಮತ್ತು ಪದ್ದತಿಯಾಗಿದೆ. ಭಜನೆಯ ರೂಪದಲ್ಲಿ ಭಗವಂತನನ್ನು ನೆನೆದು ಹಾಡುವುದು ತುಂಬಾ ದೊಡ್ಡ ವಿಷಯವಾಗಿದೆ. ಈ ಪರಿಕಲ್ಪನೆಯನ್ನು ಮಾಡಿ  ಈ ಕಾರ್ಯಕ್ರಮವನ್ನು ರೂಪಿಸಿರುವ ಕಾರ್ಯಕ್ರಮದ ಪ್ರತಿಯೊಬ್ಬ ರೂವಾರಿಗಳಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ ಎಂದರು . ಇದು ಕಾರ್ಯಕ್ರಮ ಬರೀ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಬೇರೆ ರಾಜ್ಯಗಳಲ್ಲೂ ಸಹ ಈ ಕಾರ್ಯಕ್ರಮಗಳನ್ನು ಆ ರಾಜ್ಯಗಳ ಭಾಷೆಗಳಲ್ಲಿ ನಡೆಸಿಕೊಂಡು ಬರಬೇಕೆಂದು ಈ ಮೂಲಕ ತಮಗೆ ಒಂದು ಚಿಕ್ಕದಾದ ಅನಿಸಿಕೆಯನ್ನು ಹಂಚಿಕೊಂಡರು.

ನಂತರ ತಮ್ಮ ಗಾಯನದ ಮೂಲಕ ಎಲ್ಲರನ್ನು ರಂಜಿಸಿದರು. ಅವರನ್ನು ಶಾಲು ಹೊದಿಸಿ ಗೌರವದಿಂದ ಸನ್ಮಾನಿಸಲಾಯಿತು.