ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಭಾರತೀಯ ಜೈನ್ ಮಿಲನ್ ವಲಯ – 8 ರ ಅತ್ಯಂತ ಯಶಸ್ವಿ ಕಾರ್ಯಕ್ರಮವಾದ ಜಿನಭಜನಾ ಸ್ಪರ್ಧೆ ಈ ಬಾರಿಯ ಸೀಸನ್ 7 ಪ್ರತಿ ವಿಭಾಗದಲ್ಲಿ ಸಫಲವಾಗಿ ಪೂರ್ಣಗೊಂಡು ಇದೀಗ ಇನ್ನೇನು ಕೆಲವೇ ದಿನಗಳಲ್ಲಿ ಸೀಸನ್ 7 ಸೆಮಿಫೈನಲ್ ಹಾಗೂ ಫಿನಾಲೆ ಕಾರ್ಯಕ್ರಮ ವೈಭವವಾಗಿ ನೆರವೇರಲಿದೆ. ದಿನಾಂಕ 03/02/2024 ನೇ ಶನಿವಾರದಂದು ಸೆಮಿಫೈನಲ್ಸ್ ಹಾಗೂ 04/02/2024 ನೇ ಭಾನುವಾರದಂದು ಫೈನಲ್ಸ್ ಸ್ಪರ್ಧೆ ನಡೆಯಲಿದ್ದು ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರ ಕಾರ್ಕಳದಲ್ಲಿ ನಡೆಯಲಿದ್ದು ಯುಗಳ ಮುನಿಗಳಾದ 108 ಶ್ರೀ ಅಮೋಘಕೀರ್ತಿ ಮಹಾರಾಜರು ಮತ್ತು 108 ಅಮರಕೀರ್ತಿ ಮಹಾರಾಜರು , ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಜೈನಮಠ, ದಾನಶಾಲಾ ಕಾರ್ಕಳ ಇವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಾಡಿನ ಎಲ್ಲ ಶ್ರೀ ಜೈನಮಠದ ಪೂಜ್ಯ ಭಟ್ಟಾರಕ ಸ್ವಾಮೀಜಿ ಗಳವರ ಪಾವನ ಸಾನಿಧ್ಯ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜಶ್ರೀ ಡಾ|| ಡಿ . ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಭಾರತೀಯ ಜೈನ್ ಮಿಲನ್ ನ ಪರಮಸಂರಕ್ಷಕರಾದ ಮಾತೃಶ್ರೀ ಡಾ|| ಹೇಮಾವತಿ ಹೆಗ್ಗಡೆ ಯವರು ಹಾಗೂ ಕುಟುಂಬ ವರ್ಗದವರ ಮಾರ್ಗದರ್ಶನದೊಂದಿಗೆ , ಭಾರತೀಯ ಜೈನ್ ಮಿಲನ್ ವಲಯ -8 ರ ಆಶ್ರಯದಲ್ಲಿ ಮಂಗಳೂರು ವಿಭಾಗದ ಕಾರ್ಕಳ ಜೈನ್ ಮಿಲನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜರುಗಲಿದೆ.
ದಿನಾಂಕ 03/02/2024 ನೇ ಶನಿವಾರದಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ಭರತೇಶ ವೈಭವ ಆಧಾರಿತ ದೇವ ಗುರು ಪೂಜೆಯೊಂದಿಗೆ ಉದ್ಘಾಟನಾ ಸಮಾರಂಭ ಬೆಳಗ್ಗೆ 10.30 ಕ್ಕೆ ದೀಪ ಪ್ರಜ್ವಲನೆ ಮತ್ತು ಶುಭಾಶೀರ್ವಾದ ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ನೆರವೇರಲಿದೆ ಹಾಗೂ ಗೌರವ ಉಪಸ್ಥಿತಿಯಲ್ಲಿ ಧರ್ಮಸ್ಥಳದ ಸುರೇಂದ್ರಕುಮಾರ್ ಉಪಸ್ತಿತಲಿರಲಿದ್ದಾರೆ. ಅಂದು ಸಂಜೆ 7. ಗಂಟೆಗೆ ಸರಿಯಾಗಿ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದಲ್ಲಿ ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ರಚನೆ, ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಪ್ರಸ್ತುತ ಪಡಿಸುವ ಮಹಾಕವಿ ರತ್ನಾಕರವರ್ಣಿ ಯವರ ಭರತೇಶ ವೈಭವ ಕೃತಿಯ ರಾಜೇಂದ್ರ ಗುಣವಾಕ್ಯ ಸಂಧಿಯಿಂದ ಆಯ್ದಭಾಗಗಳು “ದೃಶ್ಯ ಧ್ವನಿ ಕಾವ್ಯ “ ವೈಭವವೇ ಹೊರತು ವೈರತ್ವವಲ್ಲ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ದಿನಾಂಕ 04/02/2024 ನೇ ಭಾನುವಾರದ ಬೆಳಗ್ಗೆ 9.30 ಕ್ಕೆ ಆನೆಕೆರೆಬಸದಿಯಿಂದ ಸಭಾಭವನದವರೆಗೆ ಮೆರವಣಿಗೆ ಮತ್ತು ಉದ್ಘಾಟನೆ ನಡೆಯಲಿದ್ದು ಉದ್ಘಾಟಕರಾಗಿ ಡಾ|| ಎಂ.ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಹಕಾರ ಬ್ಯಾಂಕ್ ಮಂಗಳೂರು ಹಾಗೂ ಶ್ರೀ ಎಂ.ಕೆ ವಿಜಯ್ ಕುಮಾರ್ ಖ್ಯಾತ ವಕೀಲರು ಕಾರ್ಕಳ ಇವರಿಂದ ನಡೆಯಲಿದ್ದು ಗೌರವ ಉಪಸ್ಥಿತಿಯಲ್ಲಿ ಡಾ|| ಡಿ. ಸುರೇಂದ್ರಕುಮಾರ್ ಹಾಗೂ ಶ್ರೀಮತ ಅನಿತಾ ಸುರೇಂದ್ರ ಕುಮಾರ್ ರವರು ನಡೆಸಿಕೊಡಲಿದ್ದಾರೆ. ನಂತರ ಫೈನಲ್ಸ್ ಸ್ಪರ್ಧೆಗಳ ಆರಂಭ.
ದಿನಾಂಕ 04/02/2024 ನೇ ಭಾನುವಾರದಂದು ಸಂಜೆ 4.30 ಕ್ಕೆ ಯುಗಳ ಮುನಿಮಹಾರಾಜರಾದ ಪಾವನ ಸಾನಿಧ್ಯ ಹಾಗೂ ಶ್ರೀ ಗಳವರ ಆಶೀರ್ವಾದ ಹಾಗೂ ಸಾನಿಧ್ಯ ಇದರ ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟರಾದಂತಹ ಶ್ರೀ ಅನಿರುದ್ಧ ಜತಕರ್ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಯಾದ ಶ್ರೀಮತಿ ಅನನ್ಯ ಭಟ್ ರವರು ಪಾಲ್ಗೊಳ್ಳಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಮಾಜಿ ಸಚಿವರಾದ ಶ್ರೀ ಅಭಯ್ ಚಂದ್ರ ಜೈನ್ , ಕೆ. ಪ್ರಸನ್ನಕುಮಾರ್ ಉಡುಪಿ, ಭಾರತೀಯ ಜೈನ್ ಮಿಲನ್ ನ ಅಧ್ಯಕ್ಷರಾದ ಕೆ. ಯುವರಾಜ್ ಭಂಡಾರಿಯವರು, ಭಾರತೀಯ ಜೈನ್ ಮಿಲನ್ ನ ವಲಯ 8 ರ ಗೌರವಾಧ್ಯಕ್ಷರಾದ ಶೀಲಾ ಅನಂತರಾಜುರವರು , ವೀರ್ ಪುಷ್ಪರಾಜ್ ಜೈನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ರತ್ನರಾಜ್ ಎಂ. ರವರುಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ . ಕಾರ್ಯಕ್ರಮ ಜ್ವಾಲಾಮಾಲಾ ನ್ಯೂಸ್ ಚಾನಲ್ ನಲ್ಲಿ ನೇರಪ್ರಸಾರವಾಗಲಿದ್ದು ಹೆಚ್ಚಿನಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.














