ಸೂಡಿ ಬಸದಿ / SUDI BASADI PROMO / jwalamalanews / 2024

 

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಭಗವಾನ್ 1008 ಶ್ರೀ ಆದಿನಾಥ ಸ್ವಾಮಿ ಬಸದಿ, ಸೂಡಿ ಶಿರ್ಲಾಲು

ಪಂಚಕಲ್ಯಾಣಪೂರ್ವಕ ನೂತನ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮಾನಸ್ಥಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನೆ .

ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಪ್ರಕೃತಿ ಸೌಂದರ್ಯದಿಂದ ಕೂಡಿದ  ಮಲೆನಾಡ ಮಡಿಲಿನ ಪುಟ್ಟ ಹಳ್ಳಿ ಸೂಡಿ ಶಿರ್ಲಾಲು. ಇಲ್ಲಿ ನಡೆಯುವ ಪಂಚಕಲ್ಯಾಣಪೂರ್ವಕ ನೂತನ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮಾನಸ್ಥಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನೆ .

ಪರಮ ಪೂಜ್ಯ 108  ಅಮರಕೀರ್ತಿ ಮುನಿಮಹಾರಾಜರು ಮತ್ತು  108 ಅಮೋಘ ಕೀರ್ತಿ ಮುನಿಮಹಾರಾಜರು  ಮತ್ತು ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ  ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಜೈನಮಠ, ದಾನಶಾಲಾ ಕಾರ್ಕಳ ಇವರ  ಪಾವನ ಸಾನಿಧ್ಯ  ಹಾಗೂ ಮಾರ್ಗದರ್ಶನದಲ್ಲಿ ನಾಡಿನ  ಎಲ್ಲ ಶ್ರೀ ಜೈನಮಠದ ಪೂಜ್ಯ ಭಟ್ಟಾರಕ ಸ್ವಾಮೀಜಿ ಗಳವರ ಪಾವನ ಸಾನಿಧ್ಯ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜಶ್ರೀ ಡಾ|| ಡಿ . ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಆಶೀರ್ವಾದಗಳೊಂದಿಗೆ , ಸಮಿತಿಯ ಗೌರವಾಧ್ಯಕ್ಷರಾದ ಸಹಕಾರ ರತ್ನ ಡಾ|| ಎಂ. ಎನ್ ರಾಜೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಮತ್ತು ಊರ ಪರ ಊರ ಸಹೃದಯಿ ಸದರ್ಮ ಬಂಧುಗಳ ಸಹಕಾರದೊಂದಿಗೆ  ದಿನಾಂಕ: 20/01/2024 ನೇ ಭಾನುವಾರ ದಿಂದ 01/02/2024 ನೇ ಗುರುವಾರದವರೆಗೆ ವಿಧಿಪೂರ್ವಕವಾಗಿ ಸಂಪನ್ನಗೊಳ್ಳಲಿರುವುದು. ಕಾರ್ಯಕ್ರಮದಲ್ಲಿ ನಡೆಯಲಿರುವ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಧಾರ್ಮಿಕ ವಿಧಿವಿಧಾನಗಳು , ಧಾರ್ಮಿಕಸಭಾ ಕಾರ್ಯಕ್ರಮಗಳು ವೃಭವೋಪೇತವಾಗಿ ನಡೆಯಲಿರುವುದಲ್ಲದೇ  ನೂತನ ಸಮುದಾಯ ಭವನ  ಸಮುಚ್ಚಯದ ಮತ್ತು ಪುರೋಹಿತರ ವಾತ್ಸವ್ಯದ  ನೂತನ ಗೃಹದ ಸಾಂಕೇತಿಕ ಉದ್ಘಾಟನೆ ಕೂಡ ನಡೆಯಲಿದೆ. ಈ ಪ್ರಯುಕ್ತ ಸಧರ್ಮ ಬಂಧುಗಳಾದ ತಾವೆಲ್ಲರೂ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಪುಣ್ಯಭಾಗಿಗಳಾಗಬೇಕಾಗಿ ಅಪೇಕ್ಷಿಸುತ್ತೇವೆ.

 ಈ ಕಾರ್ಯಕ್ರಮವು ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ ‘ನೇರಪ್ರಸಾರವಾಗಲಿದ್ದು ಹೆಚ್ಚಿನಸಂಖ್ಯೆಯಲ್ಲಿ ವೀಕ್ಷಿಸಿ ಕಾರ್ಯಕ್ರಮವನ್ನು ಯಸಸ್ವಿಗೊಳಿಸಿ.