ಪ್ರೋಮೋ ಧರ್ಮಯಾತ್ರೆ / ಸಂಚಿಕೆ-6 / ಜ್ವಾಲಾಮಾಲಾ ನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಪ್ರೀತಿಯ ವೀಕ್ಷಕರೇ ನಿಮ್ಮ ನೆಚ್ಚಿನ ಚಂದನ ವಾಹಿನಿಯಲ್ಲಿ ಜ್ವಾಲಮಾಲ ಧರ್ಮಯಾತ್ರೆ ಕಾರ್ಯಕ್ರಮ ಈ  ಭಾನುವಾರ ದಿನಾಂಕ 07/01/2024 ರಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ಪ್ರಸಾರವಾಗಲಿದೆ  ಕ್ಷೇತ್ರ ಪರಿಚಯದಲ್ಲಿ  ಉಡುಪಿ ತಾಲ್ಲೂಕಿನ ಹೊಸ ಬೆಟ್ಟು ಗ್ರಾಮದ ಪಾದೂರು ಕ್ಷೇತ್ರ .

ಧಾರ್ಮಿಕ ವಿಚಾರಧಾರೆಯಲ್ಲಿ ರಾಣಿ ಅಬ್ಬಕ್ಕದೇವಿ ಅವರ ಸ್ಮರಣೆಯಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸುವುದರ ಉದ್ದೇಶ ಅದರ ಮಹತ್ವವನ್ನು ತಿಳಿಸಲು  ಅಬ್ಬಕ್ಕದೇವಿಯ ಜೀವನ ಗಾಥೆಯನ್ನು ಸಂಕ್ಷೀಪ್ತವಾಗಿ ಹೇಳಹೊರಟಿದ್ದೇವೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಣಿ ಅಬ್ಬಕ್ಕದೇವಿ ಅಂಚೆ ಚೀಟಿ ಬಿಡುಗಡೆ  ಕಾರ್ಯಕ್ರಮ ಹಾಗೂ ಬಾಹುಬಲಿ ಆರತಿ ಹಾಡಿಗೆ ಪಲ್ಲವಿ ಜೈನ್ ಹಾಗೂ ದಿಯಾ ಜೈನ್ ರವರ ಮನೋಹರ ನೃತ್ಯ.

ಸಮುದಾಯದ ಹೆಮ್ಮೆಯ ಪ್ರತೀಕ . ಪ್ರತಿಷ್ಠಿತ ಚಂದನ ವಾಹಿನಿಯ ಪ್ರಸ್ತುತಿ ಪ್ರತಿವಾರವೂ ಹೆಚ್ಚಿನಸಂಖ್ಯೆಯಲ್ಲಿ ವೀಕ್ಷಿಸಿ , ಕಾರ್ಯಕ್ರಮದ ಘನತೆ ಹೆಚ್ಚಿಸಿ.