ಜೈನ್ ಜಾತಿಯಲ್ಲ ಜೀವನ ಶೈಲಿ / ಭಾಗ-2 / jwalamalanews / 2024

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಮಾಲ ಧರ್ಮಯಾತ್ರೆ

ಜೈನ ಧರ್ಮ ಅನ್ನುವುದು ಒಂದು ಧರ್ಮವಾಗಿರದೆ ಒಂದು ತರ್ಕ ಶಾಸ್ತ್ರವಾಗಿದೆ. ಬದುಕಲು ಬೇಕಾದ ದಾರಿಯಾಗಿದೆ, ಒಬ್ಬ ವ್ಯಕ್ತಿ ಇದನ್ನು ಆಳವಾಗಿ ಅಧ್ಯಯನ ನಡೆಸಿದರೆ ಮಂದಿರ ನಿರ್ಮಾಣಕ್ಕಿಂತ ಮುಖ್ಯವಾಗಿ ಒಬ್ಬ ವ್ಯಕ್ತಿ ಹಿಂಸೆ ಮಾರ್ಗವನ್ನು ತೊರೆದು ಅಹಿಂಸಾತ್ಮಕನಾಗಿ ಪರಿವರ್ತನೆಯಾದರೆ ಅದಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಅತಿ ಪುರಾತನವಾದ ಜೈನ ಧರ್ಮದ ಅನುಯಾಯಿಗಳು ಕಾಲಚಕ್ರದ ಸುಳಿಯಲ್ಲಿ ಸಿಕ್ಕಿ ಕಡಿಮೆಯಾದರು ಹಾದಿಯನ್ನು ಅನುಸರಿಸಿದವರು ವಿಶ್ವದಲ್ಲಿ ಬಹಳ ಜನ ಒಪ್ಪಿದವರು ಅಪ್ಪಿದವರು ಅನೇಕ ಜನ ಈಗಲೂ ಭಾರತದಲ್ಲಿ ಐವತ್ತು ಲಕ್ಷಕ್ಕು ಹೆಚ್ಚು ಜನ ನೀವೇ ನಿಮ್ಮ ಭವಿಷ್ಯದ ಬರಹಗಾರರು ನಿಮ್ಮ ಇತಿಹಾಸದ ರಚನೆಕಾರರು ನೀವು ಮಾಡಿದ ಪಾಪ ಪುಣ್ಯ ಲಾಭ ನಷ್ಟಕ್ಕೆ ನೀವೇ ಜವಬ್ಧಾರರು ಎನ್ನುವ ಕರ್ಮ ಸಿದ್ಧಾಂತವನ್ನು ಶಮಣ ಪರಂಪರೆಯನ್ನು ಅರ್ಥ್ಯಸಿಕೊಂಡಿದ್ದಾರೆ. ಆದ್ದರಿಂದಲ್ಲೆ ಜೈನ ಸಮುದಾಯ ಸಾಕ್ಷರತೆಯಲ್ಲಿ ಅತ್ಯಂತ ಮುಂದೆ ಇದ್ದು ಶೇಕಡ 94ರಷ್ಟಿದೆ. ಭಾರತದಲ್ಲಿ ಗೃಹ ಉಧ್ಯೊಗದಲ್ಲಿ ಕೂಡ ಇವರ ಸ್ಥಾನ ಉನ್ನತ ಮಟ್ಟದಾಗಿದೆ, ದೇಶದ ಆರ್ಥಿಕ ಪ್ರಗತಿ ವಿಚಾರದಲ್ಲಿ ಅವರು ಬಹಳ  ಮುಂದೆ ಇದ್ದಾರೆ,  ಜೈನ ಜೀವನ ಶೈಲಿ ಜಗತ್ತಿನ ಎಲ್ಲಾ ಜೀವನ ಶೈಲಿಗಿಂತ ಸ್ವಸ್ತ್ಯವಾದುದು ಎಂದು ವಿಶ್ವಮಾನ್ಯ ಪಡೆದಿದೆ. ಜೈನ ತತ್ವವಾದ ಅಹಿಂಸಾ ಮಾರ್ಗ ಗಾಂಧಿ, ಲೂಥರ್ ಕಿಂಗ್ ಹೀಗೆ ಅನೇಕ ನೇತಾರರನ್ನು ಪ್ರೇರೆಪಿಸಿದೆ.

ನಾಡೋಜ ಡಾ|| ಮನು ಬಳಿಗಾರ್ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ರವರು ಮಾತನಾಡಿ (ತನ್ನ ಮೂಲ ಉದ್ದೇಶವನ್ನಾಗಿ ಅಹಿಂಸೆಯನ್ನು ಇಟ್ಟು ಕೊಂಡು ಜೈನ ಧರ್ಮ ಜಾರಿಗೆ ಬಂತು. ಇವತ್ತು ವಿಶ್ವಾದ್ಯಂತ ತತ್ವವನ್ನು ಪಾಲಿಸ ಬೇಕಾಗಿದೆ, ಅಹಿಂಸಾ ತತ್ವ ಅನುವುದ್ದನ್ನ ನಾವು ತಿಳಿದುಕೂಳ್ಳ ಬೇಕು ಜಗತ್ತಿನ ಅನೇಕ ಮಹಾನ್ ನಾಯಕರಿಗೆ ಸ್ಪೂರ್ತಿ ಮಹಾತ್ಮಗಾಂಧಿಜೀಯವರು, ಮಹಾತ್ಮಗಾಂಧಿಜೀಯವರಿಗೆ ಜೈನ ತತ್ವ ಸಿದ್ಧಾಂತ ಆಹಾರ ಪದ್ದತಿ, ವಿಚಾರ ಪದ್ಧತಿ ಇವೆಲ್ಲ ಬಹಳಷ್ಟು ಪ್ರಭಾವ ಮಾಡಿದವು ಎಂದು ಮಹಾತ್ಮಗಾಂಧಿಜೀಯವರು ಹೇಳಿದರು. ಅವರಿಗೆ ಇದಕ್ಕೆ ಕಾರಣವಾದವರು ರಾಯಚಂದ್ ಎನ್ನುವವರು, ಅವರ ಮೂಲಕ ಗಾಂಧಿಜೀಯವರಿಗೆ ಜೈನ ತತ್ವ ಸಿದ್ಧಾಂತದ ಒಂದು ಪ್ರಭಾವವಾಯಿತು. ಅಂದರೆ ಸತ್ವಿಕಾ ಆಹಾರವಿರ ಬೇಕು, ಸಸ್ಯಾಆಹಾರ, ಹಿಂಸೆ ಸಲ್ಲದು ಕೇವಲ ಪ್ರಾಣಿಗಳಿಗೆ ಅಲ್ಲ ಮನುಷ್ಯರ ಮನಸ್ಸನ್ನು ನೋಯಿಸಯವುದು ಕೂಡ ಹಿಂಸೆ ಅನ್ನುವುದು ಇದರ ಹಿಂದೆ ಇರುವಂತಹ ಒಂದು  ಒಳ ಅರ್ಥ).

ಹಾಗಿದ್ದರೆ ಜೈನರು ಎಂದರೆ, ಯಾರು ಜೈನ ಧರ್ಮ ಎನ್ನುವ ವಿಶ್ವ ಧರ್ಮ ಏನ್ನು ಹೇಳುತ್ತದೆ, ಇವರ ಆಚರಣೆ ಹೇಗೆ, ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಹೋದಾಗ ಬಹಳ ಸಾವಿರಾರು ವರ್ಷಗಳ ಹಿಂದಿನಿಂದಲ್ಲು ಅನೇಕ ವಿಚಾರಕರು, ಪ್ರಚಾರಕರು, ಸುಧಾರಕರು ಧರ್ಮದ ಮಹತ್ವವನ್ನು ಸಾರಿ ಹೋಗಿದ್ದಾರೆ. ಅವರ್ಯಾರು ದೇವತೆಗಳಾಗಿರಲ್ಲಿಲ್ಲಾ, ಆದರೆ ಇವರೆಲ್ಲರು ಸೈಯಮ, ತಪ, ಆಧ್ಯಾತ್ಮಚರ್ಯಗಳಿಂದ ತಮ್ಮ ದೂರ ದೃಷ್ಟಿಯಿಂದ ಜೀವನ್ಮರಣಗಳಿಂದ ಮುಕ್ತಿಯನ್ನು ಪಡೆದವರಾಗಿದ್ದಾರೆ. ಇವರನ್ನು ಅರಿಯಂತರು ಅಂತರಿಕ ಶತ್ರುಗಳನ್ನು ನಾಶ ಮಾಡಿದವರು, ವಿತ್ತರಾಗಿಗಳು ಎಂದೇಲ್ಲಾ ಹೇಳಲಾಗುತ್ತದೆ. ಇವರಿಗೆ ಬೇರೆಯವರೋಡನೆ ಮೋಹವಾಗಲ್ಲಿ ಅಥವಾ ದ್ವೇಷವಾಗಲ್ಲಿ ಇರುವುದಿಲ್ಲ ಹಾಗೇ ತಾವು ಗಳಿಸಿದ ಜ್ಞಾನವನ್ನು ನಮ್ಮೆಲ್ಲರಿಗೂ ಹಂಚಿದವರಾಗಿದ್ದಾರೆ.

ಜೈನ ಧರ್ಮದಲ್ಲಿ 24 ತೀರ್ಥಂಕರರು ಆಗಿ ಹೋಗಿದ್ದಾರೆ. ಅವರಲ್ಲಿ 24ನೇಯವರಾದ ಮಹಾವೀರರನ್ನು ತಿಳಿಯುವುದಾದರೆ ಸುಮಾರು 2,600 ವರ್ಷಗಳ ಹಿಂದೆ ಬಂದ ಅವರ ವ್ಯಕ್ತಿತ್ವ ಉನ್ನತವಾಗಿತ್ತು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸರ್ವ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಅವರು ತಮ್ಮಿಂದ ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಜೀವಿಸಿದವರು, ತಮಗೆ ಬಂದ ಅನೇಕ ನಿಂದನೆಗಳನ್ನು ಸಹಿಸಿ ಕ್ಷಮಿಸಿದವರು. ಕಠಿಣ ತಪಸ್ಸಿನಿಂದ ಕೇವಲ ಜ್ಞಾನವನ್ನು ಪ್ರಾಪ್ತಿಮಾಡಿಕೊಂಡಿರು, ಇವರ ಉಪದೇಶಗಳಿಂದ ಸಮಾಜದಲ್ಲಿ ಅನೇಕ ಪರಿವರ್ತನೆಗಳಾದವು ಅದರ ಪರಿಣಾಮವಾಗಿ ಇಂದಿಗೂ ಜನರಲ್ಲಿ ಕರುಣೆ ಸಂದೇಶಗಳು ಅಹಿಂಸೆಯ ಗುಣಗಳು ಅನೇಕರ ಜೀವನವನ್ನು ಸುದಾರಣೆಗೆ ತಂದಿದೆ. ಅವರು ಉಪದೇಶಿಸಿದ ಪ್ರಕಾರ ಯಾವ ಜೀವಿಯನ್ನಾದರು ಕೊಲ್ಲುವುದು ಹೇಗೆ ಸಾದ್ಯ, ನಿಮಗೆ ಪ್ರಾಣವನ್ನು ಕೊಡುವ ಆಧಿಕಾರವಿಲ್ಲವಾದಲ್ಲಿ ಪ್ರಾಣವನ್ನು ಹೇಗೆ ಕಿತ್ತುಕೊಳ್ಳುತ್ತಿರಿ, ನಿಮ್ಮ ಜೀವನದಲ್ಲಿ ನಿಮಗೆ ಆಗುವ ನೋವುಗಳನ್ನು ತಡೆಯುವುದ್ದಕ್ಕೆ ಹಾಗದ ಮೇಲೆ ಇನ್ನೊಂದು ಜೀವಕ್ಕೆ ನೋವು ಕೊಡಲು ಹೇಗೆ ತಯಾರಾಗುತ್ತಿರಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್