ಹಾಸನ ಪ್ರೋಮೋ/ ಜ್ವಾಲಾಮಾಲಾ ನ್ಯೂಸ್ / 2022

ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಮದಬಿನವವಾಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹಾಸನ ನಗರಕ್ಕೆ ಪುರಪ್ರವೇಶ ಕೈಗೊಳ್ಳಲಿದ್ದಾರೆ. ದಿನಾಂಕ 31-12-2023 ರಂದು ವಿಶೇಷವಾಗಿ ಬೈಕ್ ರ‍್ಯಾಲಿ ಹಾಗೂ ಬೃಹತ್ ಮೆರವಣಿಗೆ ಮೂಲಕ ಬೆಳ್ಳಿ ಅಂಬಾರಿಯೊಂದಿಗೆ ಪೂಜ್ಯ ಭಟ್ಟಾರಕ ಸ್ವಾಮೀಜಿಯವರನ್ನು ಸ್ವಾಗತಿಸಲಾಗುತ್ತಿದ್ದು, ಬೆಳಿಗ್ಗೆ 11:00 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಭಟ್ಟಾರಕರು ದಿವ್ಯ ಸಾನಿಧ್ಯ ವಯಿಸಲಿದ್ದಾರೆ. ಅಂದಿನ ಪಾವನ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರು, ಕ್ಷುಲಿಕ ಸುಪದ್ಮಶ್ರೀ ಮಾತಾಜಿರವರು ವಯಿಸಲಿದ್ದು ವಿಶೇಷ ಆಹ್ವಾನಿತರಾಗಿ ಹಾಸನ ವಿಧಾನಸಭಾ ಸದಸ್ಯರಾದ ಶ್ರೀ ಸ್ವರೂಪ್ ಪ್ರಕಾಶ್ ರವರು ಆಗಮಿಸಲಿದ್ದಾರೆ. ಹಾಗೂ ಶ್ರೀ ಹೆಚ್ ಬಿ ಶಾಂತೀಶ್ ಅಧ್ಯಕ್ಷತೆ ವಯಿಸಲ್ಲಿದ್ದಾರೆ. ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಹಾಗೂ ಈ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್