ಜೈನ ಜಾತಿಯಲ್ಲ ಜೀವನ ಶೈಲಿ / ಭಾಗ-1/ ಜ್ವಾಲಾಮಾಲನ್ಯೂಸ್ / 2023

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಮಾಲ ಧರ್ಮಯಾತ್ರೆ

ಬಂಧುಗಳೇ, ಮನುಷ್ಯ ಮೊದಲಿನಿಂದಲು ಸ್ವತಂತ್ರವಾಗಿ ಇರಲು ಬಯಸುತ್ತಾನೆ. ಸ್ವತಂತ್ರವನ್ನು ಹುಡುಕುತ್ತಾನೆ. ಚಿಂತೆ ನೋವು ಅಸಹಾಯಕಥೆ ದುಖಃ ಜೀವನ್ಮರಣ ಹೀಗೆ ಇದೇಲ್ಲದರಿಂದ ಮುಕ್ತಿ ಹೊಂದುವ ಬಯಕೆಯೇ ಹಲವಾರು ಧರ್ಮಗಳು ನಂಬಿಕೆಗಳು ಆಚರಣೆಗಳ ಹುಟ್ಟಿಗೆ ಕಾರಣವಾಗಿದೆ. ಉನ್ನತ ಜ್ಞಾನವನ್ನು ಪಡೆಯಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಒಂದು ತಮ್ಮ ಅನುಯಾಯಿಗಳಿಗೆ ಸ್ವತಂತ್ರ ಅಥವಾ ಮುಕ್ತಿ ಮಾರ್ಗದ ಸೂತ್ರಗಳನ್ನು ತಿಳಿಸುವುದು ಸೂಕ್ತ ಹಾದಿಯನ್ನು ಸೂಚಿಸುವುದು, ಪ್ರಸ್ತುತ ಸ್ಥಿತಿಗತಿಗಳಲ್ಲಿ ಇದರ ಅವಶ್ಯಕತೆ ಅತ್ಯಂತ ಅನಿವಾರ್ಯವಾಗಿದ್ದು ಇಂತಹ ಉತ್ತಮ ಹಾದಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಒಂದು ಉದಾಹರಣೆಯನ್ನು ಅಧ್ಯಾಯನ ಮಾಡುವುದಾದರೆ ಜೈನ ಜಾತಿಯೆಲ್ಲ ಜೀವನ ಶೈಲಿ.

ಖ್ಯಾತ ಚಲನಚಿತ್ರ ನಟರು ಶ್ರೀಧರ್ ರವರು ಮಾತನಾಡಿ (ನಮಸ್ಕಾರ, ನನಗೆ ವೈಯಕ್ತಿಕವಾಗಿ ಜೈನ ಧರ್ಮದ ಬಗ್ಗೆ ಬಹಳ ಗೌರವ ಪ್ರೀತಿ. ಹಲವು ವರ್ಷಗಳ ಹಿಂದೆ ಹಲವು ಕಾರಣಾಂತರಗಳಿಂದ ಜೈನ ಧರ್ಮದ ಬಗ್ಗೆ ವಿಶೇಷವಾದಂತಹ ಅಧ್ಯಾಯನವನ್ನ ಮಾಡುವಂತಹ ಭಾಗ್ಯ ನನಗೆ ಸಿಕ್ಕಿತು. ಆ ಸಮಯದಲ್ಲಿ ಹಗಲು ರಾತ್ರಿ ಎಷ್ಟೊ ತಿಂಗಳು ನಾನು ಜೈನ ಧರ್ಮದ ಬಗ್ಗೆ ಓದುವುದಕ್ಕೆ ಅಧ್ಯಾಯನ ಮಾಡಿದೆ).

ನಾಡೋಜ ಡಾ|| ಮನು ಬಳಿಗಾರ್ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ರವರು ಮಾತನಾಡಿ (ಜೈನ ಸಿದ್ಧಾಂತ ತತ್ವಗಳು, ಆಹಾರ ಪದ್ಧತಿ ಜೀವನ ಶೈಲಿ ಇತ್ಯಾದಿಗಳ ಮೇಲೆ ಒಂದು ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದು ಸ್ಥುತ್ಯಾರವಾಗಿರುವಂತಹದ್ದು).

ನಿಟ್ಟಿನಲ್ಲಿ ಜೈನ ಧರ್ಮದ ಕರುಣೆ ಸಹನೆ ಅಹಿಂಸೆಯಿಂದ ಕೂಡಿದ ಹಾದಿ ದಿನನಿತ್ಯದ ಜಂಜಾಟದೊಂದಿಗೆ ಸಮಸ್ಯೆಗಳಿಗೆ ಸಮಾಧಾನವನ್ನು ನೀಡುತ್ತದೆ. ಜಿನ ಅಂದರೆ ಜನ್ಮಗಳನ್ನು ಇಂದ್ರಿಯಗಳನ್ನು ಗೆದ್ದವನ್ನಾಗಿಸುವ ಸುವರ್ಣ ಅವಕಾಶವನ್ನು ಕಲ್ಪಿಸುತ್ತದೆ. ಜೈನ ಧರ್ಮದ ತತ್ವಗಳಾದ ಅಹಿಂಸೆ, ಜೀವಿಸು ಜೀವಿಸಲು ಬಿಡು, ಇದಕ್ಕಾಗಿಯೇ ತಾನೆ ಇಡಿ ವಿಶ್ವದ ಯುದ್ದ.

ಖ್ಯಾತ ಚಲನಚಿತ್ರ ನಟರು ಶ್ರೀಧರ್ ರವರು ಮಾತು ಮುಂದುವರಿಸಿ (ಸತ್ವೇಶು ಮೈತ್ರಿ ಗುಣಿಶು ಪ್ರಮೋದಂ ಕ್ಲಿಷ್ಟೇಶು ಜೀವೇಶು ಕೃಪಾಪರಂತಂ ಮಾಧ್ಯಸ್ತವಾವಂ ವಿಪರಿತ ಭುದಂ ಸದ ಮಾಮಾತ್ಮ ವಿಧದಾತು ದೇವ. ಇದು ಜೈನ ಧರ್ಮದ ಒಂದು ಸಾಮಾನ್ಯ ಶ್ಲೋಕ, ಬಹುಶಃ ಇದು ಅತ್ಯಂತ ದೊಡ್ಡ ಶಕ್ತಿಯೂಳ್ಳ ಸತ್ವವುಳ್ಳ ಶ್ಲೋಕ ಕೂಡ. ಇದರ ಅರ್ಥ ಸತ್ವೇಶು ಮೈತ್ರಿ ಸಾತ್ವಿಕರು ಸತ್ವ ಇರುವಂತಹ ಕಡೆ ನಾನು ನನ್ನ ಪ್ರೀತಿಯನ್ನು ಅದರಕಡೆ ಕೊಡುವಂತೆ ಮಾಡು ಅಲ್ಲಿ ಮೈತ್ರಿಯನ್ನು ಮಾಡುವಂತೆ ಮಾಡು, ಯಾರು ಸ್ಥತ್ವಿಕರಾಗಿದ್ದಾರೊ ಯಾರು ಒಳ್ಳೆ ನಡತೆ ಇದೆಯೋ ಅವರ ಹತ್ತಿರ ನಾನು ಮೈತ್ರಿಯನ್ನು ಮಾಡುವಹಾಗೆ ಮಾಡಪ್ಪ ದೇವರೆ. ಗುಣಿಶು ಪ್ರಮೋದಂ, ಉತ್ತಮ ಗುಣವನ್ನು ನೋಡಿದ್ದಾಗ ನನ್ನ ಹೃದಯದಲ್ಲಿ ಒಂದು ಆನಂದವನ್ನು ಉಂಟ್ಟಾಗಲ್ಲಿ ಅದರಿಂದ ನನಗೆ ಸಂತೋಷವಾಗಲ್ಲಿ ಅದನ್ನು ನೋಡಿ ಆನಂದಪಟ್ಟು ಪ್ರಶಂಸಿಸುವಂತ್ತಾಗಲಿ ಅದರ ಬಗ್ಗೆ ಗೌರವ ಉಂಟಾಗುವ ರೀತಿಯಲ್ಲಿ ನನ್ನ ವ್ಯಕ್ತಿತ್ವ ಇರಲಿ. ಕ್ಲಿಷ್ಟೇಶು ಜೀವೇಶು ಕೃಪಾಪರಂತಂ, ಯಾವ ಜೀವಿಗಳು ಕಷ್ಟದಲ್ಲಿ ಇದೆಯೋ ದುಃಖದಲ್ಲಿ ಇದೆಯೋ ಅದನ್ನು ಕಂಡ ತಕ್ಷಣ ನನ್ನ ಹೃದಯದಲ್ಲಿ ಒಂದು ಸ್ಪಂದನೆಯಾಗಲ್ಲಿ ನನ್ನ ಅಂತಕರಣದಲ್ಲಿ ಸ್ಪಂದನೆಯಿಂದ ಅದರ ಬಗ್ಗೆ ಕರುಣೆ ಉಂಟಾಗಲ್ಲಿ ನಾನು ಅದಕ್ಕೆ ಸಹಾಯ ಮಾಡುವ ಹಾಗೆ ಅದಕ್ಕೆ ಎನಾದರೂ ಒಳ್ಳೆಯದನ್ನು ಮಾಡುವುದರ ಬಗ್ಗೆ ಮನಸ್ಸು ನನ್ನಲ್ಲಿ ಬರಲಿ ಅನ್ನುವುದು. ಮಾಧ್ಯಸ್ತವಾವಂ ವಿಪರಿತ ಭುಧಂ, ಇಲ್ಲಿಯವರೆಗೂ ಒಳ್ಳೆಯವದ ಬಗ್ಗೆ ಹೇಳಿದೆವು, ಕೆಟ್ಟವರ ಬಗ್ಗೆ ದ್ವೇಷ ಅಲ್ಲ ಕೋಪ ಅಲ್ಲ ಮಾಧ್ಯಸ್ತವಾವಂ ಅಂದರೆ ನಾನು ಅವರನ್ನ ವಿಮರ್ಷೆ ಮಾಡುವುದಿಲ್ಲ ಅವರ ಬಗ್ಗೆ ನಾನು ಏನ್ನು ಅಂದಿಕೊಳ್ಳುವುದ್ದಿಲ್ಲಾ ಅದರೆ ಅವರಿಂದ ನಾನು ದೂರ ಇರುತ್ತೇನೆ. ಹೀಗೆ ಮನಷ್ಯನ ನಡವಳಿಕೆಗೆ ಸಂಬಂಧ ಪಟ್ಟಂತ ವಿಷಯದಲ್ಲಿ ಶ್ಲೋಕ ಇದೆ ಬಹುಷಃ ಒಂದು ಶ್ಲೋಕವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯನ ಜೀವನ ಅತ್ಯಂತ ಸುಖಮಯ, ವ್ಯಾವಹಾರಿಕವಾಗಲ್ಲಿ ಆಧ್ಯಾತ್ಮಿಕವಾಗಿ ಹಾಗಲ್ಲಿ ಮನುಷ್ಯನ ಒಂದು ಮಾರ್ಗ ಬಹಳ ಉನ್ನತಿಗೆ ಹೋಗುತ್ತದೆ ಎಂದು ನನಗೆ ಅನಿಸುತ್ತದೆ).

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್