ಚಾತುರ್ಮಾಸ್ ಪಿಚಿ ಪರಿವರ್ತನೆ / ಜ್ವಾಲಾಮಾಲಾ ನ್ಯೂಸ್ / 2023

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ಬಂಧುಗಳೇ, ಪರಮ ಪೂಜ್ಯ ಆಚಾರ್ಯ 108 ಶ್ರೀ ಚಂದ್ರಪ್ರಭ ಸಾಗರ ಮಹಾರಾಜರ ಶಿಷ್ಯರಾದ ಪರಮ ಪೂಜ್ಯ ಮುನಿಶ್ರೀ 108 ವೀರ ಸಾಗರ ಮುನಿ ಮಹಾರಾಜರ ಪಿಂಛಿ ಪರಿವರ್ತನಾ ಕಾರ್ಯಕ್ರಮವು 24-12-2023 ರಂದು ಮಧ್ಯಾಹ್ನ 3:00 ಗಂಟೆಗೆ ಕರ್ನಾಟಕ ಜೈನ ಭವನದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ಧವಳ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಅರ್ಹಂತಗಿರಿ, ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಕಂಬದಹಳ್ಳಿ, ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀ ಕ್ಷೇತ್ರ ಆರತಿಪುರ ಇವರುಗಳ ಸಾನಿಧ್ಯದಲ್ಲಿ ಜರುಗಲಿದೆ ಕಳಸ ವಿಸರ್ಜನೆ ಹಾಗೂ ಕಳಸಗಳ ಲಕ್ಕಿ ಡ್ರಾ ಕೂಡ ನಡೆಯಲಿದೆ. ಶ್ರಾವಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಧರ್ಮ ಲಾಭ ಪಡೆದುಕೊಳ್ಳ ಬೇಕಾಗಿ ಕರ್ನಾಟಕ ಜೈನ್ ಅಸೋಸಿಯೇಷನ್ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ ಮತ್ತು ಸಕಲ ಜೈನ ದಿಗಂಬರ ಸಮಾಜ ತ್ಯಾಗಿ ದಿಗಂಬರ ಸಮಾಜ ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ವಿನಂತಿಸಲಾಗಿದೆ. ಹಾಗೂ ಈ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್